HomeFresh Newsಹೆಣ್ಣಿನ ಕುಟುಂಬ ಜವಬುದಾರಿ ಮೌಲ್ಯ ರೂ. 30,000 | ಕುಟುಂಬ ಶ್ರಮದ ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು...

ಹೆಣ್ಣಿನ ಕುಟುಂಬ ಜವಬುದಾರಿ ಮೌಲ್ಯ ರೂ. 30,000 | ಕುಟುಂಬ ಶ್ರಮದ ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು | ಸರ್ವೋಚ್ಚ ನ್ಯಾಯಾಲಯದ ನ್ಯಾಯ ಪೀಠದ ಘೋಷಣೆ


ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೆ. ಸಿಂಗ್ ಅವರುಗಳಿದ್ದ ನ್ಯಾಯಪೀಠವು ಗೃಹಿಣಿಯ ಮನೆಗೆಲಸದ ತಿಂಗಳ ಮೌಲ್ಯ 30,000 ರೂಪಾಯಿ ಎಂದು ಹೇಳಿತು.


ಮನೆ ಮತ್ತು ಕುಟುಂಬಕ್ಕಾಗಿ ದುಡಿಯುವ ಹೆಣ್ಣುಮಕ್ಕಳನ್ನು ಬರೇ ಗೃಹಿಣಿಯರೆಂದು ಕರೆಯಬರದು ರಾಷ್ಟ್ರ ನಿರ್ಮಾತೃಗಳು ಎಂದು ಕರೆಯಬೇಕು. ಮನೆಯೊಡತಿಯ ಮನೆಯ ತಿಂಗಳ ದುಡಿಮೆಯ ಮೌಲ್ಯ 30,000 ರೂಪಾಯಿಗಳು ಎಂದು ಸುಪ್ರೀಂ ನ್ಯಾಯ ಪೀಠವು ಹೇಳಿತು.


ವಾಹನ ಅಪಘಾತದಲ್ಲಿ ಹೆಂಡತಿಯನ್ನು ಕಳೆದುಕೊಂಡಿದ್ದ ಒಬ್ಬರು ಹೆಚ್ಚಿನ ಪರಿಹಾರ ಕೋರಿ ಸುಪ್ರೀಂ ನ್ಯಾಯದ ಅಂಗಣ ಏರಿದ್ದರು. ಆ ಪ್ರಕರಣವು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೆ. ಸಿಂಗ್ ಅವರುಗಳಿದ್ದ ನ್ಯಾಯಪೀಠದೆದುರು ವಿಚಾರಣೆಗೆ ಬಂದಿತ್ತು.

ಆಗ ಸುಪ್ರೀಂ ನ್ಯಾಯಪೀಠವು ಮೇಲಿನಂತೆ ಅಭಿಪ್ರಾಯ ಪಟ್ಟಿತು. ಮುನುಷ್ಯನ ವೈಯಕ್ತಿಕ ಬೆಳವಣಿಗೆ ಮತ್ತು ರಾಷ್ಟ್ರದ ಬೆಳವಣಿಗೆ ಎರಡರಲ್ಲೂ ಗೃಹಿಣಿಯರ ಪಾತ್ರ ಗಮನಾರ್ಹವಾಗಿದ್ದು, ಅವರು ದೇಶ ನಿರ್ಮಿಸಿದವರು ಎಂದು ನ್ಯಾಯಪೀಠ ಹೇಳಿತು.

N. K. Singh, Member of Parliament, India; Global Agenda Council on India at the World Economic Forum on India 2012


ಮನೆಯಲ್ಲಿ ಎಲ್ಲದಕ್ಕೂ ದುಡಿಯುವ ಮನೆಯೊಡತಿಯನ್ನು ಬೇರೆಯವರ ದುಡಿಮೆ ಅವಲಂಬಿಸಿದವಳು ಎಂದು ಹೇಳುವುದೇ ವಿಪರ್ಯಾಸ. ನಿಜವಾಗಿ ಕುಟುಂಬದ ಹೊರಗೆ ದುಡಿಯುವವರೆಲ್ಲರೂ ಗೃಹಿಣಿಯನ್ನು ಅವಲಂಬಿಸಿರುತ್ತಾರೆ.

ಆಕೆಯ ಸೇವೆಗೆ ಮನ್ನಣೆ ಸಿಗದಿರುವುದು ಸರಿಯಲ್ಲ ಎಂದೂ ನ್ಯಾಯಪೀಠ ಹೇಳಿತು. ವಿಚಾರಣೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments