ದಸರಾ ಬಂತೆಂದರೆ ಎಲ್ಲೆಡೆ ಸಂಭ್ರಮದ ವಾತಾವರಣ…. ಅದರಲ್ಲೂ ಕರಾವಳಿಯಲ್ಲಿ ಹುಲಿವೇಷದ್ದೇ ಕಾರುಬಾರು, ಹುಲಿವೇಷಕ್ಕೆ ಹೈಲೆಟ್ ಆಗಿರುವುದು ಹುಲಿಮುಖದ ಆಕಾರ….ಅದಕ್ಕಾಗಿಯೇ ಮಂಗಳೂರಿನ ಯುವಕನೋರ್ವ 3ಡಿ ಟೈಗರ್ ಫೇಸ್ ಮೌಲ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಾದ್ರೆ ಆತ ಯಾರು ಎನ್ನುವ ಕುತೂಹಲ ನಿಮ್ಮಲ್ಲಿದ್ರೆ. ಈ ಸ್ಟೋರಿ ನೋಡಿ..
ಇವ್ರ ಹೆಸರು ಅನಿಲ್ ಕುಮಾರ್, ಮಂಗಳೂರಿನ ಕೋಡಿಕಲ್ ನಿವಾಸಿಯಾಗಿರುವ ಇವರು ಬೈಕಂಪಾಡಿಯ ಪ್ರೈಮಸಿ ಕಂಪನಿಯಲ್ಲಿ ಗ್ರಾಫಿಕ್ಸ್ ಡಿಸೈಸರ್ ಆಗಿದ್ದು, ಫ್ರಿ ಸಮಯದಲ್ಲಿ ತ್ರಿಡಿ ಟೈಗರ್ ಫೇಸ್ ಮೌಲ್ಡ್ ಅನ್ನು ತಯಾರಿಸುತ್ತಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ಹುಲಿವೇಷಕ್ಕಾಗಿ ತ್ರಿಡಿ ಟೈಗರ್ ಫೇಸ್ ಮೌಲ್ಡ್ ಮಾಡುವ ಮೂಲಕ ದೇಶ ವಿದೇಶದಲ್ಲೂ ಗಮನ ಸೆಳೆಯುತ್ತಿದ್ದಾರೆ. ಇವರು ತಯಾರು ಮಾಡುವ ಹುಲಿಮುಖದ ಆಕಾರವು ಬಿರುವೆರ್ ಕುಡ್ಲ ಹಾಗೂ ಬರ್ಕೆ ಫ್ರೆಂಡ್, ಶಿವ ಫ್ರೆಂಡ್ಸ್, ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಬೆಂಗಳೂರು, ದುಬೈ, ಕತ್ತಾರು ದೇಶಕ್ಕೆ ರವಾನೆ ಆಗುತ್ತಿದೆ.

ಯು. ಅನಿಲ್ ಕುಮಾರ್, (ಕಲಾವಿದ ) ಬೈಕಂಪಾಡಿಯ ಪ್ರೈಮಸಿ ಕಂಪೆನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಉದ್ಯೋಗ ಮಾಡುತ್ತಿರುವ ಇವರು ಬಿಡುವಿನ ಸಮಯದಲ್ಲಿ 3ಡಿ ಟೈಗರ್ ಫೇಸ್ ಮೌಲ್ಡ್ ಮಾಡ್ತಾರೆ. ಇವರು ಮಾಡುವ ಹುಲಿಮುಖದ ಆಕಾರ ಬಿಳಿ, ಹಳದಿ, ಕಪ್ಪು ಹೀಗೆ ಬೇರೆ ಬೇರೆ ಬಣ್ಣಗಳಲ್ಲೂ ಕಾಣಸಿಗುತ್ತದೆ.

ಇದನ್ನು ಹುಲಿವೇಷಧಾ ರಿಗಳಿಗೆ ಮತ್ತು ಮನೆ, ಕಛೇರಿಗಳಲ್ಲಿ ಶೋಪೀಸ್ ಆಗಿ ಉಪಯೋಗಿಸಬಹುದು. ಇದರ ಒಳಗಡೆ ಹೆಲ್ಮೆಟ್ ಕ್ಯಾಪ್ ಅಳವಡಿಸಲಾಗಿದೆ.ಒಟ್ಟಿನಲ್ಲಿ ಮಂಗಳೂರಿನ ಯುವಕನೋರ್ವ 3ಡಿ ಟೈಗರ್ ಫೇಸ್ ಮೋಡ್ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

