ವಿಟ್ಲ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ. ಈ ಘಟನೆ ಕೊಳ್ನಾಡು ಗ್ರಾಮ ಕಟ್ಟೆ ಮನೆ ನಿವಾಸಿ ಕೆ.ಎಂ ಮಹಮ್ಮದ್(60) ಎನ್ನುವವರ ಮನೆಯಲ್ಲಿ ನಡೆದಿದ್ದು, ಮನೆಗೆ ನಗ್ಗಿದ ಕಳ್ಳರು ಸುಮಾರು 5 ಪವನ್ ತೂಕದ ನಕ್ಲೇಸ್-01, ಸುಮಾರು 1 ಪವನ್
ಬಂಟ್ವಾಳ: ಖ್ಯಾತ ಕಬಡ್ಡಿ ಆಟಗಾರ ಉದಯ ಚೌಟ ಅನಾರೋಗ್ಯದಿಂದಾಗಿ ಮೇ.21 ರಂದು ನಿಧನರಾದರು.ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಒಬ್ಬರಾದ ಉದಯ ಚೌಟರವರು ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆ ನಿವಾಸಿ. 2007ರ ದ್ವಿತೀಯ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವ ತಂಡದಲ್ಲಿ ‘ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು.ಪ್ರಸಕ್ತ ಬ್ಯಾಂಕ್ ಆಫ್ ಬರೋಡದ ಸುರತ್ಕಲ್ ಕಚೇರಿಯಲ್ಲಿ ಉಪ ಪ್ರಬಂಧಕರಾಗಿರುವ ಉದಯ ಚೌಟ, ಕ್ರೀಡಾ ಕೋಟದಲ್ಲಿ 8 ತಿಂಗಳ ಕಾಲ
ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಎಸ್ ವಿ ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು , ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು . ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು , ಇತ್ತಿಚೆಗೆ ಅವರ ಬಂಧನ ಕೂಡ ಆಗಿತ್ತು , ಜಾಮೀನಿನಲ್ಲಿ ಬಿಡುಗಡೆಯಾಗಿರುವ ಸಂಚಾಲಕರು ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ
ಬಂಟ್ವಾಳ: ಇತ್ತೀಚೆಗೆ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಮೇಲ್ಭಾಗದಿಂದ ಬೃಹತ್ ಬಂಡೆಕಲ್ಲೊಂದು ಉರುಳಿ ಬಿದ್ದ ಘಟನೆ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಮಣ್ಣು ಮೆದುಗೊಂಡು ಬೃಹತ್ ಬಂಡೆ ಕೆಳಭಾಗಕ್ಕೆ ಉರುಳಿ ಬಿದ್ದಿದ್ದು ಇಲ್ಲಿನ
ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಅಂದಾಜು 10 ಕೋಟಿ ರೂ.ವೆಚ್ಚದಲ್ಲಿ 18 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ವಾಗಲಿದೆ, ಶೀಘ್ರವಾಗಿ ಕಾಮಗಾರಿ ಆರಂಭಿಸುವುದಾಗಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಭೇಟಿ ನೀಡಿ ನೀಲನಕಾಶೆಯನ್ನು ಪರಿಶೀಲನೆ ನಡೆಸಿದ ಬಳಿಕ
ಬಂಟ್ವಾಳ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೇವಸ್ಥಾನದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅನ್ನಛತ್ರ ಕಟ್ಟಡ ದ ಶಿಲಾನ್ಯಾಸ ವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಪಣೋಲಿಬೈಲು ಕ್ಷೇತ್ರದ ಭಕ್ತರಿಗೆ ಅನ್ನಪ್ರಸಾದ ನೀಡುವ ಹಲವು ವರ್ಷಗಳ ಯೋಜನೆಯನ್ನು ಸಾಹಕಾರಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಸುಮಾರು 1 ಕೋಟಿ ರೂ ವೆಚ್ಚದ ಅನ್ನಛತ್ರಕ್ಕೆ ಶಿಲಾನ್ಯಾಸ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ವಿರುದ್ದಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪುರಸಭಾ ವ್ಯಾಪ್ತಿಯ 27 ಕಡೆಗಳಲ್ಲಿ ಸಿಸಿ ಕ್ಯಾಮಾರಗಳನ್ನು ಹಾಕಲಾಗಿದೆಯಾದರೂ ಸಿಸಿ ಕ್ಯಾಮಾರದ ಅಡಿಭಾಗದಲ್ಲೇ ಈಗಲೂ ಕಸ ರಾಶಿ ಬೀಳುತ್ತಿರುವ ಬಗ್ಗೆ ಪುರಸಭಾ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡು ಸಿಸಿ ಕ್ಯಾಮರದ
ಬಂಟ್ವಾಳ: ರಾಜ್ಯದಲ್ಲಿ ನಿರಂತರವಾಗಿ ಹಾಗೂ ಗುಣಮಟ್ಟದ ವಿದ್ಯುತ್ ನೀಡಬೇಕು ಎಂಬ ಆದ್ಯತೆಯಲ್ಲಿ ಸರಬರಾಜಿನಲ್ಲಿ ಎಲ್ಲಿ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಸಬ್ ಸ್ಟೇಷನ್ ಗಳನ್ನು ಹೆಚ್ಚು ಹೆಚ್ಚು ನಿರ್ಮಾಣ ಮಾಡುತ್ತಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ಬಂಟ್ವಾಳದ ವಿದ್ಯಾಗಿರಿಯ ಅರ್ಬಿಗುಡ್ಡೆ ಎಂಬಲ್ಲಿ 33/11 ಕೆ.ವಿ. ಗ್ಯಾಸ್ ಇನ್ಸುಲೇಟಡ್ ವಿದ್ಯುತ್
ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಬಂಟ್ವಾಳ ಲೋಕಕಲ್ಯಾಣಾರ್ಥವಾಗಿ ವಿಶ್ವಕರ್ಮ ಯಜ್ಞ ಮತ್ತು ಬಂಟ್ವಾಳ ತಾಲೂಕಿನ ಅಮ್ಮಾಡಿ ಗ್ರಾಮದ ಅಜಕಲ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಶ್ವಕರ್ಮ ಸಭಾಭವನ ಉದ್ಘಾಟನಾ ಕಾರ್ಯಕ್ರಮಗಳು ಮೇ.20ರಿಂದ ಆರಂಭಗೊಂಡು ಮೇ 22ರವರೆಗೆ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ತಿಳಿಸಿದರು. ಅವರು ಬಂಟ್ವಾಳ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.