ಪಡುಬಿದ್ರಿ: ಲಯನ್ಸ್ ಜಿಲ್ಲೆ 317ಸಿ, ಪ್ರಾಂತ್ಯ-6ರ ವಲಯ-2ರ ಅಧ್ಯಕ್ಷರಾಗಿ ಪಡುಬಿದ್ರಿಯ ಡಾ. ಮನೋಜ್ ಕುಮಾರ್ ಜೆ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಡಾ. ಮನೋಜ್ ಕುಮಾರ್ ಜೆ. ಶೆಟ್ಟಿ ಅವರು ಲಯನ್ಸ್ ಕ್ಲಬ್ ಪಡುಬಿದ್ರಿಯ ಪೂರ್ವಾಧ್ಯಕ್ಷರಾಗಿ ಕ್ಲಬ್‌ನಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ಸಂಘಟನಾ ಕೌಶಲ್ಯ, ನಾಯಕತ್ವ ಮತ್ತು ಸಮಾಜಸೇವೆಯನ್ನು ಪರಿಗಣಿಸಿ ವಲಯ-2ರ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರ ವ್ಯಾಪ್ತಿಗೆ ಲಯನ್ಸ್ ಕ್ಲಬ್ ಬೆಳ್ಮಣ್, ಲಯನ್ಸ್ ಕ್ಲಬ್ ಮುಂಡ್ಕೂರು, ಲಯನ್ಸ್ ಕ್ಲಬ್ ಮುದರಂಗಡಿ ಹಾಗೂ ಲಯನ್ಸ್ ಕ್ಲಬ್ ಪಡುಬಿದ್ರಿ ಸೇರಿವೆ.

