HomeFresh Newsಹೆಜಮಾಡಿಯಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೀನುಗಾರ ಮೃತ್ಯು

ಹೆಜಮಾಡಿಯಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೀನುಗಾರ ಮೃತ್ಯು

ಹೆಜಮಾಡಿಯ ನದಿ ಹಾಗೂ ಸಮುದ್ರ ಒಂದಾಗುವ ಅಳುವೆ ಬಾಗಿಲಿಗೆ ಮೀನುಗಾರಿಕೆಗೆ ತೆರಳಿದ ಮೀನುಗಾರರೋರ್ವರು ಸಮುದ್ರದ ಬೃಹತ್ ಅಲೆಯ ದಾಳಿಗೆ ತುತ್ತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.


ಮೃತರು ಹೆಜಮಾಡಿ ಕೋಡಿ ಮಾನಂಪಾಡಿ ನಿವಾಸಿ ಜಯಂತ್ (51).ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಹೊಂದಿದ್ದ ಇವರು ಮುಂಜಾನೆ ತೀರ ಮೀನುಗಾರಿಕೆ ನಡೆಸುವುದಕ್ಕಾಗಿ ಅಳವೆ ಪ್ರದೇಶಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪಡುಬಿದ್ರಿ ಪ್ರಾಥಮಿಕ ಆರೋಗ್ಯಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಗಳಿಗೆ ಶವವನ್ನು ಬಿಟ್ಟು ಕೊಟ್ಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments