ಜಗತ್ತಿನಲ್ಲಿ ಪ್ರತಿ ವರುಷ 1.6 ಟ್ರಿಲಿಯನ್ ಕೋಳಿ ಮೊಟ್ಟೆ ಉತ್ಪಾದನೆ ಆಗುತ್ತದೆ; ಅದರಲ್ಲಿ 40 ದೇಶಗಳ ಕೊಡುಗೆ 90 ಶೇಕಡಾ.

ಕೋಳಿ ಮೊಟ್ಟೆ ಅತಿ ಹೆಚ್ಚು ಉತ್ಪಾದಿಸುವ ದೇಶಗಳು ಚೀನಾವೂ ಹೌದು; ಫ್ರಾನ್ಸ್ ಕೂಡ ಹೌದು.

ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಗೂಡು ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಎರಡು ಮತ್ತು ಮೂರನೆಯ ಸ್ಥಾನಕ್ಕೆ ಏರಿಳಿಯುತ್ತಿರುತ್ತವೆ.

ಕೇಜ್ಡ್, ಗೂಡಿನಲ್ಲಿ ಸಾಕಿ ಉತ್ಪಾದಿಸಿದ ಮೊಟ್ಟೆ ಲೆಕ್ಕಾಚಾರ.

ಚೀನಾ 47.27ಕೋಟಿ, ಯುಎಸ್‌ಎ 9.05 ಕೋಟಿ, ಭಾರತ 5.7 ಕೋಟಿ, ಮೆಕ್ಸಿಕೋ 4.67 ಕೋಟಿ, ಜಪಾನ್ 4.18 ಕೋಟಿ, ರಶಿಯಾ 3.92 ಕೋಟಿ, ಬ್ರೆಜಿಲ್ 3.84 ಕೋಟಿ, ಇಂಡೋನೇಶಿಯಾ 2.36 ಕೋಟಿ, ಉಕ್ರೇನ್ 1.58 ಕೋಟಿ, 1.54 ಕೋಟಿ.

ಕೇಜ್ ಫ್ರೀ, ಮುಕ್ತವಾಗಿ ಬಿಟ್ಟು ಸಾಕಿದ ಕೋಳಿಗಳ ಮೊಟ್ಟೆ ಉತ್ಪಾದನೆ.

ಕ್ರಮವಾಗಿ ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟೆಲಿ, ನೆದರ್‌ಲ್ಯಾಂಡ್ಸ್, ಪೋಲೆಂಡ್, ಸ್ಪೆಯಿನ್, ಬ್ರಿಟನ್, ಉಕ್ರೇನ್ ಮೊದಲ ಒಂದರಿಂದ ಒಂಬತ್ತರವರೆಗಿನ ಸ್ಥಾನ ಹಿಡಿದಿವೆ.


