HomeFresh Newsಅಕ್ಷಯ್ ಕುಮಾರ್ ಮಗಳಿಗೆ ನಗ್ನ ಬೇಡಿಕೆ|ಆನ್‌ಲೈನ್‌ನಲ್ಲಿ ಬತ್ತಲಾಗಲು ಕೇಳಿದ ಭೂಪ|ನ್ಯೂಡ್ ಚಿತ್ರ ಕೇಳಿದವ ಪೋಲೀಸ್ ಅತಿಥಿ

ಅಕ್ಷಯ್ ಕುಮಾರ್ ಮಗಳಿಗೆ ನಗ್ನ ಬೇಡಿಕೆ|ಆನ್‌ಲೈನ್‌ನಲ್ಲಿ ಬತ್ತಲಾಗಲು ಕೇಳಿದ ಭೂಪ|ನ್ಯೂಡ್ ಚಿತ್ರ ಕೇಳಿದವ ಪೋಲೀಸ್ ಅತಿಥಿ

ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರಮ್ಮಿನಲ್ಲಿ ನಟ ಅಕ್ಷಯಕುಮಾರ್‌ರ ಹದಿಮೂರರ ಪ್ರಾಯದ ಮಗಳಿನ್ನು ನಗ್ನಳಾಗುವಂತೆ ಕಾಡಿದ ತರಲೆಯನ್ನು ಪೋಲೀಸರು ಬಂಧಿಸಿದ್ದಾರೆ.


ಮಹಾರಾಷ್ಟ್ರ ಸೈಬರ್ ಡಿಪಾರ್ಟ್‌ಮೆಂಟ್ ಈ ನಿಟ್ಟಿನಲ್ಲಿ ಮೊದಲ ಯಶಸ್ಸು ಕಂಡಿದ್ದು, ಅಕ್ಷಯ್ ಕುಮಾರ್ ಮಗಳನ್ನು ನಗ್ನಳಾಗಲು ಕೇಳಿದವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

೨೦೨೫ರ ಅಕ್ಟೋಬರ್‌ನಲ್ಲಿ ಪೋಲೀಸು ಮುಖ್ಯ ಕಚೇರಿಯಲ್ಲಿ ನಡೆದ ಸೈಬರ್ ಮುನ್ನೆಚ್ಚರಿಕೆ ಮಾಸಾಚರಣೆಯಲ್ಲಿ ಅಕ್ಷಯ್ ಕುಮಾರ್ ಆನ್‌ಲೈನ್ ಅಪಾಯಗಳ ಬಗೆಗೆ ಮಾತನಾಡಿದ್ದರು. ನನ್ನ ಮಗಳು ಆನ್‌ಲೈನ್ ಆಟ ಆಡುತ್ತಿದ್ದಳು.

ಆಟದ ಬಗೆಗೆ ಉತ್ತಮ ಮಾತನಾಡಿದ ಬಳಿಕ ಹೇಣ್ಣೇ ಗಂಡೇ ಕೇಳಿದ್ದಾರೆ. ಹೆಣ್ಣು ಎಂದಾಗ ನಗ್ನ ಫೋಟೋ ಕಳಿಸಲು ಕೇಳಿದ್ದಾರೆ. ಮಗಳು ಆ ಆಟದ ಲಿಂಕ್ ಕಟ್ ಮಾಡಿದ್ದಾಳೆ ಎಂದು ಅವರು ಹೇಳಿದ್ದರು.

ಬೀದಿ ಅಪರಾಧಕ್ಕಿಂತ ಸೈಬರ್ ಅಪರಾಧ ಜೋರಾಗುತ್ತಿದೆ. ಮುಖ್ಯಮಂತ್ರಿ ಮತ್ತು ಸರಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಳಿದ್ದರು. ಆಮೇಲೆ ಹಲವು ಕಾಲೇಜುಗಳಲ್ಲಿ ಈ ಬಗೆಗೆ ಎಚ್ಚರಿಕೆ ನೀಡಲಾಗಿತ್ತು.

ಹಳೆಯ ಆನ್‌ಲೈನ್ ಗೇಮಿಂಗ್ ಮಾಹಿತಿಗಳನ್ನು ಕಲೆ ಹಾಕಿದ ಸೈಬರ್ ಇಲಾಖೆಯವರು ಈ ಸಂಬಂಧ ಮುಂಬಯಿಯಲ್ಲಿ ಈಗ ಒಬ್ಬನನ್ನು ಬಂಧಿಸಿದ್ದಾರೆ.

ಇದು ದೊಡ್ಡ ಕದೀಮರ ಕೂಟವಾಗಿದೆ ಎಂಬುದು ಸೈಬರ್ ಪೋಲೀಸರ ಅನುಮಾನ ಆ ನಿಟ್ಟಿನಲ್ಲಿ ಬಂಧಿತನ ವಿಚಾರಣೆ ಹಾಗೂ ಹೆಚ್ಚುವರಿ ತನಿಖೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments