Home ಕರಾವಳಿ Archive by category ಮಂಗಳೂರು (Page 6)

ಮಂಗಳೂರು: ಎಂಸಿಸಿ ಬ್ಯಾಂಕಿನಲ್ಲಿ ಮಹಿಳಾ ದಿನಾಚರಣೆ

ಎಂಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಬ್ಯಾಂಕಿನ ಮಹಿಳಾ ಸಿಬಂದಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೈಟ್ ಡೌವ್ಸ್ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಕೋರಿನ್ ರಸ್ಕಿನ್ಹಾ ಹಾಜರಿದ್ದರು. ಬ್ಯಾಂಕಿನ ನಿರ್ದೇಶಕಿಯರಾದ ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಪ್ಲಾವಿಯ ಡಿಸೋಜ, ಶ್ರೀಮತಿ

ಮಂಗಳೂರು : ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ

ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆಯ ಸಂಭ್ರಮದ ಕಾರ್ಯಕ್ರಮವು ಮರವೂರು ದಿ ಗ್ರ್ಯಾಂಡ್ ಬೇ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿ4 ನ್ಯೂಸ್‌ನ ವರದಿಗಾರ ಶರತ್ ಸಾಲ್ಯಾನ್ ಸೇರಿದಂತೆ 9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿ ತರೆ ಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸಾಧನೆಯನ್ನು

ಮಂಗಳೂರು: ಕ್ಲೌಡ್ ಯೂನಿಸೆಕ್ಸ್ ಶುಭಾರಂಭ

ನಗರದ ಬಳ್ಳಾಲ್‌ಬಾಗ್‌ನಲ್ಲಿರುವ ಲಾಲ್‌ಬಾಗ್ ಟವರ್‍ಸ್‌ನಲ್ಲಿ ನೂತನ ಕ್ಲೌಡ್ ಯೂನಿಸೆಕ್ಸ್ ಶುಭಾರಂಭಗೊಂಡಿತು.ನೂತನ ಸೆಲೂನನ್ನು ಸುಜಾತ ಕಾಮತ್ ಅವರು ಉದ್ಘಾಟಿಸಿದರು.ಇಲ್ಲಿ ಎಲ್ಲಾ ರೀತಿಯ ಹೇರ್ ಟ್ರೀಟ್‌ಮೆಂಟ್, ಸ್ಮೂಥ್‌ನಿಂಗ್, ಸ್ಟ್ರೈಟನಿಂಗ್, ಫೇಶೀಯಲ್, ಪೆಡಿಕ್ಯೂರ್, ವಾಕ್ಸಿಂಗ್, ಬ್ರೈಡಲ್ ಸೇವೆಗಳು ಲಭ್ಯವಿದ್ದು, ಶುಭಾರಂಭದ ಅಂಗವಾಗಿ ಎಲ್ಲಾ ಸರ್ವಿಸ್‌ಗಳ ಮೇಲೆ 20% ರಿಯಾಯಿತಿ ಹಾಗೂ ಕೇವಲ ರೂ. 2999ಗೆ ಕೆರಟಿನ್ ಹಾಗೂ ಸ್ಮೂಥನಿಂಗ್ ಮಾಡಲಾಗುತ್ತದೆ.

ಮಂಗಳೂರು: ವಿವಿಧ ಫ್ಲೇವರ್‌ ಗಳ ಟೇಸ್ಟಿ ಐಸ್‌ ಕ್ರೀಂಗಳಿಗೆ ಪ್ರಸಿದ್ಧಿ ಪಡೆದ ಅಪ್ಸರಾ

ಅಪ್ಸರಾ ಐಸ್‌ಕ್ರೀಂ ವಿವಿಧ ಫ್ಲೇವರ್‌ಗಳ ಮೂಲಕ ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಜನಪ್ರಸಿದ್ಧಿಯನ್ನು ಪಡೆಯುತ್ತಿದೆ. ಅಪ್ಸಾರಾ ಐಸ್‌ಕ್ರೀಂ 1971 ರಲ್ಲಿ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ತನ್ನ ಮೊದಲ ಪಯಾಣವನ್ನು ಆರಂಭಿಸಿದ್ದು, ನಂತರ ದಿನಗಳಲ್ಲಿ ಅಂಗಡಿ, ಮದುವೆ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಮಾರಾಟ ಮಾಡುವ ಮೂಲಕ ತನ್ನ ವ್ಯಾಪಾರ ವೃದ್ಧಿಯನ್ನು ಮುಂದುವರೆಸಿದರು. ಮುಂಬೈನ

ಮಂಗಳೂರು: ಜನಪ್ರಗತಿಯ ಪಂಜು ಪುಸ್ತಕ ಬಿಡುಗಡೆ: ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರಿನ ಬಲ್ಮಠದ ಸಹೋದಯ ಹಾಲ್‌ನಲ್ಲಿ ಕರ್ನಾಟಕ ಅಧ್ಯಯನ ಕೇಂದ್ರ ಮತ್ತು ಬಂಟಮಲೆ ಅಕಾಡೆಮಿ ಗುತ್ತಿಗಾರು, ಸುಳ್ಯ ಅವರ ವತಿಯಿಂದ ಜನಪ್ರಗತಿಯ ಪಂಜು ಎಂಬ ಪುಸ್ತಕ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸದ್ಯ 95ರ ಪ್ರಾಯದವರಾದ ಕನ್ನಡ ಪತ್ರಿಕೋದ್ಯಮದ ಹಿರಿಯರು ಮತ್ತು ಒಂದು ಕಾಲದಲ್ಲಿ ತಮ್ಮ ತೀಕ್ಷ್ಣ ಪತ್ರಿಕೋದ್ಯಮಕ್ಕೆ ಪ್ರಸಿದ್ಧರಾಗಿದ್ದ ಕಲ್ಲೆ ಶಿವೋತ್ತಮರಾವ್ ಅವರ ಬಗೆಗೆ ಹೊರ ಬಂದ ಕೃತಿಯಿದು. 60-70ರ ದಶಕದಲ್ಲಿ

ಮಂಗಳೂರು: ಮಾ.11ರಂದು ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆ ಶುಭಾರಂಭ

ಮಂಗಳೂರಿನ ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಮತ್ತೊಂದು ಶಾಖೆಯು ಮಾರ್ಚ್ 11ರಂದು ಶುಭಾರಂಭಗೊಳ್ಳಲಿದೆ. ಈಗಾಗಲೇ ಖ್ಯಾತಿಯನ್ನು ಪಡೆದಿರುವ ಕಾಮಾಕ್ಷಿ ವೇಂಚರ್ಸ್‌ನ ಅಪ್ಸರಾ ಐಸ್‌ಕ್ರೀಂ ಐಸ್‌ಕ್ರೀಂ ಪ್ರೀಯರ ನೆಚ್ಚಿನ ಶಾಖೆಯಾಗಿದೆ. ವಿವಿಧ ಫ್ಲೇವರ್‌ಗಳ ಟೇಸ್ಟಿ ಐಸ್‌ಕ್ರೀಂಗಳಿಗೆ ಜನಪ್ರಸಿದ್ಧಿಯನ್ನು ಪಡೆದಿದೆ. ಇದೀಗ ನಗರದ ಮಣ್ಣಗುಡ್ಡದ ಲೋಟಸ್ ದಾಮ್‌ನ ನೆಲಮಹಡಿಯಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆಯು ಮಾರ್ಚ್ 11ರಂದು ಬೆಳಿಗ್ಗೆ 11 ಗಂಟೆಗೆ

ಮಂಗಳೂರು: ಮಾ.10ರಂದು ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ: 9 ಮಂದಿ ಪತ್ರಕರ್ತರಿಗೆ ಗೌರವ ಸನ್ಮಾನ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್‌ಕ್ಲಬ್ ದಿನಾಚರಣೆ ಮಾ.10ರಂದು ಬೆಳಗ್ಗೆ 9.30ರಿಂದ ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ರಾಘವೇಂದ್ರ ಭಟ್,  ಪ್ರಕಾಶ್ ಮಂಜೇಶ್ವರ , ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ರಾಜೇಶ್ ಕಿಣಿ, ಅಶೋಕ್. ಶೆಟ್ಟಿ ಬಿ.ಎನ್.V4 ನ್ಯೂಸ್ ನ ವರದಿಗಾರ ಶರತ್ ಸಾಲಿಯಾನ್ ಇವರುಗಳು ಪ್ರೆಸ್‌ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರು: ಬಿಜೆಪಿ ಯುವ ಮೋರ್ಚಾ ಸಭೆ

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ದಕ್ಷಿಣ ಕನ್ನಡ ಜಿಲ್ಲೆಯ ಸಭೆಯು ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ ವಹಿಸಿದರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮತ್ತು ಭಾರತ ಮಾತೆ ಗೆ ಪುಷ್ಪಾರ್ಚನೆ ಗೈದು ಉದ್ಘಾಟನೆ ಮಾಡಿದ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಳ ರವರು ಉದ್ಘಾಟನೆ ಭಾಷಣ ಮಾಡಿ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಗಳ ಹಾಗೂ ಪಕ್ಷಕ್ಕೆ ಯುವಕರ ಪಾತ್ರ

ಮಂಗಳೂರು: ನಿಪ್ಪಾನ್  ಫೈಂಟರ್ಸ್  ಮೀಟ್ ಕಾರ್ಯಕ್ರಮ

ಏಷ್ಯಾದ ನಂಬರ್ ವನ್ ಫೈಂಟ್ ಆಗಿರುವ ನಿಪ್ಪಾನ್ ಫೈಂಟ್ಸ್‌ನ ಫೈಂಟರ್‍ಸ್ ಮೀಟ್ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು. ನಿಪ್ಪಾನ್ ಪೇಂಟ್.. ಪೇಂಟ್ ಉದ್ಯಮದಲ್ಲಿ143 ವರ್ಷಗಳ ಅನುಭವವನ್ನು ಹೊಂದಿದೆ. ಏಷ್ಯಾದಲ್ಲಿಯೇ ನಂಬರ್ ವನ್ ಪೇಂಟ್ ತಯಾರಕ ಮತ್ತು ವಿಶ್ವದ ಪ್ರಮುಖ ಪೇಂಟ್ ತಯಾರಕರಲ್ಲಿ ಮುಂಚೂಣಿಯಲ್ಲಿದೆ. ಇದೀಗ ಮಂಗಳೂರಿನಲ್ಲಿ ಫೈಂಟರ್‍ಸ್ ಮೀಟ್ ನಡೆಯಿತು. ಈ ಸಂದರ್ಭದಲ್ಲಿ ನಿಪ್ಪಾನ್ ಪೇಂಟ್‌ನ ಬಿಸ್‌ನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಪ್ರಥಮ್

ಮಂಗಳೂರು : ಸಂತ್ರಸ್ತ ಬಾಲಕಿಯರನ್ನು ಭೇಟಿ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ

ಕಡಬದ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಮಕ್ಕಳಲ್ಲಿ ಮನೋಧೈರ್ಯ ಜಾಸ್ತಿ ಇದೆ. ಒಮ್ಮೆ ಕನ್ನಡ ಪರೀಕ್ಷೆ