ಇರ್ವತ್ತೂರು ಕಲ್ಲಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ಟ್ರಸ್ಟ್ ಐದನೇ ವರ್ಷದ ಸಂಭ್ರಮ

ಬಂಟ್ವಾಳ: ಇರ್ವತ್ತೂರು ಕಲ್ಲಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ಟ್ರಸ್ಟ್ ಇದರ ಐದನೇ ವರ್ಷದ ಸಂಭ್ರಮ ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು. ದೇವಳದ ತಂತ್ರಿ ಶ್ರೀಪಾದ ಪಾಂಗಣ್ಣಾಯ ನಡ್ವಂತಾಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಪ್ರಗತಿಯಲ್ಲಿ ಈ ಯುವಕರ ಸಂಘಟನೆಯು ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿ ಮಾತನಾಡಿ ಸಮಾಜದ ಅಭ್ಯುದಯದೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಯುವಸಂಘಟನೆಗಳ ಪಾತ್ರ ಮಹತ್ತರವಾದುದು ಎಂದರು. ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ, ಉದ್ಯಮಿ ಟಿ.ಹರೀಂದ್ರ ಪೈ, ತಾಲೂಕು ಪಂಚಾಯತು ಮಾಜಿ ಸದಸ್ಯ ರಮೇಶ ಪೂಜಾರಿ ಕುಡ್ಮೇರು, ಪಂಜಿಕಲ್ಲು ಗ್ರಾಮ ಪಂಚಾಯತು ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಪಿ.ಶೇಖರ್ ಶುಭ ಹಾರೈಸಿದರು. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಬಂಗೇರಾ ಕಲ್ಲುಕೊಡಂಗೆ, ಪಂಚಾಯತ್ ಸದಸ್ಯರಾದ ಶುಭಕರ ಶೆಟ್ಟಿ ಮಠ, ನವೀನ್ಚಂದ್ರ ಶೆಟ್ಟಿ, ಸುಧೀಂದ್ರ ಶೆಟ್ಟಿ ಎರ್ಮೆನಾಡು, ಉದ್ಯಮಿಗಳಾದ ಅಬ್ದುಲ್ ನಝೀರ್ ಸಾಹೇಬ್, ಡೇನಿಸ್ ಫೆರ್ನಾಂಡೀಸ್ ದೇರೊಟ್ಟು, ಶೇಖರ್ ಪೂಜಾರಿ ಅಗಲ್ದೋಡಿ, ಕಿಶೋರ್ ಕುಮಾರ್ ನಾಯರ್ಕುಮೇರು, ಯುವಕರ ಟ್ರಸ್ಟ್ ಅಧ್ಯಕ್ಷ ರಮೇಶ್ ನಾಯ್ಕ್ ಕೈಮಾರು, ಕಾರ್ಯದರ್ಶಿ ಸುರೇಶ್ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು. ಪುನೀತ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ವರದಿ: ಗೋಪಾಲ ಅಂಚ

Related Posts

Leave a Reply

Your email address will not be published.