Home Archive by category ಕರಾವಳಿ (Page 409)

ಮಂಗಳೂರು: ಮ್ಯಾಂಡಸ್ ಚಂಡಮಾರುತ – ಮೀನುಗಾರಿಕೆ ದೋಣಿಗಳು ದಡ ಸೇರಲು ಸೂಚನೆ

ಡಿ.16ರವರೆಗೆ ಮ್ಯಾಂಡಸ್ ಚಂಡಮಾರುತದಿಂದ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗಿರುತ್ತದೆ, ಈ ವೇಳೆ ಸಂಭವಿಸುವ ಅನಾಹುತವನ್ನು ತಡೆಗಟ್ಟಲು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಗಳೂರು

ಬೆಂಗಳೂರಿನಲ್ಲಿ ಡಿ.18ರಂದು ಶಕ್ತಿಸಂಗಮ

ರಾಜ್ಯ ಬಿಜೆಪಿಯ 24 ಪ್ರಕೋಷ್ಟಗಳ ರಾಜ್ಯ ಸಮಾವೇಶ ಶಕ್ತಿಸಂಗಮವು ಡಿಸೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ರಾಜ್ಯ ಸಂಚಾಲಕರಾದ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮಂಡಲ, ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ ಸಂಚಾಲರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಇದಕ್ಕೆ ಅಪೇಕ್ಷಿತರು. ದಕ್ಷಿಣ ಕನ್ನಡ ಜಿಲ್ಲೆಯಿಂದ 1,500 ಕ್ರಿಯಾಶೀಲಾ ಕಾರ್ಯಕರ್ತರು

ಮೀನುಗಾರರಿಗೆ ಬಜೆಟ್‍ನಲ್ಲಿ ಪ್ರಕಟಿಸಿದ ಯೋಜನೆ ಕಾರ್ಯಗತಗೊಂಡಿಲ್ಲ : ಐವನ್ ಡಿಸೋಜಾ

ರಾಜ್ಯ ಸರಕಾರ ಮೀನುಗಾರರಿಗಾಗಿ ಬಜೆಟ್‍ನಲ್ಲಿ ಪ್ರಕಟಿಸಿದ ಒಂದು ಯೋಜನೆಯೂ ಜಾರಿಗೆ ತರದೆ ಮೀನುಗಾರ ಸಮುದಾಯವನ್ನು ಕಡೆಗಣಿಸಿದೆ. ಈಗಾಗಲೇ ಮೀನುಗಾರ ಮುಖಂಡರು ಬೆಂಗಳೂರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ಪಕ್ಷವೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಉಪಾಕ್ಷ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ- Pumpwell Suicide

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಬಳಿ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಇರುವ ಖಾಸಗಿ ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಲಾಡ್ಜ್‌ನ 129ನೇ ನಂಬ್ರದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಕೇರಳ ಕಾಸರಗೋಡಿನ ಉಪ್ಪಳದ ಚಿಪ್ಪಾರು ನಿವಾಸಿ 55ರ ಹರೆಯದ ಅಬ್ದುಲ್‌ ಕರೀಂ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಸಂಪೂರ್ಣವಾಗಿ ಬೆತ್ತಲಾಗಿ ಬಿದ್ದಿರುವುದು ನಿಗೂಢವಾಗಿದೆ. ಸಾವಿಗೆ

ಸುಳ್ಯದಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸುಳ್ಯ: ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಅವಶ್ಯಕತೆ ಇದೆ.ಮಕ್ಕಳಿಗೆ ನಾವು ಸಾಹಿತ್ಯವನ್ನು ಓದುವ ಮೂಲಕ ಸಾಹಿತ್ಯವನ್ನು ಸಾಹಿತ್ಯದ ವಿಚಾರವನ್ನು ಅವರಿಗೆ ಹೇಳಬೇಕೆಂದು ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಆರ್ ಗಂಗಾಧರ ಹೇಳಿದರು. ಅವರು ಗೂನಡ್ಕ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಿಮರ್ಶಕ ವಿಜಯಶಂಕರ ಸಮ್ಮೇಳನವನ್ನು ಉದ್ಘಾಟಿಸಿದರು.

ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ

ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ ನಂದಾವರ ಶ್ರೀ ವೀರ ಮಾರುತಿ ದೇವಸ್ಥಾನ ದ ಶ್ರೀ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ರಜತ ಪಲ್ಲಕಿ ಹಾಗೂ ಶ್ರೀ ದೇವರ ರಜತ ಪೀಠ ಪ್ರಭಾವಳಿಗಳನ್ನು ಶ್ರೀದೇವರಿಗೆ ಹತ್ತು ಸಮಸ್ತರ ಪರವಾಗಿ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಸುಮಾರು 28ಕಿಲೋ ಬೆಳ್ಳಿಯನ್ನು ಬಳಸಲಾಗಿದ್ದು , 25 ಲಕ್ಷ ವೆಚ್ಚ ತಗಲಿದ್ದು ಶ್ರೀದೇವಳದ ವೈದಿಕರಿಂದ ವಿಧಿ ವಿಧಾನಪೂರ್ವಕ ಪೂಜೆನಡೆದು

ಕಡಬ ಪ.ಪಂ. ವ್ಯಾಪ್ತಿಗೆ ನಗರೋತ್ಥಾನ ಯೋಜನೆಯಡಿ ವಿಶೇಷ ಅನುದಾನ

ಕಡಬ:ಸಚಿವ ಎಸ್. ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರದಿಂದ ನಗರೋತ್ಥಾನ ಯೋಜನೆಯಡಿ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಮಂಜೂರಾದ 5 ಕೋಟಿ ರೂ. ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯಡಿ ಮಂಜೂರಾದ 2.90 ಕೋಟಿ ರೂ. ಕಾಮಗಾರಿಗಳಿಗೆ ಸಚಿವ ಎಸ್. ಅಂಗಾರ ಅವರು ಚಾಲನೆ ನೀಡಿದರು. ಬಳಿಕ ಕಡಬ ಸಿ.ಎ.ಬ್ಯಾಂಕ್ ವಠಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ದೇಶ ಮತ್ತು ರಾಜ್ಯವನ್ನು ಆಳಿದ ಕಾಂಗ್ರೆಸ್ ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದ ಅಭಿವೃದ್ದಿ

ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಮೃತ್ಯು

ಉಳ್ಳಾಲ: ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವನ್ನಪ್ಪಿ , ಸಹಸವಾರ ಗಾಯಗೊಂಡ ಘಟನೆ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಬೆಂಗಳೂರು ಯಶವಂತಪುರ ನಿವಾಸಿ ನಿಶಾಂತ್ ( 22) ಮೃತರು. ಸಹಸವಾರ ಬೀದರ್ ನಿವಾಸಿ ಶಕೀಬ್ ಗಾಯಗೊಂಡಿದ್ದಾರೆ. ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟರ್ನ್‍ಶಿಪ್ ನಡೆಸುತ್ತಿದ್ದರು. ಕುತ್ತಾರು ಸಿಲಿಕೋನಿಯಾ ಫ್ಲ್ಯಾಟ್ ನಲ್ಲಿ

ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸುವರ್ಣ ಪ್ರಾಶನ ಶಿಬಿರ.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸುವರ್ಣ ಪ್ರಾಶನ ಕಾರ್ಯಕ್ರಮ ಪುಷ್ಯ ನಕ್ಷತ್ರದ ದಿನ 12-12-2023 ರಂದು ಜರುಗಿತು.ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಮಕ್ಕಳ ಸ್ವಾಸ್ಥ್ಯ ರಕ್ಷಣೆಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 16 ವರ್ಷದ ವರೆಗಿನ ಮಕ್ಕಳಿಗಾಗಿ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಸುವರ್ಣ ಪ್ರಾಶನ ಶಿಬಿರ ಜರುಗಲಿದೆ.. ಇಲ್ಲಿನ ವೈದ್ಯಕೀಯ ಸೇವಾ ವಿಭಾಗದ ಆಯುರ್ವೇದ ತಜ್ಞ ವೈದ್ಯ

ಡಿ .16 ಮಂಗಳೂರಿನ ಕೆಲವೆಡೆ  ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಹೀಗಾಗಿ ಮಂಗಳೂರು ನಗರದ ವಿವಿಧೆಡೆ ಭಾನುವಾರ ಡಿ .16 ರ ಮುಂಜಾನೆಯಿಂದ 24 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ತುಂಬೆ ಹೆಚ್ ಎಲ್ ಪಿ ಎಸ್ ರೇಚಕ ಸ್ಥಾವರದಿಂದ ಪಣಂಬೂರಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯೂ ಬಿಜೈ ಚರ್ಚ್ ರೋಡ್ ಬ್ರಿಡ್ಜ್ ಬಳಿ , ಕೂಳೂರು ಸೇತುವೆ ಬಳಿ, ಎಂ ಸಿ ಎಫ್ ಬಳಿ ನೀರು ಸೋರಿಕೆ ಉಂಟಾಗಿರುವ ಹಿನ್ನೆಲೆ ತುರ್ತಾಗಿ […]