ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಶನಿವಾರ ಮತ್ತು ಭಾನುವಾರ ವಿಟ್ಲ ಪೇಟೆ ಸೇರಿದಂತೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ವಿಟ್ಲ ಪಟ್ಟಣ ಪಂಚಾಯಿತಿ ನಿರ್ಣಯ ಕೈಗೊಂಡಿದೆ. ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್
ಪರಿಶಿಷ್ಟ ಜಾತಿ ಘಟಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು ಬ್ಲಾಕ್ ಕಾಂಗ್ರೆಸ್ ಸಮಿತಿ ಪುತ್ತೂರು ವತಿಯಿಂದ ಕೇಂದ್ರ ಸರ್ಕಾರದ ಜನವಿರೋಧಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಂಗ್ ಬ್ರಿಗೇಡ್ ಸೇವಾದಳ ಅಧ್ಯಕ್ಷರು, ಯುವ ದಲಿತ ನಾಯಕರಾದ ಅಭಿಷೇಕ್ ಬೆಳ್ಳಿಪ್ಪಾಡಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿ
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿರುವಾಗಲೇ ವಿದ್ಯುತ್ ಮೀಟರ್ ದರ ಏರಿಕೆ ಮಾಡುವ ಮೂಲಕ ಜನರ ಹಸಿವಿನ ಹೊಟ್ಟೆಗೆ ಹೊಡೆದಂತಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತದೆ. ಆದರೆ ಈ ನಡುವೆ ಅದಾನಿ ಕಂಪೆನಿ ಸೇರಿದಂತೆ ನಾನಾ ಕಂಪೆನಿಗಳಿಂದ ಸರಕಾರ ವಿದ್ಯುತ್
ಒಂದೆಡೆ ಕೊರೊನಾ ಎಂಬ ಮಹಾಮಾರಿ ಮನುಷ್ಯನನು ಪಾತಳಕ್ಕೆ ತೊರೆಯುತ್ತಿದ್ದರೆ ಇನ್ನೊಂದು ಕಡೆ ಬೇಕರಿ ಕಾರ್ಮಿಕರ ಬದುಕು ಹೀನಾಯ ಸ್ಥಿತಿ ತಲುಪಿದೆ. ದಿನ ಬೆಳಗಾದರೆ ಬೇಕರಿ ಪದಾರ್ಥಗಳನ್ನು ಮಾರಿ ಬದುಕುವ ಬೇಕರಿ ಕಾರ್ಮಿಕರು ಇಂದು ಬೇಕರಿಗಳನ್ನು ಮುಚ್ಚಿರುವ ಕಾರಣ ಸಾಕಷ್ಟು ನಷ್ಟದಲ್ಲಿ ಸಿಲುಕಿದ್ದಾರೆ. ಹೀಗಿರುವಾಗ ಹಾಸನ ಅಯ್ಯಂಗಾರ್ ಬೇಕರಿ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಬಂಟಕಲ್‍ನಲ್ಲಿ ವೆಂಕಟೇಶ್ ಎಂಬುವವರಿಗೆ ಸೇರಿದ ಹಾಸನ್ ಅಯ್ಯಂಗಾರ್ ಬೇಕರಿ
ಕರಾವಳಿಯಲ್ಲಿ ಬಿರುಸುಗೊಂಡ ಮಳೆಯಿಂದಾಗಿ ಅಲ್ಲಲ್ಲಿ ವ್ಯಾಪಕವಾಗಿ ಹಾನಿಯಾಗುತ್ತಿದ್ದು, ನಗರದ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಿಷನ್ ಬಳಿಯಲ್ಲಿ ಗಾಳಿಮಳೆಗೆ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದೆ. ಇಂದು ಬೆಳಗ್ಗೆ ಸುಮಾರು 5.30 ರ ವೇಳೆಗೆ ಈ ಘಟನೆ ನಡೆದಿದ್ದು, ೫ ವಿದ್ಯುತ್ ಕಂಬಗಳು ಧರೆಗುರಳಿದ್ದು, ವಾಹನ ಸಂಚಾರಕ್ಕೆ ತೊಡಕ್ಕುಂಟಾಗಿತ್ತು. ಇನ್ನು ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕೆಂದು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ HP ಪೆಟ್ರೋಲ್ ಪಂಪ್ ಹತ್ತಿರ ಪ್ರತಿಭಟನೆ ಮಾಡಲಾಯಿತು. ತಿಕೋಟಾ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿರೇಶ ಸಿಂಧೂರ ಮಾತನಾಡಿ,ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ವ್ಯಾಪ್ತಿಗೆ ತರಬೇಕು
ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಮಳೆಗಾಲದ ಈ ಸಮಯದಲ್ಲಿ ರಸ್ತೆ ಅಭಿವೃದ್ದಿಯಿಂದಾಗಿ ಹಲವರು ಸಮಸ್ಯೆಗಳು ತಲೆದೋರಿವೆ. ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಗೇಟು ಬಳಿ ಮನೆಯಂಗಳವೇ ನೀರು ಹರಿದು ಹೋಗುವ ಚರಂಡಿಯಾಗಿ ಪರಿವರ್ತನೆಯಾದರೆ, ರಸ್ತೆ ಪಕ್ಕದ ಅಡಿಕೆ ತೋಟದಲ್ಲಿ ನೀರು ತುಂಬಿ ಕೊಂಡು ಕೃಷಿ ನಾಶವಾಗುವ ಭೀತಿ ಎದುರಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ಮನೆ ಅಂಚಿನವರೆಗೂ ಸಾಗಿದ್ದು ತಡೆಗೋಡೆ
ಇತಿಹಾಸ ಪ್ರಸಿದ್ಧ ಸುಮಾರು 800 ವರ್ಷಗಳಷ್ಟು ಪ್ರಾಚೀನ ಸ್ವಯಂಭೂ ಅರ್ಕುಳ ಶ್ರೀವರದೇಶ್ವರ ದೇವಸ್ಥಾನ ಬಳಿ ರೈಲ್ವೆ ಇಲಾಖೆಯವರು ಗೋಡೆಕಟ್ಟುವ ಕಾಮಗಾರಿ ಸಂದರ್ಭದಲ್ಲಿ ದೇವಸ್ಥಾನದ ಡ್ರೈನೇಜ್ ವ್ಯವಸ್ಥೆಗೆ ಲೋಪವಾಗಿತ್ತು. ಇದರ ಪರಿಣಾಮ ದೇವಸ್ಥಾನದ ಅಂಗಣ ತುಂಬಾ ಮಳೆನೀರು ತುಂಬಿಕೊಂಡಿತ್ತು. ಈ ವಿಷಯವನ್ನು ಅರ್ಕುಳ ಗ್ರಾಮಸ್ಥರು ಶಾಸಕರಾದ ಡಾ ವೈ ಭರತ್ ಶೆಟ್ಟಿಯವರಲ್ಲಿ ತಿಳಿಸಿದಾಗ ಕೂಡಲೇ ಸ್ಪಂದಿಸಿ ರೈಲ್ವೆ ಇಲಾಖೆಯವರೊಂದಿಗೆ ಮಾತನಾಡಿ ತ್ವರಿತ ವಾಗಿ
ಕದ್ರಿ ವಾರ್ಡಿನ ಕಾರ್ಪೋರೇಟರ್ ಆದ ಕದ್ರಿ ಮನೋಹರ್ ಶೆಟ್ಟಿ ಇವರ ವಿನಂತಿಯ ಮೇರೆಗೆ ಕದ್ರಿ ದಕ್ಷಿಣ 33ನೇ ವಾರ್ಡಿನಲ್ಲಿ ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯವಾಗಲೆಂದು ಆಹಾರದ ಕಿಟ್‍ಗಳನ್ನು ಒದಗಿಸಿದರು. ಉದ್ಯಮಿ ಗಣೇಶ್ ಶಿರ್ವ ದುಬಾಯಿ ಇವರ ಸಹಕಾರದೊಂದಿಗೆ ಜೊತೆಯಾಗಿ ಕದ್ರಿ ವಾರ್ಡಿನ ತರಕಾರಿ ವ್ಯಾಪಾರಸ್ಥರಾದ ಸುದೀರ್ ಕದ್ರಿ ಮಾರ್ಕೆಟ್ ಹಾಗೂ ಸುನಿಲ್ ಕೊಟ್ಟಾರಿ ಇವರು ತರಕಾರಿಯ ಕಿಟ್‍ಗಳನ್ನು ಒದಗಿಸಿದರು. ಈ ಸಂದರ್ಭದಲ್ಲಿ ವಾರ್ಡಿನ
ಮರುವೂರು ಸೇತುವೆ ಬಿರುಕು ಬಿಟ್ಟಿರುವುದು ಆಘಾತಕಾರಿ ವಿಚಾರವಾಗಿದೆ. ಮರಳು ಮಾಫಿಯಾವೇ ಈ ಅವಘಡಕ್ಕೆ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಜೆಸಿಬಿ ಮೂಲಕ ಸೇತುವೆ ಸುತ್ತಮುತ್ತ ಹೂಳೆತ್ತುವ ನೆಪದಲ್ಲಿ ಇಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ಈ ದುರಂತಕ್ಕೆ ಕಾರಣ ಎಂದು