ಲಂಡನ್ನಿನ ರಸ್ತೆಯಲ್ಲಿ ಪೋಲರಾಯಿಡ್ ಫೋಟೋ ಮಾರಿ ಭಾರತೀಯ ಯುವಕನೊಬ್ಬ ಹತ್ತು ನಿಮಿಷದಲ್ಲಿ ಹತ್ತು ಡಾಲರ್ ಸಂಪಾದಿಸಿದನಾದರೂ, ಪೋಲೀಸರು ಬಂದು ಎಲ್ಲದಕ್ಕೂ ಕಲ್ಲು ಹಾಕಿದರು.
ಪೋಲರಾಯಿಡ್ ಕ್ಯಾಮೆರಾದಿಂದ ಕೂಡಲೆ ತೆಗೆದು ನೀಡುವ ಫೋಟೋವನ್ನು ಪೋಲರಾಯಿಡ್ ಫೋಟೋ ಎನ್ನುವರು. ಕೇರಳ ಮೂಲದ ವಿಷ್ಣು ವಿಜಯಾಧರನ್ ಹೀಗೆ ಹತ್ತು ನಿಮಿಷದಲ್ಲಿ ಹತ್ತು ಪೌಂಡು ಎಂದರೆ 1,200 ರೂಪಾಯಿ ಸಂಪಾದಿಸಿದ ಭೂಪ. ಇದೆಲ್ಲ ಇನ್‍ಸ್ಟಾಗ್ರಾಮ್ ವೀಡಿಯೋಗಾಗಿ ಯೋಜಿಸಿ ಮಾಡಿದ್ದಾಗಿದೆ. ಲಂಡನ್ನಿನಲ್ಲಿ ಕೆಲಸ ಮಾಡುವ ಈ ಯುವಕನು ಈ ಸಾಹಸದ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸುದ್ದಿ ಮಾಡಿದ್ದಾನೆ.
ಹತ್ತು ನಿಮಿಷದ ವ್ಯಾಪಾರದ ಹೊತ್ತಿಗೆ ಆಗಮಿಸಿದ ಪೋಲೀಸರು ಮೊದಲು ವಶಕ್ಕೆ ಪಡೆದು, ಅನಂತರ ಎಚ್ಚರಿಸಿ ಬಿಟ್ಟುಬಿಟ್ಟಿದ್ದಾರೆ. ರಸ್ತೆ ವ್ಯಾಪಾರದ ಸಂಪಾದನೆ ಹೇಗೆ ಎಂದು ನೋಡಲು ತಾನು ಹೀಗೆ ಮಾಡಿದ್ದಾಗಿ ವಿಷ್ಣು ವಿಜಯಾಧರನ್ ಹೇಳಿಕೊಂಡಿದ್ದಾನೆ. ಬೆಳಿಗ್ಗೆ 9ರಿಂದ 5ರವರೆಗೆ ಒಂದು ಕೆಲಸದಲ್ಲಿರುವ ಆತನು 110 ಪೌಂಡ್ ಎಂದರೆ ರೂ. 14,000ಕ್ಕೆ ಕೋಡಕ್ ಪೋಲರಾಯಿಡ್ ಕ್ಯಾಮೆರಾ ಖರೀದಿಸಿ ಇದನ್ನು ಮಾಡಿದ್ದಾನೆ. ಐದು ಪೌಂಡಿನಂತೆ ಎರಡು ಫೋಟೋ ಕೊಟ್ಟು ಹತ್ತು ಪೌಂಡ್ ಸಂಪಾದಿಸಿದ್ದಾನೆ. ಕ್ಯೂಟ್ ಪೌಂಡ್ 5 ಪೋಲರಾಯಿಡ್ಸ್ ಸಣ್ಣ ಕಾಗದದ ಅಟ್ಟೆ ಕೂಡ ಆತ ಹಿಡಿದು ವ್ಯವಹಾರ ಮಾಡಿದ್ದ.
ಹತ್ತು ನಿಮಿಷದಲ್ಲಿ ಪೌಂಡ್ 1,200 ರೂಪಾಯಿ ;ಕೇರಳದ ಯುವಕನ ರಸ್ತೆ ಬದಿಯ ಸಂಪಾದನೆ ;ಪೋಲೀಸರು ಬಂದು ಬಂಧಿಸಿ ಕಸಿದರು ಲಾಭ
RELATED ARTICLES
