ಯೂರೋಪಿನಲ್ಲಿ ಬಹುತೇಕ ಕಡೆ 41-42 ಡಿಗ್ರಿ ಸೆಲ್ಸಿಯಸ್ ಬಿಸಿ ಮಟ್ಟ ಇದ್ದು, ಇದು ಇತಿಹಾಸದಲ್ಲಿ ಕಂಡರಿಯದ್ದು ಎನ್ನಲಾಗಿದೆ.
ಯೂರೋಪಿನಲ್ಲಿ ಬೇಸಿಗೆಯಲ್ಲೂ 30-32 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು ಈಗ ಭಯಂಕರ ಎನಿಸಿದೆ. ಸ್ಪೆಯಿನ್ ದೇಶದಲ್ಲೂ ಬಿಸಿ ಗಾಳಿಗೆ ಸಾವಿರಕ್ಕೂ ಹೆಚ್ಚು ಜನ ಸಾವು ಕಂಡಿದ್ದಾರೆ.
ಸಾವಿರ ಮೀರಿ ಮಂದಿ ಸತ್ತಿರುವ ಫ್ರಾನ್ಸಿನಲ್ಲಿ ಸಾವಿರಾರು ಜನರು ಬಿಸಿಯಾಘಾತಕ್ಕೆ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗಳಲ್ಲಿ ಅವರಿಗೆಲ್ಲ ತಣ್ಣೀರು ಸ್ನಾನದ ವ್ಯವಸ್ಥೆ ಮಾಡಲಾಗಿದೆ.
ಪೆÇೀರ್ಚುಗಲ್‍ನ ಕೆಲವೆಡೆ ಅತಿ ಹೆಚ್ಚು 44 ಡಿಗ್ರಿ ಸೆಲ್ಸಿಯಸ್ ಬಿಸಿಮಟ್ಟ ದಾಖಲಾಗಿದೆ. ಇದು ಯೂರೋಪು ಎಂದೂ ಕಂಡುದಲ್ಲ ಎನ್ನಲಾಗಿದೆ.
ಸಮಶೀತೋಷ್ಣ ಮತ್ತು ಶೀತವಲಯದ ಯೂರೋಪಿನ ಮನೆಗಳಲ್ಲಿ ಏರ್ ಕಂಡೀಶನರ್ ತೀರಾ ಕಡಿಮೆ. ಎಲ್ಲರ ಮನೆಗಳಲ್ಲಿ ಚಳಿ ಓಡಿಸಲು ಅಗ್ಗಿಷ್ಟಿಕೆ ಇರುತ್ತದೆ.


