HomeFresh Newsಹೆಜಮಾಡಿ : ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಹೊಡೆದಾಟ ಹಲವರಿಗೆ ಗಾಯ

ಹೆಜಮಾಡಿ : ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಹೊಡೆದಾಟ ಹಲವರಿಗೆ ಗಾಯ

ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಹಲವು ಮಂದಿ ಗಾಯಗೊಂಡ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಎರಡು ತಂಡಗಳ ಮಧ್ಯೆ ಮಾರಕಾಯುಧಗಳಿಂದ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಸಂದೇಶ್ ಶೆಟ್ಟಿ ಹಾಗೂ ಸೂರಜ್ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಪರಸ್ಪರ ರೋಷದಿಂದ ಬೈದಾಡಿಕೊಂಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂದೇಶ್ ಶೆಟ್ಟಿ ಮತ್ತಿತರರು ಕಾರಿನಲ್ಲಿ ಬಂದು ಹೆಜಮಾಡಿ ಬಿಲ್ಲವ ಸಂಘದ ಬಳಿ ಸೂರಜ್ ಮತ್ತಿತರರು ಬರುತ್ತಿದ್ದ ಕಾರಿಗೆ ಅಡ್ಡ ಹಾಕಿ ಹಲ್ಲೆಗೆ ಮುಂದಾದಾಗ ಎರಡೂ ತಂಡಗಳ ಮಧ್ಯೆ ಮಾರಾಕಾಯುಧದಲ್ಲಿ ಹಲ್ಲೆ ನಡೆದಿದೆ.

ಘಟನೆಯಿಂದ ಸಂದೇಶ್ ಶೆಟ್ಟಿ, ಸೂರಜ್, ಶರತ್ ಭಂಡಾರಿ, ಶರತ್ ಸಹಿತ ಹಲವರು ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಎರಡು ತಂಡಗಳು ನೀಡಿದ ದೂರಿನಂತೆ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments