HomeFresh Newsಮಂಗಳೂರು: ತನಿಷ್ಕ್ ಜ್ಯುವೆಲ್ಲರಿಯಲ್ಲಿ ವರಮಹಾಲಕ್ಷ್ಮೀ ಪೂಜೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

ಮಂಗಳೂರು: ತನಿಷ್ಕ್ ಜ್ಯುವೆಲ್ಲರಿಯಲ್ಲಿ ವರಮಹಾಲಕ್ಷ್ಮೀ ಪೂಜೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

ಮಂಗಳೂರಿನ ಜ್ಯೋತಿ ಸರ್ಕಲ್‍ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ತನಿಷ್ಕ್ ಜ್ಯುವೆಲ್ಲರಿ ಶ್ರೀ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿಂದ ನಡೆಯಿತು. ವರಮಹಾಲಕ್ಷ್ಮೀ ಪೂಜೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‍ಗಳನ್ನು ನೀಡಲಾಗುತ್ತಿದೆ.
ಕಾರ್ಯಕ್ರಮವನ್ನು ಗ್ರಾಹಕರಾದ ಭರತ್ ಉಳ್ಳಾಲ್ ದಂಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಟಾಟಾ ಎಂದರೆ ಜಗತ್ತಿನಲ್ಲಿಯೇ ಒಂದು ನಂಬಿಕೆಯ ಹೆಸರಾಗಿದ್ದು, ಟಾಟಾ ತನಿಷ್ಕ್ ಮಳಿಗೆಗೆ ಭೇಟಿ ನೀಡಿದಾಗ ನಂಬಿಕೆಯ ಪ್ರಪಂಚಕ್ಕೆ ಕಾಲಿಟ್ಟಿರುವ ಅನುಭವವಾಗುತ್ತದೆ. ಇಲ್ಲಿನ ಸಿಬ್ಬಂದಿಗಳ ವಿನಯದ ಸೇವೆ ಮತ್ತು ಪರಿಶುದ್ಧತೆಯಿಂದಾಗಿ ಈ ಸಂಸ್ಥೆ ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದರು.

ತನಿಷ್ಕ್ ನ ಫ್ಲೋರ್ ಮ್ಯಾನೇಜರ್ ಸುಬ್ರಮಣ್ಯ ಎ.ಎಸ್ ಮಾತನಾಡಿ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗಿದ್ದು, ಪ್ರತೀ ಖರೀದಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ನಮ್ಮಲ್ಲಿ ವಿವಿಧ ವಿನ್ಯಾಸಗಳ ಆಭರಣಗಳ ಸಂಗ್ರಹಗಳಿವೆ. ಒಮ್ಮೆ ಮಳಿಗೆಗೆ ಭೇಟಿ ನಿಡಿ ನಿಮಗಿಷ್ಟವಾದ ಆಭರಣ ಖರೀದಿಸಿ ಎಂದರು.

ಸಂಸ್ಥೆಯ ಫ್ರಾಂಚೈಸಿ ಖಾದರ್ ಹರೂನ್ ಅವರು ಮಾತನಾಡಿ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗ್ರಾಹಕರಿಗೆ 4 ದಿನಗಳ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ಖರೀದಿಗೆ 5 ರಿಂದ 20% ರಿಯಾಯಿತಿ ನೀಡಲಾಗುತ್ತಿದ್ದು, ವಿಶೇಷವಾಗಿ ಚಿನ್ನದ ಆಭರಣಗಳ ಎಕ್ಸ್‍ಚೇಂಜ್‍ನ್ನು ಆಯೋಜಿಸಿದ್ದೇವೆ. 10 ತಿಂಗಳ ಚಿನ್ನದ ಸ್ಕೀಮ್ ವ್ಯವಸ್ಥೆಯೂ ಇದೆ ಎಂದು ಮಾಹಿತಿ ನೀಡಿದರು.

ತನಿಷ್ಕ್ ನ ಗ್ರಾಹಕರಾದ ರಾಜೇಶ್ ಅವರು ಮಾತನಾಡಿ, ಟೈಟನ್ ಎಂದರೆ ಟಾಟಾ, ಟಾಟಾ ಎಂದರೆ ನಂಬಿಕೆ ಪಾರದರ್ಶಕತೆ. ನಮ್ಮ ಕುಟುಂಬವು ಸುಮಾರು 15 ವರ್ಷದಿಂದ ಟೈಟನ್‍ನ ಖಾಯಂ ಗ್ರಾಹಕರಾಗಿದ್ದು, ಇಲ್ಲಿಗೆ ಭೇಟಿ ನೀಡಿದಾಗ ಗುಣಮಟ್ಟದ ಬಗ್ಗೆ ಯಾವುದೇ ಸಂದೇಹಗಳಿರುವುದಿಲ್ಲ ಎಂದರು.

ಗ್ರಾಹಕರಾದ ನಯನ ರಾಸ್ತೋಗಿ ಅವರು ಮಾತನಾಡಿ, ಹಲವಾರು ವರ್ಷಗಳಿಂದ ನಾವು ತನಿಷ್ಕ್‍ನ ಗ್ರಾಹಕರಾಗಿದ್ದು, ಇಲ್ಲಿನ ಆಭರಣಗಳ ವಿನ್ಯಾಸ ಮತ್ತು ಗ್ರಾಹಕರಿಗೆ ನೀಡುವ ಸೇವೆ ನಮಗೆ ಖುಷಿ ನೀಡಿದೆ ಎಂದರು.

ಈ ಸಂದರ್ಭ ತನಿಷ್ಕ್‍ನ ಏರಿಯಾ ಬಿಸಿನೆಸ್ ಮ್ಯಾನೇಜರ್ ಸಂದೇಶ್ ಪೈ, ಗ್ರಾಹಕರಾದ ವಿದ್ಯಾ, ಪ್ರೇಮ, ದೀಕ್ಷಿತ್ ಹಾಗೂ ಹಲವಾರು ಗ್ರಾಹಕರು, ಸಿಬ್ಬಂದಿಗಳೂ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments