HomeFresh Newsಚೀನಾದ ಶಾಂಗ್ಸಿ ಪ್ರಾಂತ್ಯದಲ್ಲಿ ರಿಯಲ್ ಎಸ್ಟೇಟ್‍ನವರು ಹಲವು ಫ್ಲಾಟ್ ಖರೀದಿದಾರರಿಗೆ ಇಲ್ಲದ ಫ್ಲಾಟ್ ಮಾರಿ ವಂಚನೆ

ಚೀನಾದ ಶಾಂಗ್ಸಿ ಪ್ರಾಂತ್ಯದಲ್ಲಿ ರಿಯಲ್ ಎಸ್ಟೇಟ್‍ನವರು ಹಲವು ಫ್ಲಾಟ್ ಖರೀದಿದಾರರಿಗೆ ಇಲ್ಲದ ಫ್ಲಾಟ್ ಮಾರಿ ವಂಚನೆ

ಚೀನಾದ ಶಾಂಗ್ಸಿ ಪ್ರಾಂತ್ಯದಲ್ಲಿ ರಿಯಲ್ ಎಸ್ಟೇಟ್‍ನವರು ಹಲವು ಫ್ಲಾಟ್ ಖರೀದಿದಾರರಿಗೆ ಇಲ್ಲದ ಫ್ಲಾಟ್ ಮಾರಿ ವಂಚಿಸಿರುವುದು ಬಯಲಾಗಿದೆ.

ಮುಖ್ವವಾಗಿ 32 ಮಹಡಿಯ ಬಹುಮಹಡಿ ಕಟ್ಟಡವೊಂದರಲ್ಲಿ 33 ಮತ್ತ 34ನೆಯ ಮಹಡಿಯ ಫ್ಲಾಟ್‍ಗಳನ್ನು ಮಾರಿರುವುದು ಬಯಲಾಗದೆ. ಮುಖ್ಯವಾಗಿ ಬೇರೆ ಊರಿನವರು ಬಂದು ಆ ಊರಿನಲ್ಲಿ ಫ್ಲಾಟ್ ಕೊಳ್ಳುವವರಿಗೆ ಈ ರೀತಿ ವಂಚಿಸಲಾಗಿದೆ. ಉದ್ಯಮಿಯೊಬ್ಬರು ಫ್ಲಾಟ್ ಕೊಂಡಿದ್ದರು. ಬೇರೆ ಊರಿನವರಾದ ಅವರು ಆರು ತಿಂಗಳ ಬಳಿಕ ಶಾಂಗ್ಸಿಗೆ ಬಂದರು ಕಟ್ಟಡಕ್ಕೆ ಹೋಗಿ ಲಿಫ್ಟ್‍ನಲ್ಲಿ ಮೇಲೆ ಹೋದರು. ಆದರೆ 32ನೇ ಮಹಡಿಯ ಮೇಲೆ ಲಿಫ್ಟ್ ಹೋಗಲಿಲ್ಲ. ಮೆಟ್ಟಿಲಲ್ಲಿ ಮೇಲೆ ಹೋಗಿ ನೋಡಿದರೆ ಅವರು ಫ್ಲಾಟ್ ಕೊಂಡ 34ನೇ ಮಹಡಿ ಹೋಗಲಿ 33ನೇ ಮಹಡಿ ಕೂಡ ಇರಲಿಲ್ಲ.

2,646 ಯುವಾನ್ ಕೊಟ್ಟು ಫ್ಲಾಟ್ ಕೊಂಡಿದ್ದ ಶೆನ್ ಪೋಲೀಸರಿಗೆ ದೂರು ಕೊಟ್ಟ ಮೇಲಷ್ಟೆ ಈ ವಿಷಯ ಬೆಳಕಿಗೆ ಬಂದಿದೆ. ತನಿಖೆಗೆ ಹೊರಟ ಪೋಲೀಸರಿಗೆ ಐದಾರು ಬಹುಮಡಡಿ ಕಟ್ಟಡಗಳಲ್ಲಿ, ಈ ರೀತಿ ಇಲ್ಲದ ಮಹಡಿಗಳ ಫ್ಲಾಟ್ ಮಾರಿರುವುದು ಬೆಳಕಿಗೆ ಬಂದಿದೆ. ಈಗಿನ ತಲೆನೋವು ಎಂದರೆ ಆ ಕಟ್ಟಡ ಕಟ್ಟಿದವನು ಕಂಪೆನಿ ಹೆಸರು ಮಾತ್ರ ಕೊಟ್ಟು, ಫ್ಲಾಟ್‍ಗಳನ್ನು ಮಾರಿ, ಕಂಪೆನಿಯನ್ನೇ ಮುಚ್ಚಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments