ದಿನಾಂಕ 31.01.2012 ರಂದು ಕಡಬ ಠಾಣಾ ವ್ಯಾಪ್ತಿಯ ಪುತ್ತೂರು, ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ, ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ, ಕಡಬ ಪೊಲೀಸ್ ಠಾಣೆಯಲ್ಲಿ ಅ. ಕ್ರ : 15/2012, ಕಲಂ : 302.201 R/W 34 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಗಳಾಗಿದ್ದ ಎಂ.ಎನ್ ಅನುಚೇತ್ ಐ.ಪಿ.ಎಸ್ ರವರು, ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ, ಆರೋಪಿತನಾಗಿದ್ದ ಸುಳ್ಯ ಅಜ್ಜವರ ನಿವಾಸಿ ಎನ್. ಎಂ. ಅಬ್ದುಲ್ ಅಜೀಜ್ (30) ಎಂಬಾತನ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿರುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಎ ಪಾಟೀಲ್ ರವರು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.2,೦೦,೦೦೦/- ದಂಡವನ್ನು ಪಾವತಿಸುವಂತೆ ಅದೇಶಿಸಿರುತ್ತದೆ. ಸರ್ಕಾರಿ ಅಭಿಯೋಜಕರಾಗಿದ್ದ ಕೆ.ಪಿ ಯಶೋಧ ರವರು ಮಾನ್ಯ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದಮಂಡನೆ ನಡೆಸಿರುತ್ತಾರೆ.ಅಪರಾಧಿಯು ಶಿಕ್ಷೆ ಪ್ರಕಟವಾದ ಬಳಿಕ ದಸ್ತಗಿರಿಗೆ ಸಿಗದೇ, ತಲೆಮರೆಸಿಕೊಂಡಿದ್ದಾತನನ್ನು ಕಡಬ ಪೊಲೀಸ್ ಉಪನೀರಿಕ್ಷಕರಾದ ಜಂಬುರಾಜ್ ಮಹಾಜನ್ ಮತ್ತು ಠಾಣಾ ಸಿಬ್ಬಂದಿಗಳು ಆಂದ್ರಪ್ರದೇಶದಲ್ಲಿ ದಸ್ತಗಿರಿ ಮಾಡಿ, ದಿನಾಂಕ : 25.04.2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಆಂದ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿಯ ದಸ್ತಗಿರಿ
RELATED ARTICLES
