Home Archive by category ಕರಾವಳಿ (Page 484)

ತ್ರಾಸಿ ಕಡಲ ತೀರದಲ್ಲಿ ಪತ್ತೆಯಾದ ಬೃಹತ್ ಮೀನು : ಅಧಿಕಾರಿಗಳ ಪರಿಶೀಲನೆ

ತ್ರಾಸಿ ಕಡಲ ತೀರದಲ್ಲಿ ಪತ್ತೆಯಾದ ಬೃಹತ್ ಮೀನಿನ ಕಳೇಬರವನ್ನು ಅರಣ್ಯಾಧಿಕಾರಿಗಳು ಮತ್ತು ಮಂಗಳೂರಿನ ರೀಪೋರ್ಚ್ ಮೆರೈನ್ ಕನ್ಸರ್ವೇಶನ್ ಸಂಸ್ಥೆಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸತ್ತಿರುವ ಮೀನು ಪೈಲೆಟ್ ವೇಲ್ ಎನ್ನುವ ಅಪರೂಪದ ತಿಮಿಂಗಲದ ಪ್ರಭೇದ ಎಂದು ತಿಳಿಸಿದ್ದಾರೆ. ತ್ರಾಸಿ ಕಡಲ ತೀರದಲ್ಲಿ ಬೃಹತ್ ಮೀನು ಬಿದ್ದು ಕೊಳೆತ

ನೇತ್ರಾವತಿ ನದಿ ತೀರದಲ್ಲಿ ಶಂಕಿತ ಉಗ್ರರ ಮಹಜರು : ಪೊಲೀಸರಿಂದ ಪರಿಶೀಲನೆ

ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಶಂಕೆಯಲ್ಲಿ ಬಂಧಿತ ಆರೋಪಿ ಮಂಗಳೂರಿನ ಮಾಝ್ ಮುನೀರ್ ಅಹ್ಮದ್ ಶಿವಮೊಗ್ಗ ಪೊಲೀಸರು ಬಂಟ್ವಾಳದ ನಾವೂರು ಸಮೀಪ ಹಲವೆಡೆ ಮಹಜರು ನಡೆಸಿದರು. ನೇತ್ರಾವತಿ ನದಿ ಕಿನಾರೆಯಲ್ಲಿ ಹಾಗೂ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಲ್ಲಿ ಈತ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಶಂಕೆಯಿಂದ ಈ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ. ಮಂಗಳೂರಿನಿಂದ ಈತನನ್ನು ಬಂಟ್ವಾಳಕ್ಕೆ ಕರೆತಂದ ಪೊಲೀಸರು ರಾತ್ರಿವರೆಗೂ ಪರಿಶೀಲನೆ ನಡೆಸಿದರು.ಶಂಕಿತ

ವಿಟ್ಲ ಪಿಎಫ್‍ಐ ಕಾರ್ಯಕರ್ತನ ಮನೆಗೆ ಪೊಲೀಸ್ ದಾಳಿ

ರಾಜ್ಯದ ಲ್ಲಿನ ಪ್ರಮುಖ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ನಿರ್ದೇಶನದಂತೆ ಬಂಟ್ವಾಳ ಹಾಗೂ ವಿಟ್ಲ ಪೊಲೀಸರ ತಂಡ ಮುಂಜಾನೆ ವೇಳೆ ಬೊಳಂತೂರು ವ್ಯಕ್ತಿಯೋರ್ವ ನ ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದೆ.ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಎಂಬವರ ಪುತ್ರ ಮಹಮ್ಮದ್ ತಬ್ಸೀರ್ ಎಂಬವರ ಮನಗೆ ಮುಂಜಾನೆ ಮೂರು ಗಂಟೆ ವೇಳೆ ಪೊಲೀಸ್ ದಾಳಿ ನಡೆಸಿದೆ.ಯಾವ ಪ್ರಕರಣಕ್ಕೆ ಎಂಬ ವಿಚಾರವನ್ನು ಇಲ್ಲಿನ ಪೊಲೀಸರು ಮಾಹಿತಿ

ಬಸ್ ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆಯ ಬಂಧನ

ಪುತ್ತೂರು : ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸುಕನ್ಯಾ ಅವರ ರೂ. 8 ಸಾವಿರ ನಗದು ಹಣವಿದ್ದ ಪರ್ಸನ್ನು ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕೆಯೊಬ್ಬಳು ಕಳವು ಮಾಡಿದ ಘಟನೆ ಮಂಗಳವಾರ ನಡೆದಿದ್ದು, ಕಳವು ಮಾಡಿರುವ ತಮಿಳುನಾಡು ಮೂಲದ ಕಳ್ಳಿಯನ್ನು ಪುತ್ತೂರು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.ತಮಿಳುನಾಡು ರಾಜ್ಯದ ಸೇಲಂ ನಿವಾಸಿ ಸೆಲ್ವಂ ಎಂಬರ ಪತ್ನಿ ನಲ್ಲಮ್ಮ

ಸರಕಾರದಿಂದ ಚಿತ್ರಾಪುರ ಕ್ಷೇತ್ರದ ಜೀರ್ಣೋದ್ಧಾರಕ್ಕೆ 2ಕೋಟಿ ರೂ.ಬಿಡುಗಡೆ

ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಪ್ರಯುಕ್ತ ಸರಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಲು ಮಾನ್ಯಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಇವರ ನೇತೃತ್ವದಲ್ಲಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ನಿಯೋಗ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿತು.ಇದಕ್ಕೆ

ಎಡಪಂಥೀಯ ಚಿಂತಕ ಐ.ಎ.ಪ್ರಸನ್ನ ನಿಧನ

ಎಡಪಂಥೀಯ ಚಿಂತಕರೂ, ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷರೂ,ಜಿಲ್ಲಾ ವಿಚಾರವಾದಿ ವೇದಿಕೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸಕ್ರಿಯ ಸದಸ್ಯರೂ,ಮೆಸ್ಕಾಂನ ನಿವ್ರತ್ತ ಹಿರಿಯ ಅಧಿಕಾರಿಗಳಾದ ಐ.ಎ.ಪ್ರಸನ್ನ (80ವರ್ಷ)ರವರು ಇಂದು(21-09-2022)ಅಲ್ಪ ಕಾಲದ ಅಸೌಖ್ಯದಿಂದಾಗಿ ನಗರದ ಖಾಸಗೀ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ಎಡಪಂಥೀಯ ಚಿಂತನೆಯಿಂದ ಪ್ರಭಾವಿತರಾದ ಪ್ರಸನ್ನರವರು, ತನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಪರ ವಿಧ್ಯಾರ್ಥಿ

ವಿಟ್ಲ :ಜಲ್ಲಿ ಸಾಗಾಟದ ಲಾರಿ ಪಲ್ಟಿ,ಇರ್ವರಿಗೆ ಗಾಯ

ವಿಟ್ಲ: ಜಲ್ಲಿ ಸಾಗಾಟ ಲಾರಿಯೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಟಿಪ್ಪರ್ ಚಾಲಕನಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಿಂದಾಗಿ ಅಲ್ಪ ಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿದೆ. ಟಿಪ್ಪರ್ ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲೆಲ್ಲಾ ಜಲ್ಲಿಕಲ್ಲುಗಳು ಚೆಲ್ಲಿ ಹೋಗಿದ್ದು ಬಳಿಕ ಅದನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭಗೊಂಡಿತು. ಹೊಯ್ಸಳ

ಉಳ್ಳಾಲ ನಗರಸಭೆಯ ದುರಾಡಳಿತ ಮತ್ತು ಅವ್ಯವಹಾರದ ವಿರುದ್ಧ ನಗರಸಭಾ ಕಛೇರಿಗೆ ಮುತ್ತಿಗೆ : ಎಸ್ ಡಿಪಿಐ

ಉಳ್ಳಾಲ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಉಳ್ಳಾಲ ನಗರಸಭೆಯಲ್ಲಿ ಕಾಮಗಾರಿ, ಲೈಸೆನ್ಸ್ , ಡೋರ್ ನಂಬರ್, ತೆರಿಗೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದು ಇಲ್ಲಿನ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ. ಅನುದಾನ ಬಿಡುಗಡೆ ಸಂದರ್ದಲ್ಲೂ ತಾರತಮ್ಯ ನೀತಿಯನ್ನು ಆಡಳಿತ ಮಂಡಳಿ ಅನುಸರಿಸುತ್ತಿದೆ .

ವಿ4 ನ್ಯೂಸ್‍ನಲ್ಲಿ ನೀರಿನ ಘಟಕದ ದುರಸ್ತಿ ಕುರಿತು ವರದಿ ಬಿತ್ತರ : ಎಚ್ಚೆತ್ತ ಅಧಿಕಾರಿಗಳು

ಕಾರ್ಕಳದ ಮುಖ್ಯ ಬಸ್ ನಿಲ್ದಾಣದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಪ್ರಯಾಣಿಕರಿಗಾಗಿ ಶುದ್ಧ ಕುಡಿಯುವ ನೀರಿಗಾಗಿ ಸುಮಾರು ಒಂದು ಲಕ್ಷ ರೂಪಾಯಿಯ ವೆಚ್ಚದಲ್ಲಿ ನೀರಿನ ಘಟಕ ಅಳವಡಿಸಲಾಗಿತ್ತು. ಉದ್ಘಾಟನೆಗೊಂಡ ಒಂದೇ ತಿಂಗಳ ಅವಧಿಯಲ್ಲಿ ನೀರಿನ ಘಟಕ ಕೆಟ್ಟು ಹೋಗಿ ಅದನ್ನು ದುರಸ್ತಿ ಮಾಡುವ ಗೋಜಿಗೆ ಪುರಸಭೆಯಾಗಲಿ, ಸಂಬಂಧಪಟ್ಟ ಇಲಾಖೆ ತಲೆಕೆಡಿಸಿಕೊಂಡಿಲ್ಲ ಈ ಬಗ್ಗೆ ಸೆಪ್ಟಂಬರ್ 16ರಂದು ವಿ4 ನ್ಯೂಸ್‍ನಲ್ಲಿ

ದ.ಕ ಜಿಲ್ಲೆಯ ಹದಗೆಟ್ಟಿರುವ ಹೆದ್ದಾರಿಗಳನ್ನು ಶೀಘ್ರ ದುರಸ್ತಿ ಗೊಳಿಸಲು ಎಸ್‌ಡಿಪಿಐ ಒತ್ತಾಯ

ಮಂಗಳೂರು,:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ತೀವ್ರ ಹದಗೆಟ್ಟಿದ್ದು,ವಾಹನ ಸವಾರರಿಗೆ ಸಂಚರಿಸಲು ಅಯೋಗ್ಯವಾಗಿದೆ ಹಾಗಾಗಿ ಹತ್ತು ದಿನಗಳ ಒಳಗಾಗಿ ದುರಸ್ತಿ ಕಾರ್ಯ ಆರಂಬಿಸಬೇಕು ಇಲ್ಲದಿದ್ದಲ್ಲಿ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ಹೆದ್ದಾರಿ ಬಂದ್ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪತ್ರಿಕಾ