HomeFresh Newsಮೂರು ಮೂರ್ಖ ಮದುವೆಗಳಿಂದ ನಷ್ಟ | ಹದಿನೇಳು ವರುಷ ಆಯುಷ್ಯ ಕಳೆದೋಯ್ತು | ಮಲಯಾಳಂ ನಟಿ...

ಮೂರು ಮೂರ್ಖ ಮದುವೆಗಳಿಂದ ನಷ್ಟ | ಹದಿನೇಳು ವರುಷ ಆಯುಷ್ಯ ಕಳೆದೋಯ್ತು | ಮಲಯಾಳಂ ನಟಿ ಮೀರಾ ವಾಸುದೇವನ್

ಮೂರು ಮೂರ್ಖ ಮದುವೆಗಳಿಂದ ನನ್ನ ಹದಿನೇಳು ವರುಷಗಳು ಹಾಳಾಗಿ ಹೋಯ್ತು ಎಂದು ನಲವತ್ತನಾಲ್ಕರ ಪ್ರಾಯದಲ್ಲಿ ಮಲಯಾಳಂ ನಟಿ ಮೀರಾ ವಾಸುದೇವನ್ ಹೇಳಿದರು.2003ರ ಸೂಪರ್ ಹಿಟ್ ಹಿಂದಿ ಚಿತ್ರ ರೂಲ್ಸ್: ಪ್ಯಾರ್ ಕಾ ಸೂಪರ್ ಹಿಟ್ ಫಾರ್ಮುಲಾ ಎಂದು ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದವರು ಮೀರಾ ವಾಸುದೇವನ್. ಚಿತ್ರರಂಗದಲ್ಲಿ ಮತ್ತಷ್ಟು ಮಿಂಚಲು ಇದ್ದ ಅವಕಾಶಗಳು ನನ್ನ ಮೂರು ಮೂರ್ಖ ಮದುವೆಗಳಿಂದ ನಷ್ಟವಾಯಿತು ಎಂದು ಈಗ ನಲ್ವತ್ತನಾಲ್ಕರ ಪ್ರಾಯದ ಮೀರಾ ಹೇಳಿದ್ದಾರೆ.


ನನ್ನನ್ನು, ನನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳದ ಮೂವರ ಜೊತೆಗೆ ನನ್ನ ಹದಿನೇಳು ವರುಷಗಳನ್ನು ಹಾಳು ಮಾಡಿದೆ ಮತ್ತು ನನ್ನ ಚಿತ್ರಜೀವನಕ್ಕೆ ಕೂಡ ಮಿತಿ ಬಿತ್ತು ಎಂದು ಮೀರಾ ತನ್ನ ಹಿಂಬದುಕು ಕೆದಕುತ್ತ ನಿನ್ನೆ ಹೇಳಿದರು. ನನ್ನ ಮಗನಿಗೂ ಆಗಾಗ ನನ್ನ ಹದಿನೇಳು ವರುಷ ಹಾಳಾದುದರ ಬಗೆಗೆ ಹೇಳುತ್ತೇನೆ. ಸಿನಿಮಾ, ಫಿಟ್ನೆಸ್, ಸಾಮಾಜಿಕ ವಲಯ ಕಟ್ಟುವುದು ತಪ್ಪಿತು ಎಂದು ಮೂವೀ ವರ್‍ಲ್ಡ್ ಮೀಡಿಯಾದ ಧನ್ಯಾ ವರ್ಮಾ ಜೊತೆಗೆ ಮಾತನಾಡುತ್ತ ಹೇಳಿದರು.


ನನ್ನ ತಂದೆ, ತಾಯಿ, ಸಹೋದರಿಯ ಜೊತೆಗೆ ಕಳೆಯಬೇಕಿದ್ದ ಸ್ವರ್ಣ ಕಾಲ ಕೂಡ ಈ ಮದುವೆಗಳಿಂದ ಹಾಳಾಯಿತು. 2005ರಲ್ಲಿ ಮೀರಾರು ಛಾಯಾಗ್ರಹಣ ಸಂಬಂಧದ ವಿಶಾಲ್ ಅಗರ್ವಾಲ್‌ರನ್ನು ಮದುವೆಯಾದರು. 2010ರಲ್ಲಿ ಬೇರಾದರು. 2011ರಲ್ಲಿ ನಟ ಜಾನ್ ಕೊಕ್ಕಮ್‌ರನ್ನು ವಿವಾಹವಾದರು. ಅವರಿಗೊಬ್ಬ ಮಗನಿದ್ದಾನೆ; 2016ರಲ್ಲಿ ಅವರು ದೂರಾದರು. 2024ರ ಮೇ ತಿಂಗಳಲ್ಲಿ ಛಾಯಾಗ್ರಾಹಕ ವಿಪಿನ್ ಪುತಿಯಂಕಮ್‌ರನ್ನು ಲಗ್ನವಾದ ಅವರು 2025ರ ಆಗಸ್ಟ್‌ನಲ್ಲಿ ಟಾಟಾ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments