HomeUncategorizedಸರ್ಕಾರಗಳು ಕನಿಷ್ಟ ಕೂಲಿಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸ ಬೇಕು : ವಸಂತ ಆಚಾರಿ

ಸರ್ಕಾರಗಳು ಕನಿಷ್ಟ ಕೂಲಿಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸ ಬೇಕು : ವಸಂತ ಆಚಾರಿ

ಮೂಡುಬಿದಿರೆ : ಕರ್ನಾಟಕ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ಕಾರ್ಮಿಕ ಕನಿಷ್ಟ ಕೂಲಿ ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕೆಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಅವರು ಆಗ್ರಹಿಸಿದರು.

ಅವರು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಕಾರ್ಮಿಕ ಸಮಾವೇಶವನ್ನು ಉಧ್ಘಾಟಿಸಿ ಮಾತ ನಾಡಿದರು.
ರಾಜ್ಯ ಸರ್ಕಾರ ಮಾಲೀಕ ವರ್ಗದ ಒತ್ತಡಕ್ಕೆ ಬಲಿ ಬೀಳದೆ ಕನಿಷ್ಟ ಕೂಲಿಯನ್ನು ಎತ್ತಿ ಹಿಡಿದು ಜಾರಿಗೊಳಿಸಿ ಬೇಕೆಂದ ಅವರು ಬಾಕಿ ಇರುವ ರಂಗಕ್ಕೂ ಕನಿಷ್ಟ ಕೂಲಿಯನ್ನು ಪ್ರಕಟಿಸಿ ಬೇಕೆಂದರು. ಮುಂದುವರಿದು ಅವರು ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆ ಕಾರ್ಮಿಕರಿಗೆ ಮರಣ ಸಂಹಿತೆ ಎಂದರು.

ಸಮಾವೇಶದ ಅಧ್ಯಕ್ಷತೆ ಯನ್ನು ಕಾರ್ಮಿಕ ಮುಂದಾಳು ಶಂಕರ ವಾಲ್ಪಾಡಿಯವರು ವಹಿಸಿದ್ದರು. ಹಿರಿಯ ಮುಂದಾಳು ರಮಣಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಕೆ.ಯಾದವ ಶೆಟ್ಟಿ ಅವರು ಸಮಾರೋಪ ಭಾಷಣವನ್ನು ಮಾಡಿದರು.ವೇದಿಕೆಯಲ್ಲಿ ಕಾರ್ಮಿಕ ಮುಂದಾಳುಗಳಾದ ಗಿರಿಜ,ಲಕ್ಷ್ಮಿ,ಶೋಭಾ ಅವರು ಉಪಸ್ಥಿತರಿದ್ದರು.ಸಮಾವೇಶದಲ್ಲಿ ರಾಧಾ ಸಂಚಾಲಕರಾಗಿ, ಶಂಕರ ವಾಲ್ಪಾಡಿ ಅವರು ಸಹ ಸಂಚಾಲಕರಾಗಿದ್ದು 15 ಮಂದಿಯ ತಾಲೂಕು ಸಮನ್ವಯ ಸಮಿತಿಯನ್ನು ರಚಿಸಲಾಯಿತು.ರಾಧಾ ಸ್ವಾಗತಿಸಿದರು. ಕೃಷ್ಣಪ್ಪ ನಡಿಗುಡ್ಡೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments