ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ

ಚಾಲನೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾದ ಶಾಲಾ ಬಸ್ಸೊಂದರ ಚಾಲಕನ ಸಮಯ ಪ್ರಜ್ಞೆಯಿಂದ ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪೆರಂಪಳ್ಳಿ ಎಂಬಲ್ಲಿ ಸಂಭವಿಸಿದೆ.

ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿತ್ತು. ಪೆರಪಂಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಮಲ್ವಿನ್ ಡಿಸೋಜ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತೆನ್ನಲಾಗಿದೆ.

accident

ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆಯ ಬದಿಯ ಚರಂಡಿಗೆ ಸರಿಸಿ ನಿಲ್ಲಿಸಿದರು. ಇದರಿಂದ ಕೆಲವು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ತೀವ್ರವಾಗಿ ಅಸ್ವಸ್ಥರಾಗಿರುವ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

govt women polytechnic

Related Posts

Leave a Reply

Your email address will not be published.