HomeFresh Newsಶಾಲೆಯಲ್ಲಿ ಇನ್ನು ಮುಂದೆ ಸಂವಿಧಾನ ದಿನಾಚರಣೆ

ಶಾಲೆಯಲ್ಲಿ ಇನ್ನು ಮುಂದೆ ಸಂವಿಧಾನ ದಿನಾಚರಣೆ

  • .ಪ್ರತಿ ವರ್ಷ ನವೆಂಬರ್ 26 ಈ ದಿನವನ್ನು ಭಾರತ ಸಂವಿಧಾನವು ಭಾರತದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ದಿನವಾದ 26ನೇ ನವೆಂಬರ್ 1949ರ ಸವಿನೆನಪಿಗಾಗಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತ ಸರ್ಕಾರದ, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪತ್ರದಲ್ಲಿ ಸೂಚಿಸಿರುವಂತೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳ ಅರಿವನ್ನು ಮೂಡಿಸುವಂತಹ Know Your Constitution ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಆಯೋಜಿಸಲು ಸೂಚನೆ ನೀಡಲಾಗಿದೆ.ಇನ್ನು ನ. 26ರ ಸಂವಿಧಾನ ದಿನಾಚರಣೆ’ ಅಂಗವಾಗಿ ಶಾಲೆಯಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಶಾಲಾ ಮುಖ್ಯಸ್ಥರು ಹಮ್ಮಿಕೊಳ್ಳಲು ಕ್ರಮವಹಿಸಲು ಸೂಚಿಸಿದೆ.ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ 11:00 ಗಂಟೆಗೆ ಏಕಕಾಲಕ್ಕೆ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು, ಶಾಲಾ ಆವರಣದಲ್ಲಿನ ಪ್ರಮುಖ ಸ್ಥಳದಲ್ಲಿ ಭಾರತ ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಕರ್ತವ್ಯಗಳು ಮತ್ತು ಶಾಲೆಗಳಲ್ಲಿ ಸಂವಿಧಾನದ ವಿವಿಧ ಅಂಶಗಳ ಕುರಿತು ಚರ್ಚಾ ಸ್ಪರ್ಧೆ, ರಸಪ್ರಶ್ನೆಗಳು/ ಪ್ರಬಂಧ ಸ್ಪರ್ಧೆಗಳು ಇತ್ಯಾದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments