HomeFresh Newsಖಾಸಗಿ ಬಸ್ ಮತ್ತು ಸ್ಕೂಟಿ ಮುಖಾಮುಖಿ : ಸವಾರ ಸ್ಥಳದಲ್ಲೇ ಸಾವು

ಖಾಸಗಿ ಬಸ್ ಮತ್ತು ಸ್ಕೂಟಿ ಮುಖಾಮುಖಿ : ಸವಾರ ಸ್ಥಳದಲ್ಲೇ ಸಾವು

ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಕೆಳಪೇಟೆಯಲ್ಲಿ ಬಸ್ ಮತ್ತು ಸ್ಕೂಟಿ ನಡುವೆ‌ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜೂ.8 ರಂದು ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಜಾರ್ಕಳದ ಕಾರ್ತಿಕ್‌ (26) ಎಂದು ಗುರುತಿಸಲಾಗಿದೆ.

ಕಲ್ಲಿನ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಕೆಲಸ ಮುಗಿಸಿ ಮನೆಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಬೈಲೂರಿನಿಂದ ಜಾರ್ಕಳ ಕಡೆಗೆ ಸಾಗುತ್ತಿದ್ದ ಸ್ಕೂಟಿ ಮಧ್ಯೆ ಡಿಕ್ಕಿ ಹೊಡೆದಿದ್ದು, ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತನ ಸ್ಕೂಟಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಮೃತರು ಪತ್ನಿ ಮತ್ತು ಹತ್ತು ತಿಂಗಳ ಮಗುವನ್ನು ತೊರೆದ ದುರ್ದೈವಿ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆ ಪೊಲೀಸರು ಆಗಮಿಸಿ‌ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments