HomeFresh Newsಬ್ಯಾಟರಾಯನಪುರದ ಕುವೆಂಪು ನಗರದಲ್ಲಿ ಕೃಷ್ಣ ಭೈರೇಗೌಡರ ಪರ ಮತಯಾಚನೆ

ಬ್ಯಾಟರಾಯನಪುರದ ಕುವೆಂಪು ನಗರದಲ್ಲಿ ಕೃಷ್ಣ ಭೈರೇಗೌಡರ ಪರ ಮತಯಾಚನೆ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತದ ಕುವೆಂಪು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡರ ಪರವಾಗಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಕೃಷ್ಣ ಭೈರೇಗೌಡ ಮಾದರಿ ರಾಜಕಾರಣಿಯಾಗಿದ್ದು, ಕ್ಷೇತ್ರದಲ್ಲಿ ಜನಪರ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ಭೈರೇಗೌಡರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಿನಾಕ್ಷೀ ಕೃಷ್ಣ ಭೈರೇಗೌಡರು, ಮಾಜಿ ಪಾಲಿಕೆ ಸದಸ್ಯ ಪಾರ್ಥಿವ್ ರಾಜನ್, ಪಕ್ಷದ ಹಿರಿಯ ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments