ದೈವಾರಾಧನೆ ಪ್ರದರ್ಶನದ ವಸ್ತುವಲ್ಲ : ಶಿಕ್ಷಣ ಇಲಾಖೆಯ ವಿರುದ್ಧ ಶಾಸಕ ಸುನಿಲ್ ಕುಮಾರ್ ಗರಂ
ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವ ಶಿಕ್ಷಣ ಇಲಾಖೆಯ ವಿರುದ್ಧ ಶಾಸಕ ಸುನೀಲ್ ಕುಮಾರ್ ಗರಂ ಆಗಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದ ಶಾಸಕರು, ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ದೈವಾರಾಧನೆ ಪ್ರದರ್ಶನದ ವಸ್ತುವಲ್ಲ. ಶಿಕ್ಷಣ ಇಲಾಖೆ ಕೂಡಲೇ ತನ್ನ ಆದೇಶದಲ್ಲಿ ಬದಲಾವಣೆ ಮಾಡಿ, ದೈವಾರಾಧನೆ, ಕೋಲ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.