HomeFresh Newsಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್ - ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್ – ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಾಣಿಯ ವಿದ್ಯಾನಗರದಲ್ಲಿರುವ ಈ ಶಾಲೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾದ ಸಂಸ್ಥೆ. ಇದೀಗ ಈ ಶಾಲೆಯಲ್ಲಿ ನಾಳೆ ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಟ್ರಸ್ಟ್ನ ಅಧ್ಯಕ್ಷ ಪ್ರಹಲ್ಲಾದ್ ಶೆಟ್ಟಿ ಜೆ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಶಕ್ತಿ ಎಜುಕೇಶನಲ್ ಟ್ರಸ್ಟ್ನ ಸ್ಥಾಪಕ ಡಾ ಕೆಸಿ ನಾಯ್ಕ್, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ ಎಂ ಭಾಗವಹಿಸಲಿದ್ದಾರೆ, ಇನ್ನು ಗಣ್ಯ ಅತಿಥಿಗಳಾಗಿ ಪೆರಾಜೆ ಗ್ರಾ.ಪಂ ಅಧ್ಯಕ್ಷೆ ರೋಹಿಣಿ, ಮಾಣಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ, ಬಂಟ್ವಾಳ ತಾಲೂಕು ಬಿಇಓ ಪಿ ಜ್ಞಾನೇಶ್ ಭಾಗವಹಿಸಲಿದ್ದಾರೆ. ಇನ್ನು ಮಧ್ಯಾಹ್ನ 2ಗಂಟೆಯ ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಗಣ್ಯ ಅತಿಥಿಗಳಾಗಿ ಪೆರಾಜ್ ಪಿಡಿಓ ಸುನೀಲ್ ಕುಮಾರ್, ಬ್ಯಾಂಕ್ ಆಫ್ ಬರೋಡಾದ ಬ್ರ್ಯಾಂಚ್ ಮ್ಯಾನೇಜರ್ ಶ್ಯಾಮ್ ಸ್ವರೂಪ್ ಕೆ. ಹಾಗೂ ಟಿಎಸ್ ಸಚ್ಚಿದಾನಂದ ರೈ ಪಾಳ್ಯ ಭಾಗವಹಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments