ಲವ್ ಜಿಹಾದ್ ಗೆ ನೀವು  ಬಲಿಯಾಗಬೇಡಿ ಕಟೌಟ್

ಪುತ್ತೂರು; ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆ. ದೇಹವನ್ನು 35 ತುಂಡು ಮಾಡಿದರು. ಕಾರಣ ಲವ್ ಜಿಹಾದ್. ಇದಕ್ಕೆ ನೀವು ಬಲಿಯಾಗಬೇಡಿ’ ಕಟೌಟ್ ಅನ್ನು ವೈದ್ಯ, ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಡಾ.ಎಂ.ಕೆ. ಪ್ರಸಾದ್ ಅವರ ಹೆಸರಿನಲ್ಲಿ ಅಳವಡಿಸಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಎಂ. ಕೆ. ಪ್ರಸಾದ್’ ನಾನು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಅಲ್ಲ. ಆದರೆ, ನಮ್ಮ ಸುತ್ತಮುತ್ತಲ ಬೆಳವಣಿಗೆ ಬಗ್ಗೆ ಹದಿಹರೆಯದವರಿಗೆ ಅರಿವು ಇರಬೇಕು. ಬಣ್ಣದ ಆಮಿಷಗಳನ್ನು ಒಡ್ಡಿ ಏನೇನು ಮಾಡುತ್ತಾರೆ ಎಂಬುದೂ ಗೊತ್ತಿರಬೇಕು. ಅದಕ್ಕಾಗಿ ನಾನೇ ಈ ಫಲಕ ಹಾಕಿಸಿದ್ದೇನೆ. ಸ್ಥಳೀಯ ಎಲ್ಲಾ ಕಾಲೇಜುಗಳಿಗೂ ಭಿತ್ತಿಪತ್ರಗಳನ್ನು ಕಳುಹಿಸಿದ್ದೇನೆ. ಯಾವುದೇ ಸಂಘಟನೆ ಅಥವಾ ಸಂಘ-ಸಂಸ್ಥೆ ಪರವಾಗಿ ಮಾಡಿಲ್ಲ. ವೈಯಕ್ತಿಕ ಹೆಸರಿನಲ್ಲಿಯೇ ಕಳುಹಿಸಿದ್ದೇನೆ’ ಎಂದಿದ್ದಾರೆ.

Related Posts

Leave a Reply

Your email address will not be published.