ದಿಲ್ಲಿಯಲ್ಲಿ ಇಂಡಿಯಾ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟ ಎರಡೂ ಕುಟಗಳ ಸಭೆ

ಬುಧವಾರ ದಿಲ್ಲಿಯಲ್ಲಿ ಇಂಡಿಯಾ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟ ಎರಡೂ ಕುಟಗಳು ತಮ್ಮ ರಾಜಕೀಯ ತಂತ್ರಗಾರಿಕೆಯ ಬಗೆಗೆ ಸಭೆ ನಡೆಸಿದವು.

ಪಾಟ್ನಾದಿಂದ ಬೆಳಿಗ್ಗೆ ಹತ್ತೂವರೆ ಗಂಟೆಯ ಹೊತ್ತಿಗೆ ಹೊರಟ ವಿಸ್ತಾರ್ ವಿಮಾನದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮತ್ತು ಮಾಜೀ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ದಿಲ್ಲಿಗೆ ಹೊರಟದ್ದು ಭಾರೀ ಗಾಳಿ ಸುದ್ದಿಗಳಿಗೆ ಕಾರಣವಾಗಿತ್ತು. ಕೊನೆಗೆ ನಿತೀಶ್ ಕುಮಾರ್ ಅವರು ಎನ್‌ಡಿಎ ಕೂಟದ ಸಭೆಯಲ್ಲಿ ಭಾಗವಹಿಸಿದರೆ, ತೇಜಸ್ವಿ ಯಾದವ್ ಇಂಡಿಯಾ ಮೈತ್ರಿ ಕೂಟದ ಸಭೆಯಲ್ಲಿ ಭಾಗವಹಿಸಿದ್ದರಿಂದ ಊಹಾಪೂಹಗಳೆಲ್ಲ ಠುಸ್ ಆಯಿತು.

ಚಂದ್ರಬಾಬು ನಾಯ್ಡು ಅವರನ್ನು ಕೂಡ ಪತ್ರಕರ್ತರು ಮುತ್ತಿಕೊಂಡು ಇಂಡಿಯಾ ಕಡೆ ಹೋಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದರು. ಅದೆಲ್ಲ ಮುಂದೆ ನೋಡೋಣ ಎಂದು ಹೇಳಿದ ಅವರು ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದರು. ಇನ್ನೆರಡು ದಿನಗಳಲ್ಲಿ ಈ ಮೈತ್ರಿ ಇದ್ದಂತೆ ಇರುತ್ತದೆಯೇ, ಹೊಸ ರೂಪ ಪಡೆಯುತ್ತದೆಯೇ ಎಂಬುದು ತಿಳಿದು ಬರಲಿದೆ.
