HomeFresh Newsಡಿ .16 ಮಂಗಳೂರಿನ ಕೆಲವೆಡೆ  ನೀರು ಸರಬರಾಜಿನಲ್ಲಿ ವ್ಯತ್ಯಯ

ಡಿ .16 ಮಂಗಳೂರಿನ ಕೆಲವೆಡೆ  ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಹೀಗಾಗಿ ಮಂಗಳೂರು ನಗರದ ವಿವಿಧೆಡೆ ಭಾನುವಾರ ಡಿ .16 ರ ಮುಂಜಾನೆಯಿಂದ 24 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ತುಂಬೆ ಹೆಚ್ ಎಲ್ ಪಿ ಎಸ್ ರೇಚಕ ಸ್ಥಾವರದಿಂದ ಪಣಂಬೂರಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯೂ ಬಿಜೈ ಚರ್ಚ್ ರೋಡ್ ಬ್ರಿಡ್ಜ್ ಬಳಿ , ಕೂಳೂರು ಸೇತುವೆ ಬಳಿ, ಎಂ ಸಿ ಎಫ್ ಬಳಿ ನೀರು ಸೋರಿಕೆ ಉಂಟಾಗಿರುವ ಹಿನ್ನೆಲೆ ತುರ್ತಾಗಿ ದುರಸ್ತಿ ಕಾಮಗಾರಿಗೆ ಪಾಲಿಕೆಯು ಮುಂದಾಗಿದೆ.ಡಿ.16 ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಡಿ.12 ರ ಶುಕ್ರವಾರ ಬೆಳಿಗ್ಗೆ 6 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಸುರತ್ಕಲ್, ಪಣಂಬೂರು, ಕಾನ, ಬಾಳ, , ಕಾಟಿಪಳ್ಳ, ಮುಂಚೂರು, ಎನ್ ಐ ಟಿ ಕೆ , ಸಸಿಹಿತ್ಲು , ಕೂಳೂರು, ಕೊಟ್ಟಾರ ಮುಂತಾದೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.



RELATED ARTICLES

LEAVE A REPLY

Please enter your comment!
Please enter your name here

Most Popular

Recent Comments