ಬೈಂದೂರು: ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಈಶ್ವರಪ್ಪ
ಬೈಂದೂರು: ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ. ಹಿಂದುತ್ವ ದೇಶ ಅಭಿವೃದ್ಧಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕುರಿತು ಜನ ಸ್ಪಷ್ಟ ಫಲಿತಾಂಶ ನೀಡಲಿದ್ದಾರೆ.ಯಾವ ಒತ್ತಡಗಳಿಗೂ ಮಣಿಯಲಾರೆ.ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.
ಅವರು ಉಪ್ಪಂದದಲ್ಲಿ ಉಪ್ಪುಂದ ಪರಿಚಯ ಹೋಟೆಲ್ ಸಭಾಭವನದಲ್ಲಿ ನಡೆದ ಈಶ್ವರಪ್ಪ ಬೆಂಬಲಿತ ಕಾರ್ಯಕರ್ತರ ಸಮಾವೇಶವನ್ನುದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂತೇಶ್ ಈಶ್ವರಪ್ಪ, ಸಂಘಟಕ ಶ್ರೀಧರ ಬಿಜೂರು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಗೋಪಾಲಕೃಷ್ಣ ನಾಡ, ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ, ಗೋಪಾಲಗಾಣಿಗ ಬೈಂದೂರು, ಸುವರ್ಣ ಪೂಜಾರಿ ಬಿಜೂರು, ಹಿಂದೂ ಜಾಗರಣೆಯ ಅಧ್ಯಕ್ಷ ಯಶವಂತ ಗಂಗೊಳ್ಳಿ, ವಿನಯ್ ನಾಯರಿ ನಾವುಂದ, ಮಂಜುನಾಥ ರಾವ್ ಬೈಂದೂರು, ಗಣೇಶ್ ಬೈಂದೂರು, ಶ್ರೀಧರ್ ಬಿಜೂರು, ಗೋಪಾಲಕೃಷ್ಣ ನಾಡ ಉಪಸ್ಥಿತರಿದ್ದರು.