HomeFresh Newsಲಯನ್ಸ್ ಕ್ಲಬ್ ಪಡುಬಿದ್ರಿಯ 2026-27ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಲಯನ್ಸ್ ಕ್ಲಬ್ ಪಡುಬಿದ್ರಿಯ 2026-27ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಪಡುಬಿದ್ರಿ: ಲಯನ್ಸ್ ಕ್ಲಬ್ ಪಡುಬಿದ್ರಿಯ 2026-27 ನೇ ಸಾಲಿನ ನೂತನ ಅಧ್ಯಕ್ಷ ಲಯನ್ ಮ್ಯಾಕ್ಸಿಮ್ ಡಿಸೋಜಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ನಡೆಯಿತು.

ಪ್ರಥಮ ಉಪ ಜಿಲ್ಲಾ ಗವರ್ನರ್ ಪಿಒಎಇ ಲಯನ್ ಹರಿಪ್ರಸಾದ್ ರೈ ಅವರು ಪದಗ್ರಹಣ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಲಯನ್ಸ್ ಸೇವಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವಂತೆ ಕರೆ ನೀಡಿದರು.

ಪ್ರಾಂತ್ಯ ಅಧ್ಯಕ್ಷ ಥಾಮಸ್ ಲೋಕಸ್, ಪ್ರಾಂತ್ಯ ಕಾರ್ಯದರ್ಶಿ ದಿನೇಶ್ ಕುಮಾರ್, ವಲಯ ಅಧ್ಯಕ್ಷ ಲಯನ್ ಡಾ. ಮನೋಜ್ ಕುಮಾರ್ ಶೆಟ್ಟಿ ಸೇಕ್ರೆಡ್ ಹಾರ್ಟ್ ಚರ್ಚ್ ಉಚ್ಚಿಲ ಇದರ ಧರ್ಮಗುರುಗಳಾದ ವಂದನೀಯ ಜಾಸ್ವಿ ಫೆರ್ನಾಂಡೀಸ್, ನಿಕಟಪೂರ್ವಧ್ಯಕ್ಷ ಪ್ರಗತ್ ಶೆಟ್ಟಿ ಹಾಗೂ ಕಾರ್ಯದರ್ಶಿ ಲಕ್ಷಣ್ ಪೂಜಾರಿ ಮತ್ತು ಕೋಶಾಧಿಕಾರಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.ಸಂತೃಪ್ತಿ ಮನೋಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments