HomeFresh Newsಎನ್‍ಐಟಿಕೆ ಟೋಲ್‍ಗೇಟ್ ಬಳಿ ಭೀಕರ ಅಪಘಾತ : ವಿದ್ಯಾರ್ಥಿ ಮೃತ್ಯು

ಎನ್‍ಐಟಿಕೆ ಟೋಲ್‍ಗೇಟ್ ಬಳಿ ಭೀಕರ ಅಪಘಾತ : ವಿದ್ಯಾರ್ಥಿ ಮೃತ್ಯು

ಸುರತ್ಕಲ್: ಪೋಲೀಸ್ ಠಾಣಾ ವ್ಯಾಪ್ತಿಯ ಎನ್ ಐಟಿಕೆ ಟೋಲ್ ಗೇಟ್ ಬಳಿ ತಡರಾತ್ರಿ 1 ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಮಡಿಕೇರಿ ಸೋಮವಾರಪೇಟೆ ಬಿಟಿ ಕಟ್ಟೆ ಮೂಲದ ಶಶಾಂಕ್(21) ಎಂದು ಗುರುತಿಸಲಾಗಿದೆ.

ಶಶಾಂಕ್ ತನ್ನ ಸ್ನೇಹಿತನ ಜೊತೆ ಹಿಂಬದಿ ಸವಾರನಾಗಿ ಎನ್ ಎಸ್ 200 ಬೈಕ್ ನಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಸುರತ್ಕಲ್ ಕಡೆಯಿಂದ ಮುಕ್ಕ ಕಡೆಗೆ ಹೋಗುತ್ತಿದ್ದಾಗ ಟೋಲ್ ಗೇಟ್ ಎದುರಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಅಪಘಾತಕ್ಕೀಡಾಗಿದೆ. ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಬೈಕ್ ನಿಂದ ಶಶಾಂಕ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದು ಸವಾರ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಬೈಕ್ ಹ್ಯಾಂಡಲ್ ತುಂಡಾಗಿದ್ದು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಎಸಿಪಿ ಗೀತಾ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments