ನಂದಾವರ ಅಷ್ಟಬಂಧ ಬ್ರಹ್ಮಕಲಶೋತ್ಸವ :ಅದ್ಧೂರಿಯಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ಇತಿಹಾಸ ಪ್ರಸಿದ್ದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಡಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿ ಹೊರೆಕಾಣಿಕೆ ಮೆರವಣಿಗೆಗೆ ಮಾರ್ನಬೈಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು.

nandavara temple

ಮಾರ್ನಬೈಲು ಮುಖ್ಯ ರಸ್ತೆಯ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದ ಮೆರವಣಿಗೆಗೆ ಗೊಂಬೆ ಕುಣಿತ, ಚೆಂಡೆ ವಾದನ, ಕೊಂಬು ವಾದ್ಯ ವಾದನ, ತಾಲೀಮ್ ತಂಡ, ಭಜನಾ ತಂಡ, ಪೂರ್ಣ ಕುಂಭ ಕಲಶ ಹೊತ್ತ ಮಹಿಳೆಯರ ತಂಡ , ಸುಡು ಮದ್ದು ಪ್ರದರ್ಶನ ವಿಶೇಷ ಮೆರುಗು ನೀಡಿತು.

nandavara temple
nandavara temple

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಶ್ ಜಿ.ಶೆಟ್ಟಿ ದಳಂದಿಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಕಾರ್ಯಧ್ಯಕ್ಷ ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ., ಪ್ರಧಾನ ಅರ್ಚಕ ಮಹೇಶ್ ಭಟ್, ಹಸಿರುವಾಣಿ ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಯಶವಂತ ಪೂಜಾರಿ ದೇರಾಜೆಗುತ್ತು, ಭಾಸ್ಕರಚ ಕಂಪದಕೋಡಿ, ವಿವಿಧ ಸಮಿತಿ ಪ್ರಮುಖರಾದ ಎಂ. ಸುಬ್ರಹ್ಮಣ್ಯ ಭಟ್, ಎಂ. ಸೂರ್ಯನಾರಾಯಣ ಭಟ್, ದೇವು ಶೆಟ್ಟಿ, ರವೀಂದ್ರ ಕಂಬಳಿ, ಜಯಶಂಕರ ಬಾಸ್ರಿತ್ತಾಯ, ದಾಮೋದರ ಬಿ.ಎಂ. ರಾಮ ಪ್ರಸಾದ್ ಪೂಂಜ, ಅರುಣ್ ಕುಮಾರ್, ಎಂ. ಉಮೇಶ್, ಸಂದೀಪ್ ಕುಮಾರ್, ರೂಪೇಶ್ ಆಚಾರ್ಯ, ಸತೀಶ್ ಗೌಡ, ಲೋಹಿತ್ ಪಣೋಲಿಬೈಲು, ಸಚಿನ್ ಮೆಲ್ಕಾರ್, ನವೀನ್ ಸುವರ್ಣ, ಕವಿತಾ ವಸಂತ್, ಜಯಶ್ರೀ ಅಶೋಕ್, ದೇವಪ್ಪ ನಾಯ್ಕ ದಾಸರಗುಡ್ಡೆ, ಮೋಹನದಾಸ ಹೆಗ್ಡೆ, ಗಣೇಶ್ ಕಾರಾಜೆ, ಮಹಾಬಲ ಕೊಟ್ಟಾರಿ, ಸುಧಾಕರ ಆಚಾರ್ಯ, ಶ್ರೀಕಾಂತ್ ಶೆಟ್ಟಿ, ಶ್ರೀನಿವಾಸ ಭಟ್, ರತ್ನಾಕರ ಪೂಜಾರಿ, ಅಶೋಕ್ ಗಟ್ಟಿ ಕಟ್ಲೆಮಾರ್, ಗಿರೀಶ್ ಕುಮಾರ್ ಕುಕ್ಕುದಕಟ್ಟೆ, ಸುರೇಶ್ ಬಂಗೇರ, ಕಿಶನ್ ಶೇಣನ, ಎನ್. ಶಿವ ಶಂಕರ್, ಎನ್.ಕೆ.ಶಿವ, ಜಗದೀಶ ಐತಾಳ್, ಪ್ರವೀಣ್ ಶೆಟ್ಟಿ, ನಾಗೇಶ್ ಕುಲಾಲ್ , ಮನೋಜ್ ಕಟ್ಟೆಮಾರ್, ದೇವಿಪ್ರಸಾದ್ ಪೂಂಜ, ಬಿ.ಕೆ. ರಾಜ್, ದಿನೇಶ್ ಅಮ್ಟೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.