HomeFresh Newsಸೆಲಿನಾ ಜೈಟ್ಲಿ ಮೊಕದ್ದಮೆಯ ಬೆಂಕಿ | ಲೈಂಗಿಕ ಶೋಷಣೆಯ ಆರೋಪ | ಪೀಟರ್ ಹಾಗ್ ಮೇಲೆ...

ಸೆಲಿನಾ ಜೈಟ್ಲಿ ಮೊಕದ್ದಮೆಯ ಬೆಂಕಿ | ಲೈಂಗಿಕ ಶೋಷಣೆಯ ಆರೋಪ | ಪೀಟರ್ ಹಾಗ್ ಮೇಲೆ ಎಫ್‌ಐಆರ್

ನಟಿ ಸೆಲಿನಾ ಜೈಟ್ಲಿ ತನ್ನ ಆಸ್ಟಿçಯಾದ ಗಂಡನ ಮೇಲೆ ಲೈಂಗಿಕ ಶೋಷಣೆಯ ಮೊಕದ್ದಮೆ ದಾಖಲಿಸಿದ್ದರಿಂದ ಮುಂಬಯಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಾಲಿವುಡ್ ನಟಿ ಸೆಲಿನಾ ಜೈಟ್ಲಿಯವರು ತನ್ನ ಆಸ್ಟಿçಯಾದ ಉದ್ಯಮಿ ಪತಿ ಪೀಟರ್ ಹಾಗ್ ಮೇಲೆ ಕಳೆದ ವರುಷವೇ ಲೈಂಗಿಕ ಶೋಷಣೆಯ ಆರೋಪ ಹೊರಿಸಿದ್ದರು.

ಈಗ ವೆರ್ಸೋವಾ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಗ್ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಅಡಿ ಎಫ್‌ಐಆರ್ ದಾಖಲಾಗಿದೆ. ನಿರಂತರ ಶೋಷಣೆ, ಕ್ರಿಮಿನಲ್ ರತಿ ಮನಸ್ಸು, ದೈಹಿಕ ಹಿಂಸೆ, ಹಿಂಸಾಚಾರ ಎಂದು ನಟಿಯು ಉದ್ಯಮಿ ಗಂಡನ ಮೇಲೆ ದೂರು ನೀಡಿದ್ದರು.

೨೦೦೫ರ ಮಹಿಳೆಯರಿಗೆ ಮನೆಯ ಹಿಂಸಾಚಾರದಿAದ ರಕ್ಷಣೆ ಕಾಯ್ದೆಯಡಿ ತನಿಖೆ ಆರಂಭವಾಗಿದೆ. ಕಳೆದ ವರುಷ ಸೆಲಿನಾ ಜೈಟ್ಲಿಯವರು ಮಹಿಳೆಯರಿಗೆ ಮನೆಯ ಹಿಂಸಾಚಾರದಿAದ ರಕ್ಷಣೆ ಕಾಯ್ದೆಯಡಿ ತನಗೆ ರಕ್ಷಣೆ ನೀಡುವಂತೆ.

ಮಧ್ಯಂತರ ಪರಿಹಾರ ಕೊಡಿಸುವಂತೆ ಮುಂಬಯಿಯ ಅಂಧೇರಿಯ ಜ್ಯುಡೀಶಿಯಲ್ ಮ್ಯಾಜಿಸ್ಟೆçÃಟ್ ಫಸ್ಟ್ ಕ್ಲಾಸ್ ಕೋರ್ಟಿಗೆ ಹೋಗಿದ್ದರು. ಆಸ್ತಿ ನಷ್ಟ, ಸಂಪಾದನೆ ನಷ್ಟಕ್ಕಾಗಿ ೫೦ ಕೋಟಿ ಪರಿಹಾರ ಕೊಡಿಸುವಂತೆಯೂ ಕೋರಿದ್ದರು. ಗಂಡ ಸಿನಿಮಾವಕಾಶಗಳನ್ನು ತ್ಯಜಿಸುವಂತೆ ಮಾಡಿ ನಷ್ಟ ಮಾಡಿದ್ದಾರೆ ಎಂದೂ ದೂರಿದ್ದರು.

ಪತಿಯ ಬಯ್ಗುಳ, ಹಿಂಸೆಗಳಿAದ ಬೇಸತ್ತು ಗಂಡ ಮಕ್ಕಳನ್ನು ಬಿಟ್ಟು ಅವರು ಕಳೆದ ವರುಷ ಭಾರತಕ್ಕೆ ವಾಪಾಸಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments