ಕೊಡಿಯಾಲ ಪಂಚಾಯತ್ ಸಹಯೋಗದೊಂದಿಗೆ ಉಪಬೆಳೆಯಾಗಿ ಕಾಫಿ ಬೆಳೆ ಸಾಧ್ಯತೆ ಕುರಿತು ವಿಚಾರ ಸಂಕಿರಣವನ್ನು ಕೊಡಿಯಾಲದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಾದೇಟೀರ ತಿಮ್ಮಯ್ಯ ಮತ್ತು ಶ್ರೀ ಚಿನ್ನಪ್ಪ ಅವರು ಭಾಗವಹಿಸಿ ಕಾಫಿ ಬೆಳೆ ಬೆಳೆಸುವ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಯಶಸ್ವಿ ಕಾಫಿ ಕೃಷಿಕರಾದ ಪುತ್ತೂರಿನ ಶ್ರೀ ಅಜಿತ್ ಪ್ರಸಾದ್ ರೈ ಹಾಗೂ ಶ್ರೀ ಚಂದ್ರಶೇಖರ ತಾಳ್ತಜೆ ಅವರು ತಮ್ಮ ಕಾಫಿ ಕೃಷಿಯ ಅನುಭವಗಳನ್ನು ಹಂಚಿಕೊಂಡರು. ಅಡಿಕೆ ಬೆಳೆ ಹಳದಿ ರೋಗದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಹಳದಿ ರೋಗ ಬಾಧಿತ ತೋಟಗಳಲ್ಲಿ ವ್ಯವಸ್ಥಿತವಾಗಿ ಕಾಫಿ ಕೃಷಿ ಕೈಗೊಳ್ಳುವ ಕುರಿತು ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಸಂಘಟಿತ ಪ್ರಯತ್ನ ನಡೆಸುವ ಬಗ್ಗೆ ರೈತರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸಲಾಯಿತು.
ಸಂಘದ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ ಪೆರುವಾಜೆ ಸ್ವಾಗತ ಭಾಷಣ ಮಾಡಿದರು. ನಿರ್ದೇಶಕರಾದ ಶ್ರೀಮತಿ ಭಾರತಿ ಕೊಚ್ಚಿ ವಂದಿಸಿದರು. ಸಂಘದ ಸಿಬ್ಬಂದಿ ಶ್ರೀ ವೇದಿತ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಸುಬ್ರಹ್ಮಣ್ಯ ಭಟ್ ನೆಲ್ಯಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಿರ್ದೇಶಕರಾದ ಶ್ರೀ ಐತಪ್ಪ ರೈ ಅಜಿರಂಗಳ, ಶ್ರೀ ಹೊನ್ನಪ್ಪ ಗೌಡ ಆರ್ವಾರ, ಶ್ರೀ ವಾಸುದೇವ ನಾಯಕ್, ಸಂಘದ ಸಿಬ್ಬಂದಿ, ಕೊಡಿಯಾಲ ಪಂಚಾಯತ್ ಸಿಬ್ಬಂದಿ ಹಾಗೂ ಆಸಕ್ತ ಕೃಷಿಕ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಂಪನ್ಮೂಲ ವ್ಯಕ್ತಿಗಳು ಕಾಫಿ ಬೆಳೆ ಬೆಳೆಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರೆ, ಯಶಸ್ವಿ ಕೃಷಿಕರು ತಮ್ಮ ಸಾಧನೆಯ ಹಾದಿಯನ್ನು ವಿವರಿಸಿದರು.
