ನೆಪೆಲಿಯಂ ಲೆಪ್ಪೆಸಿಯಂ ಎಂಬ ರಾಂಬುಟಾನ್ ಹಣ್ಣು ಜಾಗತಿಕವಾಗಿ ಅರ್ಧಕ್ಕರ್ಧ ಇಂಡೋನೇಶಿಯಾದಲ್ಲಿ ಬೆಳೆಯುತ್ತಿತ್ತು; ಆ ಸ್ಥಾನವನ್ನು ಈಗ ತಾಯ್‍ಲ್ಯಾಂಡ್ ಕಸಿದುಕೊಂಡಿದೆ.ರಾಂಬುಟಾನ್ ಮೂಲ ಕೊಂಗಣ ಎಂದರೆ ಆಗ್ನೇಯ ಏಶಿಯಾ. ಅರಬ್ ವ್ಯಾಪಾರಿಗಳು ನಡುಗಾಲದಲ್ಲಿ ಇದನ್ನು ಆಫ್ರಿಕಾದ ಜಾಂಜಿಬಾರ್ ಮೊದಲಾದ ಕಡೆಗೆ ಒಯ್ದರು. ಕಳೆದ ಶತಮಾನದಲ್ಲಿ ನಡುವಣ ಅಮೆರಿಕದ ದೇಶಗಳಿಗೆ ಈ
ಉತ್ತರ ಪ್ರದೇಶ ರಾಜ್ಯದ ಬಹರೀಕ್‍ನ ದಾಕಿಯಾ ಗ್ರಾಮದಲ್ಲಿ ಹುಡುಗನೊಬ್ಬನನ್ನು ಹಿಡಿದ ಮೊಸಳೆಯ ಜೊತೆಗೆ ಹೋರಾಡಿ ಮಹಿಳೆಯೊಬ್ಬಳು ಮಗನನ್ನು ರಕ್ಷಿಸಿಕೊಂಡ ಸಾಹಸಗಾತೆ ನಡೆದಿದೆ.ದಾಕಿಯಾ ಗ್ರಾಮದ ವೀರೂ ಎಂಬ ಬಾಲಕನು ಕಾಲುವೆಯ ಪಕ್ಕದಲ್ಲಿ ಆಟವಾಡುತ್ತಿದ್ದ. ಆಗ ಹಾರಿ ಬಂದ ಮೊಸಳೆಯೊಂದು ಐದರ ಆ ಹುಡುಗನ್ನು ಲಬಕ್ಕ ಹಿಡಿದು ನೀರಿಗೆ ಎಳೆಯಿತು. ಹುಡುಗ ಕೂಗಿಕೊಂಡಾಗ ತಾಯಿ ಮಾಯಾ ಓಡಿ ಬಂದಿದ್ದಾಳೆ. ಏಳು ಅಡಿ ಉದ್ದದ ಮೊಸಳೆಯನ್ನ ಹಿಡಿದು ಗುದ್ದಿದ ಮಹಿಳೆ ಮಾಯಾ ಅದರ
ಶಾಸಕರೊಬ್ಬರು ತನಗೆ ಪೋಲಿ ಸಂದೇಶ ಕಳುಹಿಸಿದ್ದಾರೆಂದು ಮಲಯಾಳಂ ನಟಿ ರಿನಿ ಜಾರ್ಜ್ ಅವರು ಆನ್‍ಲೈನ್ ಸಂದರ್ಶನದಲ್ಲಿ ಮಾಡಿರುವ ಆರೋಪ ವೈರಲ್ ಆಗಿದೆ; ಬಿಜೆಪಿಯು ಕಾಂಗ್ರೆಸ್‍ನತ್ತ ಬೊಟ್ಟು ಮಾಡಿದೆ.ರಿನಿ ಜಾರ್ಜ್ ಅವರ ವೈರಲ್ ಆಗಿರುವ ಆನ್‍ಲೈನ್ ಇಂಟರ್‍ವ್ಯೂ ಪ್ರಕಾರ ಆ ಶಾಸಕ, ತಾರಾ ಹೋಟೆಲಿನಲ್ಲಿ ರೂಮ್ ಕಾದಿರಿಸಿ ಕಾಯುವೆ, ಬರಬೇಕು ಎಂದು ಹೇಳಿರುವುದಾಗಿಯೂ ವಿವರಿಸಲಾಗಿದೆ. ರಿನಿ ಜಾರ್ಜ್ ಆ ಶಾಸಕರ ಹೆಸರು ಇಲ್ಲವೇ ಯಾವ ಪಕ್ಷಕ್ಕೆ ಸೇರಿದವರು ಎಂದು ಹೇಳಲು
ಕರ್ನಾಟಕದ ಹಾಸನ ಜಿಲ್ಲೆಯ ಚಂದನಹಳ್ಳಿಯಲ್ಲಿ ವಿವಾಹಿತನೊಬ್ಬನು ಮಹಿಳೆಯೊಬ್ಬಳ ಸಂಗ ಬಯಸಿದ್ದು, ಆಕೆ ನಿರಾಕರಿಸಿದಳೆಂದು ಕೆರೆಗೆ ವಾಹನ ನುಗ್ಗಿಸಿ ಆಕೆಯನ್ನು ಸಾಯಿಸಿರುವುದು ತಿಳಿದು ಬಂದಿದೆ.ಆರೋಪಿ ರವಿ ಮದುವೆಯಾಗಿರುವ ವ್ಯಕ್ತಿ. ಆತ ಬಯಸಿ ಆತನಿಂದ ಸಾವು ಕಂಡವಳು ತಿಳಿದವಳೇ ಆದ 32ರ ಶ್ವೇತಾ. ಗಂಡನಿಂದ ಬೇರಾಗಿರುವ ಶ್ವೇತಾ ತನ್ನ ಹೆತ್ತವರೊಂದಿಗೆ ಬದುಕುತ್ತಿದ್ದಳು. ಕಳೆದ ಕೆಲವು ತಿಂಗಳುಗಳಿಂದ ರವಿ ಆಕೆಯ ಬೆನ್ನು ಹತ್ತಿದ್ದ. ನನ್ನ ಲಿವಿಂಗ್ ಸಂಗಾತಿಯಾಗು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಇದರ ಜನ ಮಂಗಳ ಕಾರ್ಯಕ್ರಮ ದಡಿಯಲ್ಲಿ ಕಡಂದಲೆ ಗ್ರಾಮದ ವಿಕಲಚೇತನ ಕೀರ್ತಿಕಾ ಅವರಿಗೆ ವಾಟರ್ ಬೆಡ್ ನ್ನು ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ವಿತರಿಸಿದರು.ಒಕ್ಕೂಟದ ಪದಾಧಿಕಾರಿ ಸುಶೀಲ ಹಾಗೂ ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ಹಾಗೂ ಸೇವಾಪ್ರತಿನಿಧಿ ವಸಂತಿ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು
ಭಾರತದಲ್ಲಿ ಪ್ರತಿ ವರುಷ ಆನ್‍ಲೈನ್ ಗೇಮ್ ಆಡಿ 45 ಕೋಟಿ ಭಾರತೀಯರು 20,000 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕಳೆದೊಂದು ದಶಕದಿಂದ ಭಾರತದಲ್ಲಿ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈಗ ಕಾನೂನು ಮೂಲಕ ಆನ್‍ಲೈನ್ ಗೇಮಿಂಗ್ ತಡೆಯಲು ನಿಯಮಾವಳಿ ತರಲಾಗುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬೆಳೆದಿದ್ದು, ಹಲವರು ಸಾಲಗಾರರಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ತಾಳಲಾಗದೆ ಆತ್ಮಹತ್ಯೆ
ಶಾಂತ ಮಹಾಸಾಗರದ ನವುರು ದೇಶವು ಅಧಿಕೃತ ರಾಜಧಾನಿ ನಗರ ಹೊಂದಿಲ್ಲ; ಯೇರೆನ್ ಜಿಲ್ಲೆಯಿಂದ ಆಡಳಿತ ನಡೆಸಲಾಗುತ್ತದೆ. 21 ಚದರ ಕಿಲೋಮೀಟರ್ ವಿಸ್ತೀರ್ಣದ ನವುರು ದೇಶವು ಜಗತ್ತಿನ ಮೂರನೆಯ ಅತಿ ಪುಟ್ಟ ದೇಶವಾಗಿದೆ. ಜನಸಂಖ್ಯೆ ರೀತಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಈ ದೇಶದಲ್ಲಿ 12,000 ಜನರು ಇದ್ದಾರೆ. ಸರಕಾರಿ ಕಚೇರಿಗಳು, ಅಧ್ಯಕ್ಷರ ನಿವಾಸ, ಸಂಸತ್ತು ಎಲ್ಲವೂ ಯೇರೆನ್ ಜಿಲ್ಲೆಯಲ್ಲಿ ಇದ್ದು, ಅದು ಆಡಳಿತ ಕೇಂದ್ರ ಎನಿಸಿದೆ. ಈ ಪುಟ್ಟ ದ್ವೀಪ ದೇಶವನ್ನು ಹಿಂದೆ
ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ವಾಸವಾಗಿರುವ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ವರದಿಯಾಗಿದೆ.ಅರಂಬೂರಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಹಲ್ಲೆಗೊಳಗಾದ ಯುವಕ. ರಾತ್ರಿ ಗಂಟೆ 9.30 ರ ವೇಳೆಗೆ ಆರಂಬೂರಿನಲ್ಲಿರುವ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಏಕಾಏಕಿಯಾಗಿ ಬಂದು ತಲ್ವಾರು ಮತ್ತು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ತಲೆಯ ಭಾಗಕ್ಕೆ ಏಟಾಗಿದ್ದು ಪುನೀತ್
ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದೇರಳಕಟ್ಟೆ ಪರಿಸರದ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ದಿನಾಂಕ: 29-03-2025 ರಂದು ರಾತ್ರಿ ಸಮಯ ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಹೂಟರ್ ನ ಕೇಬಲ್
ದಿಲ್ಲಿಯ ಮಖ್ಯಮಂತ್ರಿ ಮನೆ ಕಚೇರಿ ಬಳಿ ಕೂಟವೊಂದರ ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಾತನಾಡುವಾಗ ಅಪರಿಚಿತನೊಬ್ಬನು ನುಗ್ಗಿ ಬಂದು ಅವರ ಕೆನ್ನೆಗೆ ಹೊಡೆದಿದ್ದಾನೆ.ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಜನ್ ಸುನ್‌ವಯ್ ಎಂಬ ಜನರ ಅಹವಾಲು ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎಂದಿರುವ ದಿಲ್ಲಿ ಬಿಜೆಪಿ ಘಟಕವು ಘಟನೆಯನ್ನು ಖಂಡಿಸಿದೆ. ನುಗ್ಗಿದ ವ್ಯಕ್ತಿಯು ಮುಖ್ಯಮಂತ್ರಿಯ ಕೂದಲು ಎಳೆದು, ಕೆನ್ನೆಗೆ ಒಂದು ಬಾರಿಸಿ ತೂರಿ ಹೋದುದಾಗಿ ಹೇಳಲಾಗಿದೆ. ಈ