Home ಕರಾವಳಿ Archive by category ಮಂಗಳೂರು (Page 114)

ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಗೃಹ ಸಚಿವರ ಮಾರಕ ಹೇಳಿಕೆ ಆರೋಪ

ಪುತ್ತೂರು: ವಿಧಾನಸಭೆಯ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಅಡಿಕೆ ಬೀದಿ ಪಾಲಾಗುತ್ತದೆ ಎಂಬ ಮಾರಕ ಹೇಳಿಕೆ ನೀಡಿ ಬೆಳೆಗಾರರನ್ನು ಸಂದಿಗ್ಧ ಪರಿಸ್ಥಿತಿಗೆ ತಂದೊಡ್ಡಿದ್ದಾರೆಂದು ಆರೋಪಿಸಿದಲ್ಲದೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತತ್‍ಕ್ಷಣವೆ ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು

ಕಿನ್ನಿಗೋಳಿ : ಶಾಲಾ ಬಾಲಕನಿಗೆ ಬಸ್ ಢಿಕ್ಕಿ, ಬಾಲಕ ಸ್ಥಳದಲ್ಲೇ ಮೃತ್ಯು

ಶಾಲಾ ಬಾಲಕನಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕಟೀಲು ಹೆದ್ದಾರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಚರಣ್ (15) ಗುರುತಿಸಲಾಗಿದೆ. ಚರಣ್ ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಚರಣ್ ಸ್ಧಳದಲ್ಲಿಯೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಸ್ಧಳಕ್ಕೆ

ಜನಾರ್ದನ ಪೂಜಾರಿ ಅವರಿಂದ ಡೊಂಗರಕೇರಿಯ ವೆಂಕಟ್ರಮಣ ದೇವಾಲಯಕ್ಕೆ ಭೇಟಿ

ವೈಕುಂಟ ಏಕಾದಶಿಯ ಪ್ರಯುಕ್ತ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿಯವರು ಇಂದು ಮಂಗಳೂರಿನ ಡೊಂಗರಕೇರಿಯ ಶ್ರೀ ವೆಂಕಟ್ರಮಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕ್ಷೇತ್ರದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಪೂಜೆಯ ಬಳಿಕ ಜನಾರ್ದನ ಪೂಜಾರಿಯವರನ್ನು ಸನ್ಮಾನಿಸಿದರು ಈ ವೇಳೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ಜನಾರ್ದನ ಪೂಜಾರಿಯವರ ಜೊತೆಗಿದ್ದರು

ಶ್ರೀಕುರು ಅಂಬಾ ಅಯ್ಯಪ್ಪ ಭಕ್ತ ವೃಂದ : 18ನೇ ವರ್ಷದ ಶಬರಿಮಲೆ ಯಾತ್ರೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಕೋಡಿಕಲ್‍ನ ಕಲ್ಬಾವಿ ಬನದ ಶ್ರೀ ಶ್ರೀಕುರು ಅಂಬಾ ಅಯ್ಯಪ್ಪ ಭಕ್ತವೃಂದದ 18ನೇ ವರ್ಷದ ಶಬರಿಮಾಲೆ ಯಾತ್ರೆಯ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಹಾಗೂ ಅಪ್ಪಸೇವೆ ಮತ್ತು ಕೆಂಡಸೇವೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಮೂಡಬಿದ್ರಿ ಶ್ರೀ ಅಯ್ಯಪ್ಪ ದೇವಸ್ಥಾನದ ಪ್ರಧಾನ ಆರ್ಚಕರಾದ ಗುರುಸ್ವಾಮಿ ಶಿವಾನಂದ ಶಾಂತಿ ಇವರ ದಿವ್ಯ ಹಸ್ತದಿಂದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇನ್ನು ಈ ಪ್ರಯುಕ್ತ ಗಣಹೋಮ, ಭಜನಾ ಕಾರ್ಯಕ್ರಮ, ಪ್ರತಿಷ್ಠೆ, ಉಷಾ

“ಸ್ಮಾರ್ಟ್ & ಡಿಜಿಟಲ್ ಸುರತ್ಕಲ್”ಗೆ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರಿಂದ ಚಾಲನೆ

ಸುರತ್ಕಲ್: ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣವನ್ನು ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮುಂಭಾಗ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.ಈ ವೇಳೆ ಮಾತಾಡಿದ ಶಾಸಕರು, “ಸ್ಮಾರ್ಟ್ ಆಂಡ್ ಡಿಜಿಟಲ್ ಸುರತ್ಕಲ್” ಯೋಜನೆಯಡಿಯಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ರಾಜ್ಯದಲ್ಲೇ ಪ್ರಥಮವಾಗಿ ಸರ್ವ ರೀತಿಯಲ್ಲೂ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ಶುದ್ಧ ಕುಡಿಯುವ

ನವಮಿ ಡಾಟ್ ಕಾಮ್‍ನಿಂದ ವೈದ್ಯಕೀಯ ನೆರವಿಗಾಗಿ ಕ್ರಿಕೆಟ್ ಪಂದ್ಯಾಟ

ಆರೋಗ್ಯ ಪೀಡಿತರಿಗೆ ಅರವಾಗುವುದು, ಪ್ರತಿ ಮಗುವಿಗೂ ಶಿಕ್ಷಣ ಒದಗಿಸುವ ಒತ್ತಾಸೆ ಹಾಗೂ ಕ್ರೀಡೆಯ ಮೂಲಕ ಸದೃಢ ಸಮಾಜದ ನಿರ್ಮಾಣದ ಗುರಿಯೊಂದಿಗೆ ಕೊಡೇರಿಯ ನವಮಿ ಡಾಟ್ ಕಾಮ್ ನಿಂದ 4ನೇ ಬಾರಿಗೆ ಕೊಡೇರಿಯ ವೈಸಿಸಿ ಕ್ರೀಡಾಂಗಣದಲ್ಲಿ ಐಪಿಎಲ್ಪಿ ಮಾದರಿಯ ಕೊಡೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಹೊಸವರ್ಷದ ಮೊದಲ ದಿನ ನಡೆಯಿತು.ಕ್ಲಾಸಿಕ್ ಕ್ರಿಕೆಟರ್ಸ್ ವಿನ್ನರ್ ಹಾಗೂ ಎಂಡ್ ಪಾಯಿಂಟ್ ಕ್ರಿಕೆಟರ್ಸ್ ರನ್ನರ್ಸ್ ಆಗಿ ಹೊರ ಹೊಮ್ಮಿದರು. ಬೈಂದೂರು ತಾಲೂಕು ಬಿಜೆಪಿ

ವಿಧಾನಸಭೆ ಚುನಾವಣೆಯಲ್ಲಿ ನಾನಾಗಲಿ, ಮಗ ಹರ್ಷ ಮೊಯ್ಲಿ ಸ್ಪರ್ಧಿಸುವುದಿಲ್ಲ : ಡಾ. ಎಂ. ವೀರಪ್ಪ ಮೊಯ್ಲಿ ಸ್ಪಷ್ಟನೆ

ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದ ನಾನಾಗಲಿ, ನನ್ನ ಮಗ ಹರ್ಷ ಮೊಯ್ಲಿ ಅವರೂ ಸ್ಪರ್ಧಿಸುವುದಿಲ್ಲ. ಪಕ್ಷದ ಒಳ್ಳೆಯ ಕಾರ್ಯಕರ್ತರಿಗೆ ಸೀಟ್ ನೀಡಲಾಗುತ್ತದೆ. ಈ ಚುನಾವಣೆಯಲ್ಲಿ ಹರ್ಷ ಮೊಯ್ಲಿ ಅವರು ಕಾರ್ಕಳ ಮಾತ್ರವಲ್ಲ, ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ

6 ನೇ ತರಗತಿಯ ವಿದ್ಯಾರ್ಥಿ ಮೇಲೆ ಪೊಲೀಸ್ ಲಾಠಿಚಾರ್ಜ್

ನಗರದ ತಣ್ಣೀರಬಾವಿ ಬೀಚ್ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಪೆÇಲೀಸರು ಲಾಠಿ ಚಾರ್ಜ್ ಮಾಡಿ ಘಟನೆ ನಡೆದಿದ್ದು, ” ಪೊಲೀಸರ ಅತಿರೇಕದ ವರ್ತನೆ” ಎಂದು ಸ್ಥಳೀಯರು ಕಿಡಿಕಾರಿದ ಘಟನೆ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿ ಮತ್ತು ಪಿಯು ವಿದ್ಯಾರ್ಥಿಗಳ ಮೇಲೆ ಕೂಡಾ ಪೊಲೀಸರು ಲಾಠಿ ಬೀಸಿರುವುದು ಕಂಡು ಸ್ಥಳೀಯರು ಗರಂ ಆಗಿದ್ದು ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ. ವಿಕೇಂಡ್ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ

ಬೀಚ್ ಕ್ಲೀನ್ ನಿಂಗ್ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆಯಾಮಗಳಲ್ಲಿ ಒಂದಾದ ಸ್ಟೂಡೆಂಟ್ಸ್ ಫಾರ್ ಡೆವೆಲಪ್ ಮೆಂಟ್ (SFD) ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಬೀಚ್ ಕ್ಲೀನ್ ನಿಂಗ್ ಕಾರ್ಯಕ್ರಮ ಮಂಗಳೂರಿನ ತಣ್ಣಿರ್ ಬಾವಿ ಬೀಚ್ ನಲ್ಲಿ 01/01/2023 ಆದಿತ್ಯವಾರ ದಂದು ನಡೆಯಿತು. ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು .ಕಾರ್ಯಕ್ರಮದಲ್ಲಿ SFD ಮಂಗಳೂರು ವಿಭಾಗ ಸಂಚಾಲಕರಾದ ನಿಶಾನ್ ಆಳ್ವ ಕಾವೂರು, ಎಬಿವಿಪಿ ಮಂಗಳೂರು ತಾಲೂಕು

ಬಿಎಸ್‍ಎಫ್ ಯೋದ ಹೃದಯಾಘಾತದಿಂದ ಮೃತ

ಮಂಗಳೂರು: ರಜೆಯಲ್ಲಿ ಊರಿಗೆ ಬಂದಿದ್ದ ಬಿಎಸ್‍ಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಲಶೇಖರ ಉಮಿಕಾನ ನಿವಾಸಿ, ಬಿಎಸ್‍ಎಫ್ ಯೋಧ ಹರೀಶ್ ಕುಮಾರ್ (43) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹರೀಶ್ ಕುಮಾರ್ ಅವರು ಕಳೆದ 21 ವರ್ಷಗಳಿಂದ ಅವರು ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಗಾಗಿ ಊರಿಗೆ ಬಂದಿದ್ದ ಡಿ. 31 ಹೃದಯಾಘಾತವಾಗಿದ್ದು, ಆಸ್ಪತ್ರೆ