HomeFresh Newsಮೂಡುಬಿದರೆ ಆಳ್ವಾಸ್ ನಲ್ಲಿ ಜುಲೈ 14 ರಿಂದ 16ರವರೆಗೆ ಹಲಸು ವೈವಿಧ್ಯಮಯ ಹಣ್ಣುಗಳ ಮೇಳ

ಮೂಡುಬಿದರೆ ಆಳ್ವಾಸ್ ನಲ್ಲಿ ಜುಲೈ 14 ರಿಂದ 16ರವರೆಗೆ ಹಲಸು ವೈವಿಧ್ಯಮಯ ಹಣ್ಣುಗಳ ಮೇಳ

ಮೂಡುಬಿದಿರೆ : ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ “ಸಮೃದ್ಧಿ” ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳ ಜುಲೈ 14 ರಿಂದ 16 ರವರೆಗೆ ವಿದ್ಯಾಗಿರಿಯ ಕೆ ಅಮರನಾಥಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಮಹಾಮೇಳದಲ್ಲಿ 150 ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ದೇಶಿಯ ಮತ್ತು ವಿದೇಶಿಯ ಹಣ್ಣುಗಳ ಗಿಡಗಳ ಮಾರಾಟದ 15 ಕ್ಕು ಹೆಚ್ಚು ನರ್ಸರಿಗಳು ಪಾಲ್ಗೊಳ್ಳಲಿದೆ. ಅಲ್ಲದೆ ಅಪರೂಪದ ಚಂದ್ರಹಲಸು, ಮಂಕಾಲೆರೆಡ್, ಹಾಗೂ ಸಿದ್ದು ಹಲಸಿನ ತಳಿಗಳ ಸಹಿತ ಸ್ಥಳೀಯ ತಳಿಗಳು ಇಲ್ಲಿ ಪ್ರದರ್ಶನಕ್ಕಿವೆ. ರಾಮನಗರ, ದೇವನಳ್ಳಿ, ತುಮಕೂರು, ಸಖರಾಯಪಟ್ಟಣ ಮತ್ತಿತರ ಜಿಲ್ಲೆಗಳ ವೈವಿಧ್ಯಮಯ ತಳಿಗಳ ಹಲಸಿನ ಹಣ್ಣುಗಳ ಬೃಹತ್ ಸಂಗ್ರಹದ ಪ್ರದರ್ಶನ ನಡೆಯಲಿದೆ.

ಅಲ್ಲದೆ ರಂಬೂಟನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ , ಬಟರ್ ಪ್ರೂಟ್, ಸಹಿತ ವಿದೇಶಿ ಹಣ್ಣುಗಳ ಪ್ರದರ್ಶನ ಅಲ್ಲದೆ ಹಣ್ಣು ತರಕಾರಿಗಳಿಂದ ತಯಾರಾದ ಸಿದ್ದ ತಿನಿಸುಗಳ ಬೃಹತ್ ಸಂಗ್ರಾಹ, ಜೈನ , ಬ್ರಾಹ್ಮಣ, ಗೌಡ ಸಾರಸ್ವತ ಸಮುದಾಯಗಳ ವಿಶೇಷ ಪ್ರಾದೇಶಿಕ ತಿಂಡಿ ತಿನಿಸುಗಳು ಅಲಂಕಾರಿಕ ವಸ್ತುಗಳು, ಮಣ್ಣಿನ ಮಡಿಕೆಗಳು, ಗೃಹ ಉಪಯೋಗಿ ವಸ್ತುಗಳ ಮೇಳ, ಆಯುರ್ವೇದ , ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷತೆ ಮತ್ತು ಮಾಹಿತಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ನವವಿಧ ಸಿರಿಧಾನ್ಯಗಳ ಬೃಹತ್ ಸಂಗ್ರಹವಿದೆ.

ಸುದ್ದಿಗೋಷ್ಟಿಯಲ್ಲಿ ಮಹಾಮೇಳ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments