ಕಾಮನ್ವೆಲ್ತ್ ಗೇಮ್ಸ್ 2026 ರ ಮಹಿಳೆಯರ F57 ಶಾಟ್ಪುಟ್ ಸ್ಪರ್ಧೆಯಲ್ಲಿ ಭಾರತದ ಶರ್ಮಿಳಾ ಧನ್ಕರ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಮೊದಲ ಚಿನ್ನದ ಪದಕ ವಿಜೇತೆ ಪ್ಯಾರಾ-ಅಥ್ಲೀಟ್ ಎಂಬ ಗೌರವಕ್ಕೆ ಭಾಜನರಾದರು.

ಕಾಮನ್ವೆಲ್ತ್ ಗೇಮ್ಸ್ ಕೂಟದ 5ನೇ ದಿನದಂದು, ಅವರು ಮಹಿಳೆಯರ F57 ಶಾಟ್ಪುಟ್ ಸ್ಪರ್ಧೆಯಲ್ಲಿ 9.81 ಮೀಟರ್ ಎಸೆತದೊಂದಿಗೆ ಚಿನ್ನ ಗೆದ್ದು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಇದೇ ವಿಭಾಗದಲ್ಲಿ ಭಾರತದ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಸ್ಕಾಟ್ಲೆಂಡ್ ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಶಾಟ್ ಪಟ್ ಸ್ಪರ್ಧೆಯಲ್ಲಿ ಭಾರತದ ಪ್ಯಾರ ಅಥ್ಲೀಟ್ ಕೆ.ಎಸ್. ಶಿಲ್ಪಾ ಕಂಚಿನ ಪದಕ ಗೆದ್ದು ಸಂಭ್ರಮಿಸಿದರು.

ಮಹಿಳೆಯರ ಎಫ್-57 ವಿಭಾಗದಲ್ಲಿ ಸ್ಪರ್ಧೆ ಒಡ್ಡಿದ ಅವರು 7.26 ಮೀಟರ್ಸ್ ದೂರಕ್ಕೆ ಥ್ರೋ ಮಾಡುವ ಮೂಲಕ ಪದಕಕ್ಕೆ ಕೊರಳೊಡ್ಡಿದರು.ಈ ಸ್ಪರ್ಧೆಯಲ್ಲಿ ಭಾರತದವರೇ ಆದ ಶರ್ಮಿಳಾ 9.81 ಮೀಟರ್ಸ್ ದೂರಕ್ಕೆ ಶಾಟ್ ಪಟ್ ಮಾಡುವ ಮೂಲಕ ಬಂಗಾರದ ಪದಕ ಗೆದ್ದರು. 36 ವರ್ಷ ವಯಸ್ಸಿನ ಶಿಲ್ಪಾ ಅವರು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲಿನ ಶೈಲ-ಶಾಂತಾ ಎಂಬ ರೈತ ದಂಪತಿಯ ಪುತ್ರಿ.


