Home Archive by category ಕರಾವಳಿ (Page 294)

ಸಚಿವರಾದ ಎಸ್.ಅಂಗಾರರಿಗೆ ಟಿಕೆಟ್ ತಪ್ಪಿದ ಹಿನ್ನೆಲೆ : ವೆಂಕಟ್ ವಳಲಂಬೆ ರಾಜೀನಾಮೆ

ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವ ಶ್ರೀ ಎಸ್.ಅಂಗಾರರಂತಹ ಪ್ರಾಮಾಣಿಕ ಕಾರ್ಯಕರ್ತನೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ

ಪಡುಬಿದ್ರಿ : ಚುನಾವಣಾ ಪೂರ್ವ ಪೊಲೀಸ್ ಪಥ ಸಂಚಲನ

ಮುಂದಿನ ವಿಧಾನ ಸಭೆ ಚುನಾವಣೆ ನಿರ್ಭೀತಿಯಾಗಿ ನಡೆಯ ಬೇಕೆಂಬ ಉದ್ದೇಶದಿಂದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ನೇತ್ರತ್ವದಲ್ಲಿ ಪಡುಬಿದ್ರಿ ಕಾರ್ಕಳ ರಸ್ತೆಯಿಂದ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರಗೆ ಪೊಲೀಸ್ ಹಾಗೂ ಕೇಂದ್ರಿಯ ಮೀಸಲು ಪಡೆ ಸಿಬ್ಬಂದಿಗಳ ಪಥಸಂಚಲನ ನೆರವೇರಿದೆ. ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಇದು ಸಾರ್ವಜನಿಕರನ್ನು ಹೆದರಿಸಲು ಮಾಡಿದ ಪ್ರಯತ್ನವಲ್ಲ, ಜನರಿಗೆ ಧೈರ್ಯ ತುಂಬಲು ಹಾಗೂ ಜನರು ತಮ್ಮ ಹಕ್ಕು..ಮತ ಚಲಾಯಿಸಲು ಯಾರಿಗೂ ಹೆದರ

ಹೆಜಮಾಡಿ ಬಂದರು ಕಾಂಗ್ರೆಸ್ ಪ್ರಯತ್ನ : ವಿನಯ ಕುಮಾರ್ ಸೊರಕೆ

ಹೆಜಮಾಡಿ ಮೀನುಗಾರಿಕಾ ಬಂದರು ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಜೂರು ಮಾಡಿದ್ದು ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ  ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ  ಹೆಜಮಾಡಿ ಬಂದರನ್ನು ಎಲ್ಲಾ ಪೂರಕ ದಾಖಲೆಗಳನ್ನು ಕ್ರೋಡೀಕರಿಸಿ ಮಂಜೂರು ಮಾಡಿದ್ದರು. ಆ ಸಂದರ್ಭ ಕೇಂದ್ರ ಸರ್ಕಾರ 75 ಶೇಕಡ ಹಾಗೂ ರಾಜ್ಯ ಸರ್ಕಾರ 25 ಶೇಕಡ ಹಣ

ಉಡುಪಿ : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‍ರಾಜ್ ಕಾಂಚನ್‍ರಿಂದ ಮತ ಪ್ರಚಾರ

ಉಡುಪಿಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿದ್ದ ಭಿನ್ನ ಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಟಿಕೆಟ್ ಅಕಾಂಕ್ಷಿಗಳು ನಿನ್ನೆ ನಡೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪ್ರಚಾರವೂ ಕೂಡ ಜೊರಾಗಿಯೇ ನಡೆಯುತ್ತಿದೆ. ಮನೆ ಮನೆ ಭೇಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ

ತಡೆಯಾಜ್ಞೆ ತಂದ ಉಮಾನಾಥ ಕೋಟ್ಯಾನ್

ಟಿಕೆಟ್ ಘೋಷಣೆಗೆ ಕ್ಷಣ ಗಣನೆ ನಡೆಯುತ್ತಿರುವ ಹೊತ್ತಲ್ಲಿ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ತನ್ನ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿ ,ಪೊಟೋ , ವಿಡಿಯೊ ಪ್ರಕಟ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 40 ಕ್ಕೂ ಹೆಚ್ಚು ಮಾಧ್ಯಮಗಳಲ್ಲಿ ಯಾವುದೇ ಆಕ್ಷೇಪಕಾರಿ ಸುದ್ದಿ ಪ್ರಕಟಿಸಸಂತೆ ಉಮನಾಥ ಕೋಟ್ಯಾನ್ ಅವರು ಮಂಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ತಡೆಯಾಜ್ಞೆ

ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ

ಚುನಾವಣಾ ರಾಜಕೀಯದಿಂದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ನಿವೃತ್ತರಾಗಿದ್ದಾರೆ.ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ನಾನು ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು ಎಂದು ವಿನಂತಿಸುತ್ತೇನೆ ಎಂದಿದ್ದಾರೆ. ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ

ಪ್ರಮೋದ್ ಮುತಾಲಿಕ್ ಮಾತಿಗೂ, ಕೃತಿಗೂ ಯಾವುದೇ ಸಂಬಂಧವಿಲ್ಲ:ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್

ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್ ಹೇಳಿಕೆಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಅವರ ಈ ನೈಜ ಹಿಂದುತ್ವದ ನಕಲಿ ಮುಖದ ಹಿಂದಿರುವ ಕೆಲ ಅಸಲಿ ಸಂಗತಿಯನ್ನು ಮುಗ್ಧ ಕರಾವಳಿಯ ಜನರಿಗೆ ತಿಳಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಅವರ ಮಾತಿಗೂ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ. ಉತ್ತರ ಕರ್ನಾಟಕದ ನಮಗೆ ಮೋಸ ಮಾಡಿದ ಹಾಗೆ ತಾವು

ಏ.13: ಮೂರು ಕೃತಿಗಳ ಬಿಡುಗಡೆ; ಬಿಸು ಪರ್ಬದ ಮಾತುಕತೆ

ಮಂಗಳೂರು : ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜ್ ಮಂಗಳೂರು ಜಂಟಿ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಹಾಗೂ ಬಿಸು ಪರ್ಬದ ಮಾತುಕತೆ ಕಾರ್ಯಕ್ರಮ ಏ.13 ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ಮ್ಯಾಪ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.‌ ಮುಂಬಯಿಯ ಲೇಖಕಿ ಶಾರದಾ ಎ. ಅಂಚನ್ ಅವರ “ನಂಬಿ ಸತ್ಯೋಲು” ಅನುವಾದಿತ ಕೃತಿ ಮತ್ತು “ರಕ್ತ ಶುದ್ಧಿ- ಆರೋಗ್ಯ ವೃದ್ಧಿ” ಎಂಬ ವೈದ್ಯಕೀಯ ಲೇಖನಗಳ ಕೃತಿ ಹಾಗೂ ಡಾ.‌ಪ್ರಭಾಕರ್ ನೀರ್ ಮಾರ್ಗ ಅವರ

ವಿದ್ಯುತ್ ಚಾಲಿತ ಬೈಕ್ ಬೆಂಕಿಗಾಹುತಿ

ಮನೆಯಲ್ಲಿ ನಿಲ್ಲಿಸಲಾಗಿದ್ದ ವಿದ್ಯುತ್ ಚಾಲಿತ ಬೈಕ್ ಇದಕ್ಕಿದಂತೆ ಹೊತ್ತಿ ಉರಿದು ಕರಕಲಾಗಿದ್ದು ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ಶಂಕರಪುರ ಅರ್ಶಿಕಟ್ಟೆ ನಿವಾಸಿ ಜೋಸೆಫ್ ಎಂಬವರಿಗೆ ಸೇರಿದ ದ್ವಿಚಕ್ರವಾಹನ ಇದಾಗಿದ್ದು, ಕಳೆದ ಒಂದು ವರ್ಷಗಳ ಹಿಂದೆಯಷ್ಟೇ ಕರೀದಿ ಮಾಡಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆಮಂದಿ ಮಲಗಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಗೂಡಲ್ಲಿದ್ದ ಹಕ್ಕಿಗಳು ಕೂಡಾ ಬೆಂಕಿಯ ತೀವೃತೆಗೆ ಸುಟ್ಟು ಕರಗಲಾದ ದೃಶ್ಯ ಮನ ಕಲುವಂತ್ತಾಗಿದೆ.

ಧರ್ಮಸ್ಥಳ : ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

ಧರ್ಮಸ್ಥಳ ಬಿಜೆಪಿ ಪಕ್ಷದ ದುರಾಡಳಿತಕ್ಕೆ ಬೇಸತ್ತು. ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ.ದಿವಾಕರ ಕಲ್ಮಂಜ ಯೋಗೀಶ್ ಕಲ್ಮಂಜ ಗಂಗಾಧರ ಕಲ್ಮಂಜ.ಕರಿಯ ಗೌಡ ಧರ್ಮಸ್ಥಳ ಕಾಂಗ್ರೆಸ್ ಪಕ್ಷಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರದ ಕೇಶವ್ ಪಿ ಬೆಳಾಲು. ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರದ ಹರೀಶ್ ಸುವರ್ಣ. ಭಾರತಿ. ಧರ್ಮಸ್ಥಳ