HomeFresh Newsಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ ದಡ್ಡಲಕಾಡು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮಾನಂದ...

ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ ದಡ್ಡಲಕಾಡು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮಾನಂದ ಆಯ್ಕೆ

ಬಂಟ್ವಾಳ: ಹಿಂದಿ ಶಿಕ್ಷಕರಿಗೆ ಕೊಡುವ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲ ಕಾಡು ಹಿಂದಿ ಭಾಷಾ ಶಿಕ್ಷಕ ರಮಾನಂದ ಇವರು ಆಯ್ಕೆಯಾಗಿರುತ್ತಾರೆ.

ಹಿಂದಿ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ತಾಲೂಕು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳಾಗಿ, ಹಿಂದಿ ಸಂಪನ್ಮೂಲ ಕ್ರೋಡಿಕರಣ ಹಾಗೂ ಪುಸ್ತಕ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಪ್ರಮಾಣಿಕ ಪ್ರಯತ್ನ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಂದ ಪ್ರಾಮಾಣಿಕ ಗೌರವವಾಗಿದೆ. 2021 – 22 ರಲ್ಲಿ ಇವರಿಗೆ ಸ್ವಸ್ತಿಶ್ರೀ ಪ್ರಶಸ್ತಿ, ಶ್ಯಾಮರಾವ್ ಮೆಮೋರಿಯಲ್ ಉತ್ತಮ ಶಿಕ್ಷಕ ಪ್ರಶಸ್ತಿ, ಗುರು ಶ್ರೇಷ್ಠ ರಾಜ್ಯ ಪ್ರಶಸ್ತಿ ಬಂದಿರುತ್ತದೆ.

ಸೆ.29ರಂದು ವಿಜಯಪುರದಲ್ಲಿ ನಡೆಯು ವ ರಾಜ್ಯ ಹಿಂದಿ ಶಿಕ್ಷಕರ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಇಲಾಖಾ ಉನ್ನತ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಸಚಿವರ ಮತ್ತು ಶಾಸಕರ ಗಣ್ಯ ಉಪಸ್ತಿತಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷರ ಸಂಘ ಬೆಂಗಳೂರು ದಕ್ಷಿಣ ಕನ್ನಡ ಘಟಕದ ಅಧ್ಯಕ್ಷೆ ಗೀತಾ ಕುಮಾರಿ ತಿಳಿಸಿರುತ್ತಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments