Home Archive by category Fresh News (Page 253)

ದಾಖಲೆಗಾಗಿ ಅಲೆದಾಡಿಸುತ್ತಿದ್ದ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು : ದಾಖಲೆ ಪತ್ರಗಳಿಗಾಗಿ ತಾಲೂಕು ಕಛೇರಿಯಲ್ಲಿ ಅಲೆದಾಟ ಮಾಡುತ್ತಿದ್ದ ಮಹಿಳೆಯ ಅಹವಾಲು ಕೇಳಿದ ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಸಣ್ಣ ದಾಖಲೆಗಾಗಿ ಒಂದು ತಿಂಗಳಿನಿಂದ ಅಲೆಡಾಡಿಸುತ್ತಿದ್ದ ವಿಚಾರ ತಿಳಿದ ಶಾಸಕ ಅಶೋಕ್ ಕುಮಾರ್ ರೈ ಮಹಿಳೆಯೊಂದಿಗೆ ಅಧಿಕಾರಿಯ ಕಛೇರಿಗೆ ತೆರಳಿದ್ದರು. ಮಹಿಳೆಯ ದಾಖಲೆ

ಕಡಬ – ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

ಕಡಬದ ಆಲಂಕಾರು ಶ್ರೀ ದುರ್ಗಾಂಬಾ ಜನರಲ್ ಸ್ಟೋರ್‍ನ ಮಾಲಕ, ಆಲಂಕಾರು ನಿವಾಸಿ ಚಂದ್ರಶೇಖರ ಪೂಜಾರಿ ಶಾಂತಿಮೊಗರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆಗೆ ಮನೆಯಲ್ಲಿ ಚೀಟಿ ಬರೆದು ತನ್ನ ಕಾರಿನಲ್ಲಿ ಶಾಂತಿಮೊಗರುಗೆ ಹೋದವರು ಅಲ್ಲಿ ಸೇತುವೆ ಮೇಲೆ ಕಾರು ನಿಲ್ಲಿಸಿ ಬಲೂನ್ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರಶೇಖರ ಅವರು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ

ಕಾರ್ಕಳ : ಬೇಸಿಗೆ ಶಾಲಾ ಶಿಬಿರದ ಸಮಾರೋಪ ಕಾರ್ಯಕ್ರಮ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಟ್ಲದಲ್ಲಿರುವ ಕೇಶವ ಕೃಪಾ ವಸತಿ ಗೃಹದಲ್ಲಿ ರೂರಲ್ ಎಜುಕೇಶನ್ ಸೊಸೈಟಿ ಆಯೋಜಿಸಿದ್ದ ಬೇಸಿಗೆ ಶಾಲಾ ಶಿಬಿರದ ಸಮಾರೋಪ ಕಾರ್ಯಕ್ರಮ ಮೇ 25, 2023 ರಂದು ಜರುಗಿತ್ತು. ಮಾರ್ಚ್ 28, 2023 ರಿಂದ ಏಪ್ರಿಲ್ 8, 2023 ರವರೆಗೆ ನಡೆದ ಈ ಶಿಬಿರದಲ್ಲಿ ವಿಷ್ಣು ಸಹಸ್ರನಾಮ, ಯೋಗ, ದೇಶಭಕ್ತಿ ಗೀತೆಗಳು, ಪೂರ್ವಭಾವಿ ಭಾಷಣ, ಚರ್ಚೆ, ರಸಪ್ರಶ್ನೆ, ಚಿತ್ರಕಲೆ ತರಗತಿಗಳು, ಕರಕುಶಲ ಮತ್ತು ಕ್ಲೇ ಮಾಡೆಲಿಂಗ್, ಮನರಂಜನಾ ನಾಟಕ, ಯುನಿಟಿ

ಅಂಕಪಟ್ಟಿ ಪರಿಶೀಲನೆಗೆ ದುಬಾರಿ ಶುಲ್ಕ ಇಳಿಕೆ : ಶಾಸಕ ಗುರುರಾಜ್ ಮನವಿಗೆ ಸ್ಪಂದಿಸಿದ ಮಂಗಳೂರು ವಿವಿ

ಉಪ್ಪುಂದ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ನೂತನ ಶಾಸಕ ಬೈಂದೂರಿನ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿ ಮಾಡಿದ್ದು ಮನವಿಗೆ ಮಂಗಳೂರು ವಿ.ವಿ. ಸ್ಪಂದಿಸಿದೆ. ಪದವೀಧರ ತನ್ನ ೬ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು

ಕಾಪು : ಬಲಿಗಾಗಿ ಕಾಯುತ್ತಿದೆ ಮರದ ಕಾಲು ಸೇತುವೆ

ಬೈಂದೂರಲ್ಲಿ ನಡೆದ ಕಹಿ ಘಟನೆ ಜನರ ಮನದಿಂದ ಇನ್ನೂ ಮಾಸಿಲ್ಲ…ಇದೀಗ ಅಂಥಹುದೇ ಮರದ ಕಾಲು ಸೇತುವೆಯೊಂದು ಎಲ್ಲೂರು ಪಡುಬೈಲಿನಲ್ಲಿ ಬಲಿಗಾಗಿ ಕಾದು ಕುಳಿತಂತ್ತಿದೆ. ಮರದ ಕಾಲು ಸೇತುವೆಯಲ್ಲಿ ಭಯದಲ್ಲೇ ಹೋಗಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸೂಕ್ತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೈಲಿನ ಜನರ ಬದುಕು ಒಂದು ರೀತಿಯಲ್ಲಿ ಗೃಹ ಬಂಧನವೇ ಸರಿ.

ಉಚ್ಚಿಲ ಬಡಾ ಪಂಚಾಯತ್‍ನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬೆಂಕಿ

ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಪ್ಯಾಡ್ ಬರ್ನರ್ ಮತ್ತು ಪ್ಲಾಸ್ಟಿಕ್ ಮೋಲ್ಡಿಂಡಿಗ್ ಯಂತ್ರಗಳ ಮೌಲ್ಯ ಸುಮಾರು 4 ಲಕ್ಷದ 60 ಸಾವಿರ ಆಗಿದ್ದು, ಅಂತೆಯೇ ಕಟ್ಟಡ ಇನ್ನಿತರ ಪರಿಕರಗಳು ಸೇರಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ ಎಂದು ಪಿಡಿಓ ಸತೀಶ್ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ

“ದೇವತಾ” ಕಲಾ ಪ್ರದರ್ಶನ : ಡಾ. ಎಂ ಮೋಹನ್ ಆಳ್ವರಿಂದ ಉದ್ಘಾಟನೆ

“ದೇವತಾ” ವಿಭಿನ್ನ ಕಲಾ ಪ್ರದರ್ಶನ ಮೇ 26 ರಿಂದ 28 ರವರೆಗೆ ಅದಿತಿ ಗ್ಯಾಲರಿನಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಪ್ರಯುಕ್ತ ಮೇ 25, 2023 ರ ಗುರುವಾರದಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಅದಿತಿ ಗ್ಯಾಲರಿನಲ್ಲಿ ಜರುಗಿತ್ತು. ಮೂಡುಬಿದರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವರವರು ಕಲಾವಿದೆ ಪ್ರವೀಣಾ ಮೋಹನ್ ಅವರ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ “ದೇವತಾ” ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ

‘ದೂರ ಸಂಪರ್ಕ ಸಾಧನಗಳ ಬಳಕೆ ಮಿತವಾಗಿರಲಿ’

ಉಜಿರೆ: ದೂರ ಸಂಪರ್ಕ ಸಾಧನಗಳ ಬಳಕೆ ಮಿತವಾಗಿರಲಿ ಎಂದು ಎಸ್.ಡಿ.ಎಂ ಕಾಲೇಜಿನ ಗಣಕಯಂತ್ರ ವಿಜ್ಞಾನ ವಿಭಾಗದ ಪ್ರೊ. ಶೈಲಜಾ ಅಭಿಪ್ರಾಯಪಟ್ಟರು.ಎಸ್.ಡಿ.ಎಂ. ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗವು ಗುರುವಾರ ‘ವಿಶ್ವ ದೂರ ಸಂಪರ್ಕ ದಿನ ಆಯೋಜಿಸಿದ್ದ ಗುರುತ್ವ-2023 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ದೂರ ಸಂಪರ್ಕ ಸೌಲಭ್ಯದಿಂದಾಗಿ ವಿಶ್ವದ ಗಾತ್ರ ಸಣ್ಣದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಕ್ಷಣ ವಿಶ್ವದಾದ್ಯಂತ ಪಸರಿಸುವ

ವಾರಂಬಳ್ಳಿ ಗ್ರಾಮ ಪಂಚಾಯತಿ – ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರ

ವಾರಂಬಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೂಲಕ 7 ದಿನಗಳ ಕಾಲ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಜರುಗಿತು.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ 8 ವರ್ಷದಿಂದ 13 ವರ್ಷದ 50 ಮಕ್ಕಳಿಗೆ ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ 1-30 ರ ತನಕ ನಾನಾ ಸಂಪನ್ಮೂಲ ವ್ಯಕ್ತಿಗಳಿಂದ ವಿಜ್ಞಾನ , ಗಣಿತ , ನಾಯಕತ್ವ ,ಮನರಂಜನೆ ,ಕ್ರೀಡೆ , ಪರಿಸರ ಸಾಮಾಜಿಕ ಕಾಳಜಿಯ ಕುರಿತು ತರಬೇತಿ ನೀಡಲಾಗಿತ್ತು. ತರಬೇತಿ ಪಡೆದ […]

ಮೇ 27. ಉಳ್ಳಾಲ ಕಪ್-2023 – ವಾಲಿಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಹಗಲಿರುಳು ವಾಲಿಬಾಲ್ ಪಂದ್ಯಾಟ ಜಿಲ್ಲಾ ಚಾಂಪಿಯನ್ ಶಿಪ್ ಉಳ್ಳಾಲ ಕಪ್-2023 ಮೇ 27ರಂದು ಮುಡಿಪುವಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್