ಮೂಡುಬಿದರೆ: ಉದ್ಯಮಿ ರಾಜು ಕೆ. ನಿಧನ

ಮೂಡುಬಿದಿರೆ:  ಗಾಯಕ, ಉದ್ಯಮಿ ರಾಜು ಕೆ. (53) ಮೈಸೂರಿನ ತನ್ನ ನಿವಾಸದಲ್ಲಿ ರವಿವಾರ ನಿಧನ ಹೊಂದಿದರು. ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಹೊನ್ನೆಲೆಗೆರೆ ಗ್ರಾಮದಲ್ಲಿ ಹುಟ್ಟಿದ  ರಾಜು ಮೂಡುಬಿದಿರೆಯ ಮೈನ್ ಶಾಲೆ,  ಜೈನ್ ಹೈಸ್ಕೂಲ್ ನಲ್ಲಿ ಓದಿ ಧವಲ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರೈಸಿದ್ದರು.ಜಾನಪದ, ಭಾವಗೀತೆ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದ ಅವರು ಐ.ಕೆ. ಬೊಳುವಾರು ನಿರ್ದೇಶಿತ ಚದುರಂಗ ಮೂಡುಬಿದಿರೆ ತಂಡದಲ್ಲಿ ಐ.ಕೆ. ಬೊಳುವಾರು ನಿರ್ದೇಶನದ ಮಕ್ಕಳ ನಾಟಕ, ಬೀದಿ ನಾಟಕ, ರೂಪಕಗಳಲ್ಲಿ ಗಾಯಕರಾಗಿ ಮಿಂಚಿದ್ದರು.  ಮೊದಲು ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ಬಳಿಕ

ಮೈಸೂರಿನಲ್ಲಿ ಗೃಹೋಪಯೋಗಿ ಉಪಕರಣಗಳ ಡೀಲರ್ ಆಗಿದ್ದರು. ಅವರ ನಿಧನಕ್ಕೆ ರಂಗಕರ್ಮಿ ಐ.ಕೆ. ಬೊಳುವಾರು, ಚದುರಂಗ ಶಾಸ್ತ್ರೀಯ ಸಂಗೀತ ಶಾಲೆಯ ಸಂಚಾಲಕ ಧನಂಜಯ ಮೂಡುಬಿದಿರೆ,  ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಂಚಾಲಕ ಸಂತೋಷ್ ಕುಮಾರ್, ಗಾಯಕ ಮೋಹನ್ ಮೂಡುಬಿದಿರೆ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.