HomeUncategorizedಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯಾಧ್ಯಕ್ಷರ ಅಧೀಕೃತ ಭೇಟಿ | ಜೇಸಿಐ ಸುಳ್ಯ ಪಯಸ್ವಿನಿ ರಾಷ್ಟ್ರಮಟ್ಟದಲ್ಲಿ...

ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯಾಧ್ಯಕ್ಷರ ಅಧೀಕೃತ ಭೇಟಿ | ಜೇಸಿಐ ಸುಳ್ಯ ಪಯಸ್ವಿನಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯ : ಸಂತೋಷ್ ಶೆಟ್ಟಿ

ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯಾಧ್ಯಕ್ಷರ ಅಧೀಕೃತ ಭೇಟಿ ಕಾರ್ಯಕ್ರಮವನ್ನು ಎ.25ರಂದು ಸಂಚಯ ನಿವಾಸ ಚೂಂತಾರು ಇಲ್ಲಿ ಹಮ್ಮಿಕೊಳ್ಳಲಾಯಿತು.

ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ 15ರ ವಲಯಾಧ್ಯಕ್ಷರಾದ ಜೆ.ಎಪ್.ಎಪ್ ಸಂತೋಷ್ ಶೆಟ್ಟಿ ಘಟಕವನ್ನುದ್ದೇಶಿಸಿ ಪ್ರಶಂಸೆ ವ್ಯಕ್ತಪಡಿಸುತ್ತಾ, ವಲಯದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ 2026ನೇ ಸಾಲಿನ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರ ಮೂರು ತಿಂಗಳ ಕಾರ್ಯ ವೈಖರಿಗಳನ್ನೊಳಗೊಂಡ ಘಟಕದ ಬುಲೇಟಿನ್ ಪಯಸ್ವಿನಿಯನ್ನು ವಲಯಾಧ್ಯಕ್ಷರು ಬಿಡುಗಡೆ ಗೊಳಿಸಿದರು.


ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15ರ ನೇತ್ರಾವತಿ ರೀಜನ್ ಬಿ ಇದರ ವಲಯ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಜಿತೇಶ್ ಪಿರೇರಾ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರು, ಜೇಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷರಾದ ಪಿಪಿಪಿ ಅಶೋಕ್ ಚೂಂತಾರು ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು‌.

ಜೇಸಿ ಹೆಚ್.ಜಿ.ಎಫ್ ಗುರುರಾಜ್ ಅಜ್ಜಾವರ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿ ರವಿಕುಮಾರ್ ಅಕ್ಕೋಜಿಪಾಲ್ ಜೇಸಿವಾಣಿ ವಾಚಿಸಿದರು. ಜೇಸಿ. ವಿನೋದ್ ಮೂಡಗದ್ದೆ ಅಭಿನಂದನಾ ಪತ್ರವನ್ನು ವಾಚಿಸಿದರು. ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ಜೇಸಿ ತಾರಾ ಮಾದವ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments