ದೇಶದ ಏಳುನೂರ ಐವತ್ತಾರು ಮೆಡಿಕಲ್ ಕಾಲೇಜುಗಳಲ್ಲಿ ಏಳು ಮೆಡಿಕಲ್ ಕಾಲೇಜುಗಳು ವೈದ್ಯರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ಭತ್ಯೆ ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಎನ್‍ಎಂಸಿ ತಿಳಿಸಿತು.
ಎನ್‍ಎಂಸಿ- ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಏಳುನೂರ ಐವತ್ತಾರು ಮೆಡಿಕಲ್ ಕಾಲೇಜುಗಳಲ್ಲಿ ಏಳು ಮೆಡಿಕಲ್ ಕಾಲೇಜುಗಳು ಟ್ರೈನೀ ವೈದ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ನೀಡುತ್ತಿಲ್ಲ. ಆ ಏಳು ಕಾಲೇಜುಗಳಿಗೆ ಶೋಕಾಸ್ ನೋಟೀಸು ನೀಡಲಾಗಿದೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್, ಪಿ. ಬಿ. ವರಳೆ ಅವರಿದ್ದ ಸುಪ್ರೀಂ ನ್ಯಾಯ ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಕೆಯಾಯಿತು.
756 ಮೆಡಿಕಲ್ ಕಾಲೇಜುಗಳಲ್ಲಿ 573 ಹಳೆಯವಾದರೆ, 176 ಇತ್ತೀಚಿನ ವರುಷಗಳ ಮೆಡಿಕಲ್ ಕಾಲೇಜುಗಳಾಗಿವೆ. ಸ್ವಲ್ಪ ಕಾಲೇಜುಗಳು ಬಂದ್ ಇದ್ದು, ಅವುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ. 562 ಕಾಲೇಜುಗಳು ಮಾತ್ರ ಸ್ನಾತ್ತಕೋತ್ತರ ವೈದ್ಯಕೀಯ ಶಿಕ್ಷಣವನ್ನು ನೀಡುವುದಲ್ಲದೆ, ಸ್ಟೈಪೆಂಟ್ ಇತ್ಯಾದಿಯನ್ನು ಖಚಿತವಾಗಿ ನಿರ್ವಹಿಸುತ್ತಿವೆ. ಈ ಸಂಬಂಧ ಕೋರ್ಟಿನಿಂದ ನೋಡಲ್ ಕೌನ್ಸೆಲ್ ಆಗಿ ವಕೀಲ ಚಾರು ಮಾಥುರ್ ನೇಮಕಗೊಂಡಿದ್ದಾರೆ. ಅಭಿಷೇಕ್ ಯಾದವ್ ಮತ್ತು ಕೆಲವು ವೈದ್ಯ ಪದವೀಧರರು ತರಬೇತಿ ಭತ್ಯೆ ನೀಡದ್ದರ ಬಗೆಗೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ತರಬೇತಿ ಭತ್ಯೆ ನೀಡದ ಏಳು ವೈದ್ಯ ಕಾಲೇಜುಗಳುನೋಟೀಸು ನೀಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ
RELATED ARTICLES

