HomeUncategorizedಬಡವರ ಹಸಿವಿನ ಅರಿವಿಲ್ಲದ ಜನರಿಂದ ಬೀದಿ ವ್ಯಾಪಾರಿಗಳ ಮೇಲಿನ ದಬ್ಬಾಳಿಕೆ ಸಂವಿಧಾನ ವಿರೋಧಿ ಕೃತ್ಯ -...

ಬಡವರ ಹಸಿವಿನ ಅರಿವಿಲ್ಲದ ಜನರಿಂದ ಬೀದಿ ವ್ಯಾಪಾರಿಗಳ ಮೇಲಿನ ದಬ್ಬಾಳಿಕೆ ಸಂವಿಧಾನ ವಿರೋಧಿ ಕೃತ್ಯ – ಮುನೀರ್ ಕಾಟಿಪಳ್ಳ ತೀವ್ರ ಆಕ್ರೋಶ

ಮಂಗಳೂರು : ಬಡವರ ಬದುಕಿನ ಬವಣೆಯ ಅರಿಯದೆ ಬಡ ಬೀದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ ಎಂದು ಸಿಪಿಐಮ್ ದ.ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಬೀದಿಬದಿ ವ್ಯಾಪಾರಿಗಳ ಮೇಲೆ ಮುಂದುವರಿದ ಧಾಳಿ ಖಂಡಿಸಿ, ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶಕ್ಕೆ ಒತ್ತಾಯಿಸಿ, ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ CITU ನೇತೃತ್ವದಲ್ಲಿ ಇಂದು ಆರಂಭಗೊಂಡಿರುವ ಹಗಲು ರಾತ್ರಿ ಧರಣಿ ಸತ್ಯಾಗ್ರಹವನ್ನು
ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯದ ಕೆಲವು ಸಚಿವರು ಹಾಗೂ ಬಡವರ ಹಸಿವಿನ ಆಳ ಅಗಲ ಗೊತ್ತಿಲ್ಲದ ಅಧಿಕಾರಿಗಳು ಯುರೋಪ್ ರಾಷ್ಟ್ರಗಳ ಮಾದರಿಯ ರಸ್ತೆ, ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಾರೆ ಆದರೆ ಯುರೋಪ್ ಮಾದರಿಯಲ್ಲಿ ಇಲ್ಲಿನ ಜನರಿಗೆ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಶೇಕಡಾ 100 ರಷ್ಟು ನೀಡಲಾಗಿದೆ ಇಲ್ಲಿ ಅಂತಹ ಯಾವುದೇ ಪ್ರಯತ್ನವನ್ನು ಮಾಡದೆ ಬಡವರ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಬೇಕು, ಸಂಡೆ ಬಜಾರ್ ವ್ಯಾಪಾರದಲ್ಲಿ ಬಡ ಗ್ರಾಹಕರ ಹಿತಾಸಕ್ತಿಯನ್ನು ಪಾಲಿಕೆ ಗೌರವಿಸಬೇಕು. ಸಂಡೆ ಬಜಾರ್ ವ್ಯಾಪಾರಿಗಳ ಮೇಲೆ ಮತ್ತೆ ದಬ್ಬಾಳಿಕೆ ಮುಂದುವರಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳರವರು ಎಚ್ಚರಿಕೆ ನೀಡಿದರು

ಸಿಐಟಿಯು ಜಿಲ್ಲಾ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ,ಜಯಂತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಸುನಿಲ್ ಕುಮಾರ್ ಬಜಾಲ್,ಬಿ.ಕೆ ಇಮ್ತಿಯಾಜ್,ರಮೇಶ್ ಉಳ್ಳಾಲ್,ರವಿಚಂದ್ರ ಕೊಂಚಾಡಿ, ಜಯಂತ್ ನಾಯ್ಕ್, ಯೋಗೀಶ್ ಜಪ್ಪಿನಮೊಗರು,ಪದ್ಮಾವತಿ ಶೆಟ್ಟಿ ಯವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಧರಣಿ ಸತ್ಯಾಗ್ರಹದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್,ಸಂತೋಷ್ ಆರ್. ಎಸ್,ವಿಜಯ್ ಜೈನ್, ಶಿವಪ್ಪ,ರಿಯಾಜ್ ಮದಕ, ನೌಶಾದ್ ಕಣ್ಣೂರ್, ರಫೀಕ್ ಪಾಂಡೇಶ್ವರ, ಸಿಕಂದರ್ ಬೇಗ್, ಅಶ್ರಫ್, ಪಕೀರ ನಾಯ್ಕ್,ಕಾಜ ಮೊಯ್ದಿನ್,ಶಿವಾನಂದ್,ಪ್ರದೀಪ್,ನಾಗರಾಜ್,ಜ್ಯೋತಿ ಬಾಯಿ, ಲಕ್ಕಮ್ಮ, ಮಂಜುಳಾ,ಹನುಮಂತ ನಾಯ್ಕ,ಮಹೇಶ್ ನಾಯ್ಕ್, ಖಾದರ್ ವಾಮಂಜೂರ್, ಸಿದ್ದವ್ವ, ಸಯ್ಯದ್ ಫಾರುಕ್,ಮಾಜಿ ವಿದ್ಯಾರ್ಥಿ ನಾಯಕ ಹಿದಾಯತುಲ್ಲ ಅಡ್ಡೂರು, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ಯೋಗಿತಾ ಸುವರ್ಣ, ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments