HomeFresh Newsನಟಿಗೆ ಶಾಸಕರೊಬ್ಬರಿಂದ ಕೆಟ್ಟ ಸಂದೇಶ ಮಲಯಾಳಂ ನಟಿ ರಿನಿ ಜಾರ್ಜ್ ದೂರುಕಾಂಗ್ರೆಸ್ಸನ್ನು ಗುರಿ ಮಾಡಿ ದೂರಿದ...

ನಟಿಗೆ ಶಾಸಕರೊಬ್ಬರಿಂದ ಕೆಟ್ಟ ಸಂದೇಶ ಮಲಯಾಳಂ ನಟಿ ರಿನಿ ಜಾರ್ಜ್ ದೂರುಕಾಂಗ್ರೆಸ್ಸನ್ನು ಗುರಿ ಮಾಡಿ ದೂರಿದ ಬಿಜೆಪಿ

ಶಾಸಕರೊಬ್ಬರು ತನಗೆ ಪೋಲಿ ಸಂದೇಶ ಕಳುಹಿಸಿದ್ದಾರೆಂದು ಮಲಯಾಳಂ ನಟಿ ರಿನಿ ಜಾರ್ಜ್ ಅವರು ಆನ್‍ಲೈನ್ ಸಂದರ್ಶನದಲ್ಲಿ ಮಾಡಿರುವ ಆರೋಪ ವೈರಲ್ ಆಗಿದೆ; ಬಿಜೆಪಿಯು ಕಾಂಗ್ರೆಸ್‍ನತ್ತ ಬೊಟ್ಟು ಮಾಡಿದೆ.ರಿನಿ ಜಾರ್ಜ್ ಅವರ ವೈರಲ್ ಆಗಿರುವ ಆನ್‍ಲೈನ್ ಇಂಟರ್‍ವ್ಯೂ ಪ್ರಕಾರ ಆ ಶಾಸಕ, ತಾರಾ ಹೋಟೆಲಿನಲ್ಲಿ ರೂಮ್ ಕಾದಿರಿಸಿ ಕಾಯುವೆ, ಬರಬೇಕು ಎಂದು ಹೇಳಿರುವುದಾಗಿಯೂ ವಿವರಿಸಲಾಗಿದೆ.

ರಿನಿ ಜಾರ್ಜ್ ಆ ಶಾಸಕರ ಹೆಸರು ಇಲ್ಲವೇ ಯಾವ ಪಕ್ಷಕ್ಕೆ ಸೇರಿದವರು ಎಂದು ಹೇಳಲು ನಿರಾಕರಿಸಿದ್ದಾರೆ. ಬಿಜೆಪಿಯವರು ಮಾತ್ರ ಅದು ಕಾಂಗ್ರೆಸ್ ಶಾಸಕರಿರಬೇಕು ಎಂದು ಆರೋಪ ತಿರುಗಿಸಿದ್ದಾರೆ.ಕೇರಳ ಶಾಸಕ ರಾಹುಲ್ ಮನ್‍ಕೂಟ್ಟಿಲ್ ಅವರ ಕೆಲಸವಿದು ಎಂಬುದು ಬಿಜೆಪಿ ಆರೋಪ.

ಕೇರಳ ಶಾಸಕ ರಾಹುಲ್ ಮನ್‍ಕೂಟ್ಟಿಲ್ ಅವರ ಕೆಲಸವಿದು ಎಂಬುದು ಬಿಜೆಪಿ ಆರೋಪ. ಅದರ ಮೇಲೆ ಕೆಲವರು ಪಾಲಕ್ಕಾಡ್ ಜಿಲ್ಲೆಯ ಆ ಶಾಸಕರ ಕಚೇರಿ ಎದುರು ಹೋಗಿ ಪ್ರತಿಭಟನೆ ಮಾಡಿದ್ದಾರೆ. ಆ ಶಾಸಕರ ಪರಿಚಯ ಸಾಮಾಜಿಕ ಜಾಲ ತಾಣದಲ್ಲಿ ಆಗಿದೆ; ಆರಂಭದಲ್ಲೇ ಹೀಗೆ ಮಾಡಿದ್ದಾರೆ ಎಂದು ನಟಿ ಹೇಳಿದ್ದಾರೆ. ನ್ಯಾಯಾಂಗದ ಬಗೆಗೆ ನಂಬಿಕೆ ಕಡಿಮೆ ಇರುವುದರಿಂದ ದೂರು ಕೊಟ್ಟಿಲ್ಲ. ಆ ಶಾಸಕರು ನೈತಿಕತೆಯಿಲ್ಲದೆ ಅವರ ಪಕ್ಷದಲ್ಲಿ ಹುದ್ದೆಯಲ್ಲಿದ್ದಾರೆ ಎಂದೂ ನಟಿ ಆರೋಪ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments