Home ಕರಾವಳಿ Archive by category ಬಂಟ್ವಾಳ (Page 3)

ಬಂಟ್ವಾಳ : ಶಾಲಾ ಮಕ್ಕಳ ಕಿಡ್ನಾಪ್ ಯತ್ನ? : ಸೂಕ್ತ ತನಿಖೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ವತಿಯಿಂದ ಮನವಿ

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ದ.ಕ.ಜಿ.ಪ.ಹಿ.ಪ್ರಾ ಶಾಲೆ ಕುಟ್ಟಿಕಳ ಶಾಲೆಯ ಮಕ್ಕಳನ್ನು ಅಪಹರಣ ಮಾಡಲು ವಿಫಲಯತ್ನ ಮಾಡಿದವರನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ವತಿಯಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮನವಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹಸಂಚಾಲಕ್

ವಿಟ್ಲ ಚಂದಳಿಕೆ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ಶನಿವಾರ ನಡೆಯಿತು. ಎಸ್ ಎಲ್ ವಿ ಬುಕ್ ಕಂಪೆನಿಯ ದಿವಾಕರದಾಸ್ ನೇರ್ಲಾಜೆ ಮಾತನಾಡಿ ಹಿರಿಯ ಶಿಕ್ಷಕರು ಭದ್ರ ಅಡಿಪಾಯ ಇಟ್ಟುಕೊಟ್ಟ ಕಾರಣದಿಂದ ಶಾಲೆಯೂ ಇಂದು ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಿಕ್ಷಕರ,  ಹಳೆ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ  ಅವರನ್ನು

ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ 22ನೇ ವರ್ಷದ ಅಕ್ಷರ ಉತ್ಸವ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ನಡೆಯುವ 22ನೇ ವರ್ಷದ ಸಂಭ್ರಮ “ಅಕ್ಷರ ಉತ್ಸವ” ವು ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಶಾಲಾ ಪೆÇೀಷಕರ ಸಂಘದ ಅಧ್ಯಕ್ಷ ಅರುಣ್ ಐತಾಳ್ ಅಕ್ಷರ ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಾಲಾ ಸಂಚಾಲಕ ಮೋಹನ್ ರೈ.ಕೆ. ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬಿಜೆಪಿ ಯುವ

ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಹೆಸರನ್ನು ಕಳಚುವ ಬಗ್ಗೆ ಮಾಜಿ ಸಚಿವ ರಮನಾಥ ರೈ ನೇತೃತ್ವದಲ್ಲಿ ದೂರು

ಬಂಟ್ವಾಳ: ಮತದಾರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಮತದಾರರ ಹೆಸರನ್ನು ಕಳಚುವ ಬಗ್ಗೆ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಬಂಟ್ವಾಳ ತಹಸೀಲ್ದಾರರಿಗೆ ದೂರು ಸಲ್ಲಿಸಿತು. ಬಳಿಕ ರಮನಾಥ ರೈ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ಆಯೋಗದ ಆದೇಶದಂತೆ ಸ್ಥಳೀಯ ಮಟ್ಟದ ಮತಗಟ್ಟೆಯ ಬಿಎಲ್‍ಓಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ವಿಶ್ವಾಸವಿದೆ. ಆದರೆ ಕಳೆದ

ಯುವ ವಕೀಲನ ಉಪಟಳದಿಂದ ತೊಂದರೆ ಅನುಭವಿಸಿದ್ದೇವೆ : ಬಂಟ್ವಾಳದಲ್ಲಿ ಸುದ್ದಿಗೋಷ್ಟಿ ನಡೆಸಿ ಅಳಲು ತೋಡಿಕೊಂಡ ಭವಾನಿ

ಬಂಟ್ವಾಳ: ಯುವ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದೌಜ್ಯನ್ಯ ನಡೆಸಿದ ಪುಂಜಾಲಕಟ್ಟೆ ಪೆÇಲೀಸರ ಅಮಾನತಿಗೆ ಆಗ್ರಹಿಸಿ ಜಿಲ್ಲಾಯದ್ಯಂತ ವಕೀಲರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ ಯುವ ವಕೀಲನ ಉಪಟಳದಿಂದ ತುಂಬಾ ತೊಂದರೆಯಾಗಿದ್ದು ಮಾನಸಿಕವಾಗಿ ಕುಗ್ಗಿ ಹೋಗಿರುವುದಾಗಿ ದೂರುದಾರ ವಸಂತಗೌಡ ಅವರ ಪತ್ನಿ ಭವಾನಿ ಅಳಲು ತೋಡಿಕೊಂಡಿದ್ದಾರೆ. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ಡಿ. 2ರಂದು ತಾನು ತನ್ನ ಪತಿ ಹಾಗೂ ಕೆಲಸದಾಳು

ಡಿ.10 ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ಅಕ್ಷರ ಉತ್ಸವ ವಾಮದಪದವು

ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ 22ನೇ ವರ್ಷದ ಸಂಭ್ರಮ “ಅಕ್ಷರ ಉತ್ಸವ” ವು ಡಿ.10ರಂದು ಶನಿವಾರ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅಕ್ಷರ ಉತ್ಸವವನ್ನು ಉದ್ಘಾಟಿಸುವರು. ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶಾಲಾ ಸಂಚಾಲಕ ಮೋಹನ್ ರೈ.ಕೆ. ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ರಾಜೇಶ್

ಕಟೀಲು ಮೇಳದ ಚೌಕಿ ಸಹಾಯಕ ನಿಧನ

ಕಟೀಲು ಮೇಳದ ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ 45 ವರ್ಷದ ಅಚ್ಯುತ ನಾಯಕ್ ಅವರು ಹೃದಯ ಘಾತದಿಂದ ನಿಧನರಾದ ಮೇಳದ ಚೌಕಿ ಸಹಾಯರಾಗಿದ್ದಾರೆ. ಕಟೀಲು ಮೇಳದ ಯಕ್ಷಗಾನವು ಪ್ರಸ್ತುತ ಕಾಲಮಿತಿ ಯಕ್ಷಗಾನವಾಗಿದ್ದು, ರಾತ್ರಿ 1 ಗಂಟೆಯ ಸುಮಾರಿಗೆ ಯಕ್ಷಗಾನ ಮುಗಿದು ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಅಚ್ಯುತ ಅವರು ಏಕಾಏಕಿ ಅಸ್ವಸ್ಥತೆಗೊಂಡಿದ್ದಾರೆ ಎನ್ನಲಾಗಿದೆ. ಆಗ ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು

ವಾಮದಪದವು : ಮಕ್ಕಳಿಗೆ, ಯುವಕರಿಗೆ ಅಡಿಕೆ ಸಿಪ್ಪೆ ಸುಲಿಯುವ ತರಬೇತಿ

ಕೃಷಿ ಕಸುಬುಗಳ ಕೌಶಲ್ಯವನ್ನು ಕಲಿಯುವ ಮೂಲಕ ಗ್ರಾಮೀಣ ಭಾಗದ ಯುವಜನತೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎನ್ನುವ ಸದುದ್ಧೇಶದಿಂದ ಅಡಿಕೆ ಸಿಪ್ಪೆ ಸುಲಿಯುವ ವಿನೂತನ ತರಬೇತಿ ಕಾರ್ಯಕ್ರಮವೊಂದು ವಾಮದಪದವು ಸಮೀಪದ ಮಾವಿನಕಟ್ಟೆಯಲ್ಲಿ ನಡೆಯಿತು. ಹಲವು ವರ್ಷದಿಂದ ಪಕ್ಷಿಗಳ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನವನ್ನು ನಡೆಸಿಕೊಂಡು ಬಂದಿರುವ ಗುಬ್ಬಚ್ಚಿ ಗೂಡು ಬಳಗ ಈ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು ಕೃಷಿಕರ ಮೆಚ್ಚುಗೆಗೆ

ಬಂಟ್ವಾಳ : ಉದಯೋನ್ಮುಖ ಚಿತ್ರಕಲಾವಿದ ಶಶಾಂಕ್

ಬಂಟ್ವಾಳ: ಕಲಾವಿದರಿಗೆ ಸೂಕ್ತ ಅವಕಾಶ ಹಾಗೂ ಪ್ರೊತ್ಸಾಹಗಳು ಸಿಕ್ಕಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ಬಂಟ್ವಾಳದ ಉದಯೋನ್ಮುಖ ಚಿತ್ರಕಲಾವಿದನೋರ್ವನಿಗೆ ಆತನ ಚಿತ್ರಕಲಾ ಶಿಕ್ಷಕರು ನೀಡಿದ ಪ್ರೋತ್ಸಾಹ ಹಾಗೂ ಹಿತೈಷಿಗಳು ನೀಡಿದ ಅವಕಾಶದಿಂದ ಇಂದು ಯಶಸ್ವಿ ಚಿತ್ರಕಲಾಕಾರನಾಗಿ ಮೂಡಿ ಬರುತಿದ್ದಾನೆ. ತಾಲೂಕಿನ ಪಾಣಮಂಗಳೂರಿನಲ್ಲಿರುವ ನವರಂಗ್ ಸ್ಮರಣಿಕ ಕೇಂದ್ರ ಹಾಗೂ ಅಲ್ಲೇ ಪಕ್ಕದಲ್ಲಿರುವ ಪೋನಸ್ ಹಲಸಿನ ಅಂಗಡಿಗೆ ಭೇಟಿ ನೀಡಿದಾಗ ಅದರ ಗೋಡೆಗಳಲ್ಲಿ

ಕತಾರ್: ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ತುಳುನಾಡಿನ ಮಹಿಳೆ ಆಯ್ಕೆ.

ಬಂಟ್ವಾಳ: ಕತಾರ್ ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು. ಈ ಮೂಲಕ ಇವರು ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ