HomeFresh Newsಕಾಸರಗೋಡು: ನೀರ್ಚಾಲು ಪೆರಡಾಲ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನೆ

ಕಾಸರಗೋಡು: ನೀರ್ಚಾಲು ಪೆರಡಾಲ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನೆ

ಕಾಸರಗೋಡಿನ ನೀರ್ಚಾಲು ಪೆರಡಾಲದ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಜೈ ತುಲುನಾಡ್ ಸಂಘಟನೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಜೊತೆ ಸೇರಿಕೊಂಡು ಮಹಾಜನ ಸಂಸ್ಕೃತ ಕಾಲೇಜ್ ನೀರ್ಚಾಲುವಿನ ಆಶ್ರಯದಲ್ಲಿ ‘ಬಲೆ ತುಲು ಲಿಪಿ ಕಲ್ಪುಗ’ ತರಗತಿಯು ಉದ್ಘಾಟನೆಗೊಂಡಿತ್ತು. ಹಿರಿಯರೂ, ಶಾಲಾ ಮೆನೇಜರ್ ಜಯದೇವ ಖಂಡಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಕಾಶ್ ಎಂ.ಕೆ, ತುಲು ಲಿಪಿ ಅಧ್ಯಾಪಕಿಯಾದ ಜೈ ತುಲುನಾಡ್ ಸಂಘಟನೆಯ ಸದಸ್ಯೆ ತುಲು ವಿಕಿಪೀಡಿಯ ಲೇಖಕಿಯಾಗಿರುವ ವಿನೋದ ಪ್ರಸಾದ್ ರೈ ಬದಿಯಡ್ಕ, ವಿಜಯರಾಜ ಪುಣಿಂಚತ್ತಾಯ, ಜೈ ತುಲುನಾಡ್ ಸಂಘಟನೆಯ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಉಮೇಶ್ ಸಿರಿಯಾ ಮೊದಲಾದವರು ಉಪಸ್ಥಿತರಿದ್ದರು. ಜೈ ತುಲುನಾಡ್ ಸಂಘಟನೆ ಕಾಸರಗೋಡು ಮಂಡಲದ ಅಧ್ಯಕ್ಷರಾದ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ, ಶಾಲೆಯ ಅಧ್ಯಾಪಿಕೆ ಶೈಲಜಾ ಟೀಚರ್, ಡಾ. ವಿಧ್ಯಾಲಕ್ಷ್ಮಿ ಜೈ ತುಲುನಾಡ್ ಕಾಸರಗೋಡು ಉಪಾಧ್ಯಕ್ಷರಾದ ಶ್ರೀನಿವಾಸ ಆಳ್ವ, ಹರಿಕಾಂತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments