HomeFresh Newsಅಕ್ಟೋಬರ್ 22 : ಫಾದರ್ ಮ್ಯಾಥ್ಯು ವಾಸ್ ರವರ ಸ್ಮರಣಾರ್ಥ ಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ)...

ಅಕ್ಟೋಬರ್ 22 : ಫಾದರ್ ಮ್ಯಾಥ್ಯು ವಾಸ್ ರವರ ಸ್ಮರಣಾರ್ಥ ಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್

ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥ ಸೇವೆ ನೀಡಿದ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್ ಇವರ ಸ್ಮರಣಾರ್ಥವಾಗಿ ಕಮ್ಯುನಿಟಿ ಎಂಪವರ್‌ಮೆಂಟ್ ಟ್ರಸ್ಟ್(ರಿ) ಮಂಗಳೂರು, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಶಿಯೇಶನ್ ಮಂಗಳೂರು, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತು ಕೆಥೊಲಿಕ್ ಸಭಾ, ಉಡುಪಿ ಪ್ರದೇಶ (ರಿ) ಇವರ ಸಹಯೋಗದಲ್ಲಿ ಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್ ಅಕ್ಟೋಬರ್ 22, 2023ರ ಭಾನುವಾರದಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಸಂಧರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕೆಥೊಲಿಕ್ ಸಮುದಾಯದ ಕ್ರೀಡಾಳುಗಳನ್ನು ಸನ್ಮಾನಿಸಲು ಯೋಜಿಸಲಾಗಿದೆ. 01.10.2022 ರಿಂಧ 30.09.2023ರವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಳುಗಳ ಹೆಸರನ್ನು ಅಕ್ಟೋಬರ್ 15, 2023 ರೊಳಗೆ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟ್, ಮಿಲಾಗ್ರಿಸ್, ಮಂಗಳೂರು ಇಲ್ಲಿಗೆ ತಲುಪಿಸಬಹುದು ಅಥವಾ ದೂರವಾಣಿ / ವಾಟ್ಸ್‌ಆಪ್ ಸಂಖ್ಯೆ : 9448379689, 9844502279 ಮೂಲಕವೂ ತಿಳಿಸಬಹುದಾಗಿದೆ.

ಟೂರ್ನಮೆಂಟಿನ ವಿವರ ಮತ್ತು ನಿಬಂಧನೆಗಳನ್ನು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಚರ್ಚ್‌ಗಳಿಗೆ ಕಳುಹಿಸಲಾಗಿದೆ. ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಪಂಗಡಗಳು 15.10.2023ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.
ಪ್ರತಿ ವಿಜೇತ ಪಂಗಡಗಳಿಗೆ ರೂ. 25000 (ಪ್ರಥಮ), ರೂ.15000 (ದ್ವಿತೀಯ), ರೂ.7500 (ತೃತೀಯ) ಬಹುಮಾನಗಳಿದ್ದು ಪ್ರಶಸ್ತಿ ಫಲಕವನ್ನು ನೀಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಫಾದರ್ ಮ್ಯಾಥ್ಯೂ ವಾಸ್ ಮೆಮೋರಿಯಲ್ ಇಂಟರ್ ಪ್ಯಾರಿಶ್ ಟೂರ್ನಮೆಂಟ್‌ನ ಸಂಚಾಲಕರಾದ ಅನಿಲ್ ಲೋಬೊ, ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸೆಲೆಸ್ಟಿನ್ ಡಿಸೋಜ, ಮಂಗಳೂರು ಪ್ರದೇಶದ ಕ್ಯಾಥೊಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಡಿಸೋಜ, ಉಡುಪಿ ಪ್ರದೇಶದ ಕ್ಯಾಥೊಲಿಕ್ ಸಭಾದ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಮಂಗಳೂರು ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಕೋಶಾಧಿಕಾರಿ ಮೆಲ್ವಿನ್ ಪೆರಿಸ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments